Advertisement

ಇಲ್ಲಿ ದೆವ್ವಗಳ ಭಯದಿಂದ ಜನರು ಮನೆಯಿಂದ ಹೊರಗೆ ಬರೋದೇ ಇಲ್ಲ ಗೊತ್ತಾ!?

06:33 PM Apr 14, 2020 | Hari Prasad |

ಜಕಾರ್ತಾ: ಕೋವಿಡ್ 19 ವೈರಸ್ ಹರಡುವಿಕೆಯಿಂದ ಹರಡುವಿಕೆಯಿಂದ ಜನರನ್ನು ದೂರವಿಡಲು ಇಂಡೋನೇಷ್ಯಾದ ಕೆಪುಹ್‌ ಗ್ರಾಮದಲ್ಲಿ ದೆವ್ವಗಳನ್ನು ನಿಯೋ ಜಿಸಲಾಗಿದೆ! ಅರೇ, ಹೀಗೆಂದಾಕ್ಷಣ ಅಚ್ಚರಿಯಾಗಬಹುದು, ಇದು ನಿಜ. ಹಾಗಂತ ನಿಯೋಜನೆಗೊಂಡಿರುವುದು ನಿಜವಾದ ದೆವ್ವಗಳಲ್ಲ.

Advertisement

ಜಾವಾ ದ್ವೀಪದಲ್ಲಿರುವ ಹಳ್ಳಿಯ ಬೀದಿಗಳಲ್ಲಿ ಗಸ್ತು ತಿರುಗಲು ದೆವ್ವದ ಆಕೃತಿಗಳನ್ನು ಕವಚಗಳಲ್ಲಿ ಸುತ್ತಿಟ್ಟು ಹಳ್ಳಿಯ ಸ್ವಯಂ ಸೇವಕರು ದೆವ್ವಗಳ ಪಾತ್ರದ ಮೂಲಕ ಜನರನ್ನು ಬೆದರಿಸುವ ಮೂಲಕ  ಅವರನ್ನು ಮನೆಯಲ್ಲೇ ಇರುವಂತಹ ಕೆಲಸ ಮಾಡಿದ್ದಾರೆ.

ಅಲ್ಲಿನ ಅಧ್ಯಕ್ಷ ಜೋಕೊ ವಿಡೋಡೋ ಅವರು ಕೋವಿಡ್ 19 ವೈರಸ್‌ ನಿಗ್ರಹಿಸಲು ರಾಷ್ಟ್ರೀಯ ಲಾಕ್‌ ಡೌನ್‌ ಅನ್ನು ವಿರೋಧಿಸಿದ್ದು, ಬದಲಿಗೆ ಸಾಮಾಜಿಕ ದೂರವಿದ್ದು, ಉತ್ತಮ ನೈರ್ಮಲ್ಯ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.

ಗ್ರಾಮದಲ್ಲಿ ಸಮುದಾಯಗಳು ತಾವೇ ಕ್ರಮ ಕೈಗೊಳ್ಳಲು ನಿರ್ಧರಿಸಿವೆ. ದೆವ್ವಗಳ ವೇಷಗಳನ್ನು ಬಳಸಿಕೊಂಡು ಆ ಮೂಲಕ ಲಾಕ್‌ಡೌನ್‌ ಹೇರಿ ಜನರು ಹೊರಗೆ ಬರದಂತೆ ನಿರ್ಬಂಧಿಸಿವೆ. ಕೋವಿಡ್ ವೈರಸ್ ಹರಡುವಿಕೆ ತಡೆಯುವುದರ ಬಗ್ಗೆ ನಮಗೆ ಯಾವುದೇ ರೀತಿಯ ಅರಿವು ಇಲ್ಲ ಎಂದಿದ್ದಾರೆ ಸ್ಥಳೀಯ ಮುಖ್ಯಸ್ಥ.

Advertisement

Udayavani is now on Telegram. Click here to join our channel and stay updated with the latest news.

Next