Advertisement
ಕರಾವಳಿಯ ಮೊದಲ ಸಿಎಂ !ಇದೇ ಕ್ಷೇತ್ರದಿಂದ ಗೆದ್ದು ಸಚಿವರಾದವರು ಕಾಂಗ್ರೆಸ್‌ನ ಡಾ| ಎಂ. ವೀರಪ್ಪ ಮೊಯಿಲಿಯವರು. 1972ರಲ್ಲಿ ಮೊಲಿಯವರು ಶಾಸಕರಾದರು. 1974ರಲ್ಲಿ ದೇವರಾಜು ಅರಸು ಮಂತ್ರಿಮಂಡಲ ಸೇರಿ ಸಣ್ಣ ಕೈಗಾರಿಕೆ ಸಚಿವರಾದರು. ಸತತವಾಗಿ ಗೆದ್ದು ಬಂದ ಅವರು ಮುಂದೆ ಶಿಕ್ಷಣ, ವಿತ್ತ, ಕಾನೂನು ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. 1982ರಲ್ಲಿ ವಿಧಾನಸಭೆಯ ವಿಪಕ್ಷ ನಾಯಕರಾಗಿದ್ದರು. 1992ರಲ್ಲಿ ಮುಖ್ಯಮಂತ್ರಿ ಅರಸಿ ಬಂದಿತ್ತು. ಆ ಮೂಲಕ ಕರಾವಳಿಯಿಂದ ಮೊದಲ ಬಾರಿ ಮುಖ್ಯಮಂತ್ರಿಯಾದ ಕೀರ್ತಿ ಇವರ ಪಾಲಿಗೆ ಸಲ್ಲುತ್ತದೆ.