Advertisement

ಕೋವಿಡ್ ಲಸಿಕೆ ಹಾಕಿಸಿಕೊಂಡವರಿಗೆ ಇಲ್ಲಿ ಸಿಗುತ್ತೆ ಉಚಿತ ಬೀಯರ್..!

05:03 PM Apr 09, 2021 | Team Udayavani |

ಗುರುಗ್ರಾಮ (ಹರಿಯಾಣ) : ದೇಶದಲ್ಲಿ ಕೋವಿಡ್ ಎರಡನೇ ಅಲೆ ಶುರುವಾಗಿದ್ದು, ಸಾವಿರಾರು ಮಂದಿ ಸೋಂಕಿಗೆ ತುತ್ತಾಗುತ್ತಿದ್ದಾರೆ. ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ಪ್ರತಿ ದಿನ ಸುಮಾರು 6000 ಕೋವಿಡ್ ಕೇಸ್ ಗಳು ಪತ್ತೆಯಾಗುತ್ತಿವೆ. ಇದೇ ಹಿನ್ನೆಲೆಯಲ್ಲಿ ದೇಶದಾದ್ಯಂತ ಕೋವಿಡ್ ಲಸಿಕೆ ಹಾಕುವ ಪ್ರಮಾಣವನ್ನೂ ಹೆಚ್ಚಿಸಲಾಗಿದೆ. ಅಲ್ಲದೆ ಜನರು ಕೂಡ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮುಂದಾಗುತ್ತಿದ್ದಾರೆ.

Advertisement

ಇತ್ತೀಚೆಗೆ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಜನರು ಪ್ರೋತ್ಸಾಹ ಮಾಡುತ್ತಿದ್ದಾರೆ. ಅಲ್ಲದೆ ಲಸಿಕೆ ಹಾಕಿಸಿಕೊಂಡ ಮಂದಿಗೆ ವಿಶೇಷವಾಗಿ ಏನನ್ನಾದರೂ ಉಡುಗೊರೆ ಕೊಟ್ಟು ಖುಷಿ ಪಡಿಸುತ್ತಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಗುಜರಾತಿನ ರಾಜ್ ಕೋಟ್ ನಲ್ಲಿ ಅಕ್ಕಸಾಲಿಗ ಸಮುದಾಯಕ್ಕೆ ಸೇರಿದವರು ವ್ಯಾಕ್ಸಿನ್ ಹಾಕಿಸಿಕೊಂಡು ಬಂದ ಮಹಿಳೆಯರಿಗೆ ಉಚಿತವಾಗಿ ಮೂಗುತಿಯನ್ನು ನೀಡಿ ಗಮನ ಸೆಳೆದಿದ್ದರು. ಇದೀಗ ಇಂತಹದ್ದೇ ಒಂದು ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.

ಹೌದು ಇಲ್ಲಿನ ‘ಇಂಡಿಯನ್ ಗ್ರಿಲ್ ರೂಮ್’ ಒಂದು ಅಭಿಯಾನವನ್ನು ಶುರು ಮಾಡಿದ್ದು, ‘ಸೆಲೆಬ್ರೇಟ್ ಯುವರ್ ವ್ಯಾಕ್ಸಿನೇಷನ್ ವಿತ್ ಗ್ರಿಲ್ ರೂಮ್’ ಎಂದು ಹೆಸರಿಟ್ಟಿದೆ. ಕೋವಿಡ್ ಲಸಿಕೆ ಪಡೆಯುವವರನ್ನು ಹೆಚ್ಚಿಸಲು ಈ ಅಭಿಯಾನ ಶುರುಮಾಡಿರುವ ಗ್ರಿಲ್ ರೂಮ್ ನಲ್ಲಿ ನೀವು ಲಸಿಕೆ ಹಾಕಿಸಿಕೊಂಡಿರುವ ಕಾರ್ಡ್ ತೋರಿಸಿದ್ರೆ ಉಚಿತವಾಗಿ ಬೀಯರ್ ಅನ್ನು ಕೊಡಲಾಗುತ್ತದೆಯಂತೆ.  ಈ ಅಭಿಯಾನ ಏಪ್ರಿಲ್ 5 ರಿಂದ ಶುರುವಾಗಿದ್ದು, ಒಂದು ವಾರದ ವರೆಗೆ ಉಚಿತ ಬೀಯರ್ ನೀಡಲಾಗುತ್ತದೆಯಂತೆ.

Advertisement

Udayavani is now on Telegram. Click here to join our channel and stay updated with the latest news.

Next