Advertisement

ಮೂರು ವರ್ಷಗಳಿಂದ ಈ ಸರ್ಕಾರ ನನಗೆ ತೊಂದರೆ ಕೊಡುತ್ತಿದೆ : ಕನ್ಹಯ್ಯ ಕುಮಾರ್

06:03 PM Oct 15, 2019 | Team Udayavani |

ಗುಲಬರ್ಗಾ:  ವಿವಿ ಮತ್ತು ವಿಶ್ವೇಶ್ವರಯ್ಯ ಭವನದಲ್ಲಿ ಕಾರ್ಯಕ್ರಮ ರದ್ದುಗೊಂಡದ್ದು ಬಲಪಂಥೀಯ ವಿಚಾರಗಳ ಧಮ್ಕಿಯಿಂದ ಕಾರ್ಯಕ್ರಮಕ್ಕೆ ಪರವಾನಗಿ ನೀಡಿಲ್ಲದ್ದಿದ್ದ ಕಾರಣಕ್ಕೆ ಎಂದು ಯುವ ಮುಖಂಡ ಕನ್ಹಯ್ಯ ಕುಮಾರ್ ಹೇಳಿದರು.

Advertisement

ವಿವಿಯವರು ನನಗೆ ರಿಸರ್ಚ್ ಬೇಸ್ ಮಾತನಾಡಬೇಕು  ಅಂತ ಕಂಡಿಷನ್ ಹಾಕುತ್ತಿದ್ದರು, ಆದರೆ ಮೋದಿಯೇನು ಯಾವುದಾದ್ರು ಸಂಶೋಧನಾ ಆಧಾರದ ಮೇಲೆ ಮಾತನಾಡ್ತಾರಾ?  ಇದು ಬಸವಣ್ಣನ ಭೂಮಿ. ಆದರೆ ರಾಜಕೀಯ ಒತ್ತಡದಿಂದ ನನ್ನ ಕಾರ್ಯಕ್ರಮ ನಡೆಸಲು ಬಿಟ್ಟಿಲ್ಲ. ಕಾರ್ಯಕ್ರಮಕ್ಕೆ ಪರವಾನಗಿ ನೀಡದವರು ಮೂರ್ಖರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯಕ್ರಮಕ್ಕೆ ಪರವಾನಗಿ ನೀಡದಿದ್ದರೆ ಸೋಶಿಯಲ್ ಮೀಡಿಯಾ ಇದೆ. ಅವರು ಹತ್ತಿಕ್ಕದಂತೆ ನನ್ನ ವಿಚಾರ ಎಲ್ಲರಿಗೂ ಹೋಗುತ್ತದೆ ಬೇರೆ ಕಾರ್ಯಕ್ರಮದಲ್ಲಿ ಮಾತನಾಡಿದ್ದು ಎಲ್ಲರಿಗೂ ಮುಟ್ಟುತ್ತದೆ ಕಳೆದ ಮೂರು ವರ್ಷಗಳಿಂದ ಈ ಸರ್ಕಾರ ನನಗೆ ತೊಂದರೆ ಕೊಡುತ್ತಿದೆ. ಇದು ಹೊಸದಲ್ಲ. ನಾನು ಹೆದರಲ್ಲ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

ಯಾವ ವಿಶ್ವವಿದ್ಯಾಲಯದ ವಿದ್ಯಾರ್ಥಿಗೆ ರಾಷ್ಟ್ರದ್ರೋಹಿ ಅಂತಾರೋ, ಅದೇ ವಿಶ್ವವಿದ್ಯಾಲಯದಲ್ಲಿ ಓದಿದವರು ನೋಬಲ್ ಸೇರಿದಂತೆ ಅನೇಕ ಪ್ರಶಸ್ತಿ ಪಡೆದಿದ್ದಾರೆ. ಕೇಂದ್ರ ಮತ್ತು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ ಕನ್ಹಯ್ಯ ಕುಮಾರ್, ಪ್ರಧಾನಿ ನರೇಂದ್ರ ಮೋದಿ ಅಣ್ಣನ ಮಗಳ ಪರ್ಸ್ ಕಳೆದ್ರೆ ಏಳು ನೂರು ಪೊಲೀಸರು ಶೋಧ ಮಾಡಿ ಹುಡುಕಿ ಕೊಟ್ಟಿದ್ದಾರೆ ಆದರೆ, ಜೆಎನ್ ಯು ವಿದ್ಯಾರ್ಥಿ ನಜೀಬ್ ನಾಪತ್ತೆಯಾಗಿ ವರ್ಷಗಳೇ ಕಳೆದ್ರೂ ಹುಡುಕುವ ಕೆಲಸ ಆಗುತ್ತಿಲ್ಲ ಆ ವಿದ್ಯಾರ್ಥಿಯ ತಾಯಿ ಇಂದು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆಎಂದರು.

ಮೋದಿ ಅಣ್ಣನ ಮಗಳ ಪರ್ಸ್ ಗೆ ಇರುವ ಬೆಲೆ ವಿದ್ಯಾರ್ಥಿಯ ಜೀವಕ್ಕೆ ಇಲ್ವಾ ? ಮೋದಿ ವಿರುದ್ಧ ಮಾತನಾಡುವವರ ಮೇಲೆ ಸಿಬಿಐ ದಾಳಿ ನಡೆಸುತ್ತಾರೆ. ನಾಪತ್ತೆಯಾದ ವಿದ್ಯಾರ್ಥಿ ಬಗ್ಗೆ ಸಿಬಿಐ ಏನು ಮಾಡುತ್ತಿದೆ ನನ್ನ ವಿರುದ್ಧ ಮೋದಿ ಸಿಬಿಐ ದಾಳಿ ನಡೆಸಲಿ, ಇಡಿ , ಐಟಿ ದಾಳಿ ನಡೆಸಲಿ. ದೇಶ ಮತ್ತು ಸಂವಿಧಾನ ರಕ್ಷಣೆಗಾಗಿ ನನ್ನ ಧ್ವನಿ ಯಾವತ್ತೂ ನಿಲ್ಲುವುದಿಲ್ಲ ಕೇಂದ್ರಕ್ಕೆ ಸವಾಲು ಎಸೆದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next