Advertisement

ಚುನಾವಣೆ ವೇಳೆ ಈ ರೀತಿಯ ಗಿಮಿಕ್ ಕಾಂಗ್ರೆಸ್ ಗೆ ರಕ್ತಗತ : ಸಚಿವ ಅಶೋಕ್

02:00 PM May 05, 2022 | Team Udayavani |

ಬೆಂಗಳೂರು: ಚುನಾವಣೆ ವೇಳೆ ಈ ರೀತಿಯ ಗಿಮಿಕ್ ಕಾಂಗ್ರೆಸ್ ಗೆ ರಕ್ತಗತ ಎಂದು ಕಂದಾಯ ಸಚಿವ ಆರ್. ಅಶೋಕ್ ಕಿಡಿ ಕಾರಿದ್ದಾರೆ.

Advertisement

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್ ಐ ಹಗರಣ ಕಂಡು ಹಿಡಿದಿದ್ದೇ ಗೃಹ ಸಚಿವರು, ಕಾಂಗ್ರೆಸ್ ಗೃಹಸಚಿವರನ್ನು ಅಭಿನಂದಿಸಬೇಕಿತ್ತು. ಏಕಾಏಕಿ ಈಗ ಪ್ರಕರಣದಲ್ಲಿ ಉತ್ತರ ಕರ್ನಾಟಕದಲ್ಲಿ ಓಡಾಡುತ್ತಿದ್ದುದನ್ನು ಬೆಂಗಳೂರಿಗೆ ತಂದು ಅಶ್ವತ್ಥ್ ನಾರಾಯಣ್ ಮೇಲೆ ಅರೋಪ ಮಾಡಿದ್ದಾರೆ. ಯಾವುದೇ ದಾಖಲೆ ಇಲ್ಲದೇ ಸುಳ್ಳು ಆರೋಪ ಮಾಡಿದ್ದಾರೆ ಎಂದರು

ಹಿಂದೆ ಬಿಟ್ ಕಾಯಿನ್ ನಲ್ಲೂ ಹೀಗೆ ಆರೋಪ ಮಾಡಿ ಝೀರೋ ಆಯ್ತು. ಕಾಂಗ್ರೆಸ್ ಸಂತೆ ಭಾಷಣ ಬಿಟ್ಟು ದಾಖಲೆ ಇದ್ದರೆ ಕೊಡಲಿ.ಚುನಾವಣಾ ಗಿಮಿಕ್ ಮಾಡಲು ಅವರಿಗೆ ಇನ್ನೂ ಸಮಯ ಇದೆ. ನಿಮ್ಮ ತಟ್ಟೆಯಲ್ಲಿ ಕತ್ತೆ ಸತ್ತು ಬಿದ್ದಿರುವಾಗ ಬಿಜೆಪಿ ತಟ್ಟೆಯಲ್ಲಿ ನೊಣ ಬಿದ್ದಿದೆ ಅಂತ ಹೇಳಲು ಬರಬೇಡಿ. ಡಬಲ್ ಇಂಜಿನ್ ಭಯದಿಂದ ಕಾಂಗ್ರೆಸ್ ಈ ರೀತಿ ಮಾಡುತ್ತಿದೆ ಎಂದರು.

ಇದನ್ನೂ ಓದಿ : ವಿಶ್ವಮಾನವ, ಪಿತಾಮಹನ ಕಾಲದಲ್ಲೂ ಭ್ರಷ್ಟಾಚಾರ : ಡಿ.ಕೆ.ಶಿವಕುಮಾರ್ ವ್ಯಂಗ್ಯ

ಸಿಎಂ ಆಗುವುದೆಲ್ಲಾ ಪಾರ್ಟಿ ತೀರ್ಮಾನ ಮಾಡುತ್ತದೆ. ಅಶ್ವತ್ಥ್ ನಾರಾಯಣ ಎಲ್ಲೂ ತಾನು ಸಿಎಂ ಆಗುತ್ತೇನೆ ಅಂತ ಹೇಳಿಲ್ಲ. ಡಿ.ಕೆ. ಶಿವಕುಮಾರ್ ಹೇಳಿಕೆಯನ್ನು ಅಶ್ವಥ್ ನಾರಾಯಣ ಉಲ್ಲೇಖ ಮಾಡಿದ್ದಾರೆ. ಎಲ್ಲವೂ ಹೊರಗೆ ಬರಲಿ. ಎಷ್ಟೇ ದೊಡ್ಡವರಾಗಿದ್ದವರೂ ಬಿಡುವುದಿಲ್ಲ. ಗೃಹ ಸಚಿವರ ಪಾತ್ರ ಪ್ರಕರಣದಲ್ಲಿ ಇಲ್ಲ ಎಂದರು.

Advertisement

ಸ್ವಪಕ್ಷೀಯರೇ ದಾಖಲೆ ಕೊಟ್ಟಿದ್ದಾರೆ ಎಂಬ ಕುಮಾರಸ್ವಾಮಿ ಅರೋಪಕ್ಕೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಕಾಂಗ್ರೆಸ್ ಗಿಂತ ಸ್ವಲ್ಪ ಮುಂದೆ ಹೋಗಿ ಟೀಕೆ ಮಾಡುತ್ತಿದ್ದಾರೆ. ಸ್ವಲ್ಪ ಅವರ ಪಕ್ಷದಲ್ಲಿ ಏನು ಆಗುತ್ತಿದೆ ಅಂತಾ ನೋಡಿಕೊಳ್ಳಲಿ. ನಮ್ಮ ಪಕ್ಷದ ವಿಚಾರ ನೋಡಿಕೊಳ್ಳಲು ಬಲಾಢ್ಯ ಕೇಂದ್ರದ ನಾಯಕತ್ವ ಇದೆ. ಜೆಡಿಎಸ್, ಕಾಂಗ್ರೆಸ್ ನಲ್ಲಿ ವಂಶದ ನಾಯಕತ್ವ ಇದೆ. ವಂಶದ ನಾಯಕತ್ವದಿಂದ ಬಿಜೆಪಿ ಕಲಿಯಬೇಕಾಗಿಲ್ಲ ಎಂದರು.

ವೈಯಕ್ತಿಕ ದ್ವೇಷಗಳು ರಾಜಕೀಯವಾಗಿ ಒಳ್ಳೆಯದಲ್ಲ. ಸೈದ್ದಾಂತಿಕವಾಗಿ ಹೋರಾಟ ಮಾಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next