Advertisement
ವಿಚಿತ್ರ ಹುತ್ತಗಳು: ಈ ಮನೆಯ ಹಿನ್ನೆಲೆಯೆ ವಿಚಿತ್ರವಾಗಿದೆ.ಅಂದಾಜು ನೂರು ವರ್ಷಗಳ ಇತಿಹಾಸ ಹೊಂದಿದೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು. ಕೆಲವು ವರ್ಷಗಳ ಹಿಂದೆ ಈ ಮನೆಯಲ್ಲಿ ಗೌರಿಯವರ ಕುಟುಂಬದವರು ವಾಸಿಸುತ್ತಿದ್ದರು. ಪ್ರಾರಂಭದಲ್ಲಿ ಮನೆಯ ಒಂದು ಕೋಣೆಯಲ್ಲಿ ಚಿಕ್ಕದಾದ ಹುತ್ತ ಬೆಳೆಯಲು ಪ್ರಾರಂಭವಾಯಿತು.ಬಳಿಕ ಹುತ್ತದ ಮಣ್ಣನ್ನು ತೆರವುಗೊಳಿಸಿದಂತೆ ದಿನದಿಂದ ದಿನಕ್ಕೆ ಹುತ್ತದ ವಿಸ್ತಾರ ಅಧಿಕವಾಗತೊಡಗಿತು. ಕಾಲಕ್ರಮೇಣ ಸಂಪೂರ್ಣ ಮನೆ ಹುತ್ತದಿಂದಾವೃತವಾಗಲು ಪ್ರಾರಂಭವಾಯಿತು. ಈ ಕುರಿತು ಪುರೋಹಿತರಲ್ಲಿ ವಿಚಾರಿಸಿದಾಗ ಇದು ನಾಗನಹುತ್ತ ಎಂದು ಹೇಳಿದರು. ಬಳಿಕ ಈ ಕುಟುಂಬದವರು ಮನೆಯನ್ನು ತೊರೆದು ಬೇರೆ ಮನೆ ನಿರ್ಮಿಸಿಕೊಂಡಿದ್ದಾರೆ. ಈಗ ಮನೆ ಸಂಪೂರ್ಣ ಪಾಳು ಬಿದ್ದಿರುವ ಪರಿಣಾಮ ಒಳಗಡೆ ಯಾರು ಹೋಗುವುದಿಲ್ಲ.ಆದರೆ ಪ್ರತಿ ನಾಗರಪಂಚಮಿ ದಿನದಂದು ಮನೆಯ ಹುತ್ತಗಳಿಗೆ ಪೂಜೆ ಮಾಡಲಾಗುತ್ತದೆ. ಸಂಪೂರ್ಣ ಮನೆಯ ಗೋಡೆಗಳು ಹುತ್ತದಿಂದ ಆವೃತವಾಗಿದೆ.ಒಟ್ಟಾರೆಯಾಗಿ ನಾವೆಷ್ಟೆ ಅಭಿವೃದ್ಧಿ ಸಾಧಿಸಿದ್ದೇವೆ ಎಂದರು ಸಹ ದೈವ ದೇವರುಗಳ ಪವಾಡದೆದುರು ಕೆಲವು ವಿಷಯಗಳಿಗೆ ಉತ್ತರ ಸಿಗದ ಪ್ರಶ್ನೆಯಾಗಿಯೇ ಉಳಿಯುತ್ತದೆ ಎನ್ನುವುದಕ್ಕೆ ಈ ಹುತ್ತದ ಮನೆ ಸಾಕ್ಷಿಯಾಗಿದೆ. Advertisement
ಹೀಗೊಂದು ಹುತ್ತದ ಮನೆ…
08:45 AM Jul 29, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.