Advertisement
ಮಹಾತ್ಮಾ ಗಾಂಧೀಜಿ ಕಂಡಿದ್ದ ಸ್ವದೇಶಿ ಪರಿಕಲ್ಪನೆಯ ಮಾದರಿ ಗ್ರಾಮ ನಮ್ಮಲ್ಲಿ ಇದೆಯಾ?ಹೌದು! ಕೊಪ್ಪಳ ತಾಲೂಕಿನ ಹನುಮನಹಳ್ಳಿ ಎಂಬ ಕುಗ್ರಾಮವೇ ಈ ಮಾದರಿ ಗ್ರಾಮ. ಜಿಲ್ಲಾ ಕೇಂದ್ರದಿಂದ ಸುಮಾರು 12 ಕಿಲೋ ಮೀಟರ್ ದೂರದಲ್ಲಿರುವ ಈ ಪುಟ್ಟ ಗ್ರಾಮವು ಹಲವು ವಿಶೇಷತೆಗಳ ಮೂಲಕ ಗಮನ ಸೆಳೆಯುತ್ತದೆ. ಈ ಗ್ರಾಮವು ತನ್ನದೇ ಆದ ಅಲಿಖೀತ ಸಂಧಾನವೊಂದನ್ನು ಸೃಷ್ಟಿಸಿಕೊಂಡು ಸನ್ಮಾರ್ಗದತ್ತ ಸಾಗುವ ಮೂಲಕ ಗಾಂಧೀಜಿಯವರ ಕನಸನ್ನು ನನಸು ಮಾಡಿದೆ.
Related Articles
Advertisement
ಸುಮಾರು ಹನ್ನೆರಡು ವರ್ಷಗಳ ಹಿಂದೆ ಗ್ರಾಮದ ಹಿರಿಯರೆಲ್ಲ ಸೇರಿ ತಮ್ಮ ಗ್ರಾಮದ ವಾಸ್ತವ ಸ್ಥಿತಿಗತಿಗಳನ್ನು ಅವಲೋಕಿಸುತ್ತ ಇರುವಾಗ ಥಟ್ಟನೆ ತಮ್ಮ ಊರಿನ ಹಲವು ಸಮಸ್ಯೆಗಳು ಕಣ್ಣ ಮುಂದೆ ಬಂದವು. ಬೀಡಿ, ಸಿಗರೇಟು, ಮದ್ಯಗಳಿಂದ ಜನರು ತತ್ತರಿಸಿ ಹೋಗುತ್ತಿರುವುದು, ಗ್ರಾಮದ ಯುವ ಜನತೆ ದುಶ್ಚಟಗಳಿಗೆ ಅಂಟಿಕೊಂಡು ಆರೋಗ್ಯ ಹಾಳು ಮಾಡಿಕೊಳ್ಳುತ್ತಿರುವುದು ಬಹುದೊಡ್ಡ ಸಮಸ್ಯೆಯಾಗಿ ಕಂಡಿತು. ಕೂಡಲೇ ಏನಾದರೂ ಮಾಡಿ ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕೆಂದು ಯೋಚನೆ ಮಾಡಿದ್ದರ ಫಲವೇ ಮದ್ಯ, ಸಿಗರೇಟು ನಿಷಿದ್ಧ ಯೋಜನೆ ಜಾರಿ ಮಾಡಿದ್ದು. ಈ ನಿರ್ಧಾರಕ್ಕೆ ಗ್ರಾಮದ ಪ್ರತಿಯೊಬ್ಬರೂ ಸಮ್ಮತಿ ಸೂಚಿಸಿದರು.
“ನಮ್ಮೂರ್‍ನಾಗ ಬೀಡಿ, ಸಿಗರೇಟು, ಎಣ್ಣೆ ಇಂಥಾವೇನೂ ಮಾರಂಗಿಲಿÅ. ಹಂಗೇನಾದ್ರೂ ಮಾಡಿದ್ರ ಊರ ಪಂಚಾತಿ ಸೇರಿÕ ಅವ್ರಿಗೆ ದಂಡ ಹಾಕ್ತಿವಿ. ಕುಡಿಯೋದು, ಸೇದೋದು ಮಾಡಿ ಊರಾಗಿನ ಹುಡುಗ್ರೆಲ್ಲ ಅಡ್ಡದಾರಿ ಹಿಡಿಬಾರ್ಧು ಅಂತ ರಿಯರೆಲ್ಲ ಸೇರಿ ಈ ತೀರ್ಮಾನಕ್ಕ ಬಂದಿದಾರೀ. ನಮ್ಮೂರ್‍ನಾಗ ಜಗಳ, ತಂಟೆ, ತಕರಾರಿಲ್ದ ಆರಾಮಾದೀವಿ. ಏನೇ ಕಾರ್ಯಕ್ರಮ ಬಂದ್ರೂಎಲ್ರೂ ಸೇರಿ ಒಗ್ಗಟ್ಟಿನಿಂದ ಮಾಡ್ತೀವ್ರಿà ಅಂತಾರೆ ಗ್ರಾಮಸ್ಥ ದುರುಗಪ್ಪ ಮುರಡಿ. ಗ್ರಾಮದಲ್ಲಿ ಯಾವುದೇ ಹಬ್ಬ, ಹರಿದಿನಗಳು ನಡೆದರೆ ಎಲ್ಲ ಜನಾಂಗದವರೂ ಸರಿ ಸಮನಾಗಿ ಹಣ ವಿನಿಯೋಗಿಸುತ್ತಾರೆ. ಅಷ್ಟೇ ಅಲ್ಲ, ಆ ಊರಿಗೆ ಸಂಬಂಧಿಸಿದ ಜಾತ್ರೆ, ದೇವರ ಕಾರ್ಯಗಳಲ್ಲಿ ಎಲ್ಲ ಜನಾಂಗದವರೂ ಭಾಗಿಯಾಗಿ ಒಂದೊಂದು ಸಮುದಾಯದವರು ಒಂದೊಂದು ಜವಾಬ್ದಾರಿ ಹಂಚಿಕೆ ಮಾಡಿಕೊಂಡು ಯೋಜನೆ ರೂಪಿಸಿಕೊಂಡು ಸೌಹಾರ್ದತೆಯಿಂದ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುತ್ತಾರೆ. ಅಂದಿನಿಂದ ಇಂದಿನವರೆಗೂ ಗ್ರಾಮಸ್ಥರೆಲ್ಲರೂ ತಮ್ಮ ಈ ತೀರ್ಮಾನಕ್ಕೆ ಬದ್ಧರಾಗಿ ಅದನ್ನು ಪಾಲಿಸುತ್ತಾ ಬಂದಿರುವುದು ವಿಶೇಷ.
ಆ ಗ್ರಾಮದಲ್ಲಿ ಕೋಮು ದಳ್ಳುರಿಗಳಿಲ್ಲ, ಕೋಮುಧೆÌàಷಗಳಿಲ್ಲ. ಅಲ್ಲಿರುವುದು ಶಾಂತಿ, ಸೌಹಾರ್ದತೆ, ಸಮನ್ವಯತೆ ಮತ್ತು ಸಾಕಾರತೆ. ಸುಸಜ್ಜಿತ ರಸ್ತೆ, ಆರೋಗ್ಯ ಸೇರಿದಂತೆ ಕೆಲವು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದರೂ ಈ ಗ್ರಾಮವು ಹಲವು ಜೀವನ ಮೌಲ್ಯಗಳನ್ನು ಬಿಂಬಿಸುವ ಸನ್ಮಾರ್ಗಗಳನ್ನು ರೂಪಿಸಿಕೊಳ್ಳುವಲ್ಲಿ ಶ್ರೀಮಂತವಾಗಿದೆ. ಒಂದು ಗ್ರಾಮವು ಮಾದರಿ ಗ್ರಾಮ ಎನಿಸಿಕೊಳ್ಳಬೇಕೆಂದರೆ ಇಷ್ಟು ಸಾಕಲ್ಲವೇ? ಸೋಮಲಿಂಗಪ್ಪ ಬೆಣ್ಣಿ ಗುಳದಳ್ಳಿ ಚಿತ್ರಗಳು- ದೇವರಾಜ ಮೇಟಿ