Advertisement

ರಾಜ್ಯ ಸರ್ಕಾರ ಹೆಣದ ಮೇಲೆ ಹಣ ಮಾಡಲು ಹೊರಟಿದೆ: ಇದು ಭ್ರಷ್ಟಾಚಾರದ ಸರ್ಕಾರ: ಡಿಕೆಶಿ

02:07 PM Jul 23, 2020 | keerthan |

ಬೆಂಗಳೂರು: ಕೋವಿಡ್-19 ವಿಚಾರದಲ್ಲಿ ಸರ್ಕಾರ ನಮ್ಮ ಬಳಿ ಸಹಕಾರ ಕೇಳಿದ್ದಾರೆ. ನಾವು ಎಲ್ಲ ರೀತಿಯ ಸಹಕಾರ ನೀಡಿದ್ದೇವೆ. ಆದರೆ ಈ ಸರ್ಕಾರ ಹೆಣದ ಮೇಲೆ ಹಣ ಮಾಡಲು ಹೊರಟಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆರೋಪಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಒಂಬತ್ತು ಜನ ಮಂತ್ರಿಗಳು ಸೇರಿ ಏನು ಮಾಡುತ್ತಿದ್ದಾರೆ. ಒಬ್ಬ ಮಂತ್ರಿಯೂ ಆಸ್ಪತ್ರೆಗೆ ಹೋಗಲಿಲ್ಲ. ರೋಗಕ್ಕೆ ತುತ್ತಾದವರಿಗೆ ಧೈರ್ಯ ತುಂಬಲಿಲ್ಲ. ಸತ್ತವರನ್ನು ಕೀಳಾಗಿ ನೋಡಿಕೊಂದ್ದೀರಿ. ಬಿಜೆಪಿ ಸರ್ಕಾರದವರು ಕೋವಿಡ್ ಸೋಂಕು ಹರಡಿಸುವುದರ ಜೊತೆಗೆ ಭ್ರಷ್ಟಾಚಾರದ ಸೋಂಕು ಹಂಚಿದರು ಎಂದು ಆರೋಪಿಸಿದರು.

ಈ ಸರ್ಕಾರಕ್ಕೆ ಯಾವುದೇ ಗುರಿ ಇಲ್ಲ. ಇದು ಕೇವಲ ಭ್ರಷ್ಟಾಚಾರದ ಸರ್ಕಾರ. ಆಹಾರದ ಕಿಟ್ ಗಳ ಮೇಲೆ ಹೆಸರು ಹಾಕಿಕೊಂಡು ಹಂಚಿದಾರೆ. ಕಾರ್ಮಿಕರಿಗೆ 1200 ರೂ ಕೊಟ್ಟು ಊಟ ನೀಡಿದ್ದಾರೆ. ಇದನ್ನು ಯಾವ ಫೈವ್ ಸ್ಟಾರ್ ಹೋಟೆಲ್ ನಿಂದ ಊಟ ಕಳಿಸಿದ್ದೀರಿ ಎಂದು ಟೀಕಿಸಿದರು.

ಕಾರ್ಮಿಕರನ್ನು ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ. ಸೋಂಕು ಕಂಡುಬಂದು 110 ದಿನ ಆದ ಮೇಲೆ ಖಾಸಗಿ ಆಸ್ಪತ್ರೆಯವರನ್ನು ಕರೆದು ಮಾತನಾಡುತ್ತಿದ್ದಾರೆ. ಹೋಟೆಲ್ ಉದ್ಯಮದವರು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ.  ಶಿಕ್ಷಣ ವ್ಯವಸ್ಥೆಯ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ವೃತ್ತಿಪರರಿಗೆ 5000 ರೂ. ಕೊಡುವುದಾಗಿ ಹೇಳಿದ್ದರು. ಶೆ 10 ರಷ್ಟು ಜನರಿಗೂ ಅದು ತಲುಪಿಲ್ಲ. ಆಶಾ ಕಾರ್ಯಕರ್ತೆಯರಿಗೆ ಸಂಬಳ ಕೊಡಲು ಆಗುತ್ತಿಲ್ಲ. ಅವರನ್ನು ಕರೆದು ಮಾತನಾಡಲು ಆಗುತ್ತಿಲ್ಲ. ಪೌರ ಕಾರ್ಮಿಕರಿಗೆ ಜೀವನದ ರಕ್ಷಣೆಯಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಆರೋಪಗಳ ಸುರಿಮಳೆಗೈದರು.

ಇದನ್ನೂ ಓದಿ: ಕೋವಿಡ್ ಉಪಕರಣ ಖರೀದಿಯಲ್ಲಿ ರಾಜ್ಯ ಸರ್ಕಾರದಿಂದ 2000 ಕೋಟಿ ರೂ ಅವ್ಯವಹಾರ: ಸಿದ್ದರಾಮಯ್ಯ

Advertisement

ನೀವು ಯಾವುದೇ ಅವ್ಯಹಾರ ಮಾಡಿಲ್ಲ ಎಂದಾದರೆ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಸಭೆ ಮಾಡಲು, ತಪಾಸಣೆ ಮಾಡಲು ಅವಕಾಶ ಕೊಡಿ. ಅದಕ್ಕೂ ಅನುಮತಿ ನೀಡಲು ನಿಮ್ಮ ಮನಸ್ಸು ಒಪ್ಪುತ್ತಿಲ್ಲವೇ ಎಂದು ಪ್ರಶ್ನಿಸಿದರು.

21 ದಿನದಲ್ಲಿ ಕೋವಿಡ್-19 ಯುದ್ಧ ಗೆಲ್ಲುತ್ತೇವೆ ಎಂದು ಹೇಳಿದ್ದಿರಿ. ಈಗ 121 ದಿನ ಆಗಿದೆ. ಇದನ್ನು ಆಧುನಿಕ ಭಾರತದ ಕೌರವರ ಲೂಟಿ ಅಂತ ಕರೆಯಬೇಕೆ? ಇಡೀ ದೇಶದಲ್ಲಿ ಕರ್ನಾಟಕ ಕಪ್ಪು ಚುಕ್ಕೆಯಾಗಿದೆ ಎಂದು ಡಿಕೆಶಿ ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next