Advertisement

ಇದು ನನ್ನ ಕೊನೆ ಅಧಿವೇಶನ; ಸಂತೋಷದಿಂದ ಹೊರ ಹೋಗುತ್ತಿದ್ದೇನೆ: ಎಸ್‌.ಆರ್‌.ಪಾಟೀಲ

02:20 PM Dec 22, 2021 | Team Udayavani |

ಸುವರ್ಣ ವಿಧಾನಸೌಧ: ವಿಧಾನಪರಿಷತ್‌ ಸದಸ್ಯನಾಗಿ ನನಗೆ ಇದು ಕೊನೆಯ ಅಧಿವೇಶನ, 24 ವರ್ಷಗಳಿಂದ ಸದಸ್ಯನಾಗಿ ಜನರ ಭಾವನೆ ಗಳಿಗೆ ಧ್ವನಿಯಾಗಿ ಕಾರ್ಯನಿರ್ವಹಿಸಿದ್ದೇನೆ, ಪಕ್ಷ ನನಗೆ ವಿಶ್ರಾಂತಿ ನೀಡಿದೆ. ಸಂತೋಷದಿಂದ ಹೊರ ಹೋಗುತ್ತಿದ್ದೇನೆ ಎಂದು ವಿಪಕ್ಷ ನಾಯಕ ಎಸ್‌.ಆರ್‌.ಪಾಟೀಲ ಹೇಳಿದರು.

Advertisement

ವಿಧಾನಪರಿಷತ್‌ನಲ್ಲಿ ಮಾತನಾಡಿದ ಅವರು, ಪಕ್ಷ ನನಗೆ ಎಲ್ಲ ಅವಕಾಶಗಳನ್ನು ನೀಡಿದೆ. ಸಂತಸ ದಿಂದಲೇ ಹೊರಹೋಗುತ್ತಿದ್ದೇನೆ ಎಂದು ತಿಳಿಸಿದರು. 24 ವರ್ಷಗಳ ಹಿಂದೆ ನಾನು ಸದನಕ್ಕೆ ಬಂದಾಗ ಮೊದಲ ಬಾರಿಗೆ ಮಾತನಾಡಿದ್ದೇ ಯುಕೆಪಿ ಯೋಜನೆ ಕುರಿತಾಗಿ ಆದು ನನ್ನ ಬದ್ಧತೆಯಾಗಿದೆ.

ಈಗಲು ನನ್ನ ಮನವಿ ಇಷ್ಟೇ. ಯುಕೆಪಿ-3ನೇ ಹಂತದ ಯೋಜನೆಯಡಿ ನಾಲ್ಕು ಹಂತದಲ್ಲಿ ಭೂ ಸ್ವಾಧೀನಕ್ಕೆ ಸರ್ಕಾರ ಚಿಂತಿಸಿದೆ. ಸಂತ್ರಸ್ತರ ಭಾವನೆಗಳನ್ನು ಅರ್ಥ ಮಾಡಿ ಕೊಂಡು ಒಂದೇ ಬಾರಿಗೆ 524.256 ಮೀಟರ್‌ಗೆ ಎಷ್ಟು ಅಗತ್ಯವೋ ಅಷ್ಟು ಭೂಮಿ ಸ್ವಾಧೀನಪಡಿಸಿಕೊಂಡು ಬಿಡಿ ಎಂಬುದು ನನ್ನ ಮನವಿ ಎಂದು ಭಾವುಕರಾದರು.

24 ವರ್ಷ ಕಾಲ ಮೇಲ್ಮನೆಯಲ್ಲಿ ಕಾಂಗ್ರೆಸ್ ನ್ನು ಪ್ರತಿನಿಧಿಸಿದ್ದ ಪಾಟೀಲ್ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ತಮ್ಮ ಕೊನೆಯ ಅಧಿವೇಶನದ ಸಂದರ್ಭದಲ್ಲೂ ಅವರು ಸಭಾಪತಿ ಹೊರಟ್ಟಿಯವರಿಂದ ಒಂದು ದಿನದ ಮೂಲಕ ಅಮಾನತು ಶಿಕ್ಷೆಗೆ ಒಳಗಾಗಿದ್ದರು. ಹೀಗಾಗಿ ಕೊ‌ನೆಯ ದಿನದವರೆಗೂ ಎಸ್.ಆರ್.ಪಾಟೀಲರು ಪರಿಷತ್ ನಲ್ಲಿ ಹೋರಾಟ ನಡೆಸಿಯೇ ಅವಧಿ ಪೂರ್ಣಗೊಳಿಸಿದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next