Advertisement
ಪಾಕ್ ಕುರಿತ ಸರಕಾರದ ನೀತಿ ವಿಫಲವಾ ಗಿದೆ. ಇದರಿಂದಾಗಿ ಆ ದೇಶ ನಮ್ಮವರನ್ನು ಕೊಲ್ಲುತ್ತಿದೆ ಎಂದು ಟೀಕಿಸಿದರು. ಹೀಗಾಗಿ 56 ಇಂಚಿನ ಎದೆ ಎಲ್ಲಿದೆ ಎಂದು ಮೋದಿಯ ವರನ್ನು ಉದ್ದೇಶಿಸಿ ಪ್ರಶ್ನಿಸಿದರು ಖರ್ಗೆ.
Related Articles
Advertisement
ವಿಪಕ್ಷಗಳ ಆಕ್ರೋಶ: ರಾಜ್ಯಸಭೆ ಕಲಾಪ ಮುಂದೂಡುವುದಕ್ಕೆ ವಿಪಕ್ಷಗಳು ಆಕ್ಷೇಪಿ ಸಿವೆ. ಬೆಳಗ್ಗೆ 11 ಗಂಟೆಗೆ ಸಮಾವೇಶಗೊಂಡಿದ್ದ ಸದನವನ್ನು ಮಧ್ಯಾಹ್ನ 2 ಗಂಟೆವರೆಗೆ ಮುಂದೂ ಡಲಾಗಿತ್ತು. ಸಭಾಪತಿ ವೆಂಕಯ್ಯ ನಾಯ್ಡು ಕ್ರಮದಿಂದ ವಿಚಲಿತರಾದ ಪ್ರತಿಪಕ್ಷ ನಾಯಕ ಗುಲಾಂ ನಬಿ, ಸರ್ಕಾರ ಉದ್ದೇಶಪೂರ್ವಕವಾಗಿಯೇ ಈ ರೀತಿ ಮಾಡುತ್ತಿದೆ. ಪ್ರತಿಪಕ್ಷಗಳ ಧ್ವನಿ ಅಡಗಿಸಲು ಮುಂದಾಗುತ್ತಿದೆ. 1950ರ ಬಳಿಕ ಈ ರೀತಿಯಾಗಿಲ್ಲ ಎಂದರು.
ಅವಕ್ಕಾದ ಖರ್ಗೆಲೋಕಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವಕ್ಕಾದ ಘಟನೆ ನಡೆದಿದೆ. ಬಜೆಟ್‌ನಲ್ಲಿ ಆಂಧ್ರಕ್ಕೆ ನೆೆರವು ಪ್ರಕಟಿಸಿಲ್ಲ ವೆಂದು ಟಿಡಿಪಿ ಸಂಸದರು ಪ್ರತಿಭಟನೆ ನಡೆಸುತ್ತಿದ್ದರು. ಇದೇ ಸಂದರ್ಭದಲ್ಲಿ ಖರ್ಗೆ ಮಾತನಾಡುತ್ತಿದ್ದರು. ಟಿಡಿಪಿ ಸಂಸದರೊಬ್ಬರು ಅವರ ಮುಂದೆಯೇ ನಿಂತು ಘೋಷಣೆ ಕೂಗಲಾರಂಭಿಸಿ ದರು. ಸ್ಪೀಕರ್ ಅವರನ್ನು ನೋಡಲು ಅಸಾಧ್ಯವಾದ್ದರಿಂದ ಸಂಸದರ ಹೆಗಲು ತಟ್ಟಿ ಕೊಂಚ ಸರಿದು ನಿಲ್ಲುವಂತೆ ಸೂಚಿಸಿ ದರು. ಇದರಿಂದ ಸಿಟ್ಟಿಗೆದ್ದ ಆ ಸಂಸದ “ನೀವೇಕೆ ನನಗೆ ಹೊಡೆಯುತ್ತೀರಿ? ಇದು ಒಳ್ಳೆಯದಲ್ಲ’ ಎನ್ನತೊಡಗಿದರು. ಇದರಿಂದ ಅವಕ್ಕಾದ ಖರ್ಗೆಯವರಿಗೆ ಕೆಲ ಕಾಲ ಮಾತುಗಳೇ ಹೊರಡಲಿಲ್ಲ. ಅನಂತರ ಮತ್ತೂಬ್ಬ ಟಿಡಿಪಿ ಸಂಸದ ಬಂದು ಸಮಾಧಾನಪಡಿಸಿದರು.