ಕೋಲ್ಕತಾ: ಕೋಲ್ಕತಾದಲ್ಲಿ ದುರ್ಗಾ ಮಾತೆಯ ವಿಗ್ರಹಗಳಿಗೆ ಈ ಬಾರಿ ಅದ್ಧೂರಿಯೋ ಅದ್ದೂರಿ. ಪ್ರಸಕ್ತ ಸಾಲಿ ನಲ್ಲೇನೂ ಹಿಂದೆ ಬಿದ್ದಿಲ್ಲ. ಈ ಬಾರಿಯ ವಿಶೇಷವೆಂದರೆ ಪ್ರತಿಮೆಗಳಿಗೆ ಭಾರೀ ಪ್ರಮಾಣದ ಚಿನ್ನ, ಬೆಳ್ಳಿಯ ಆಭರಣ ಹಾಕಿರುವುದು. ಕೋಲ್ಕತಾದ ಸಂತೋಷ್ ಮಿತ್ರ ಸ್ಕ್ವೇರ್‌ನ ದುರ್ಗಾ ಮಾತೆಯ ಮೂರ್ತಿಗೆ 50 ಕಿಲೋ ಚಿನ್ನ ಹಾಗೂ ಎಂಟಲಿ ಬಳಿಯ ದುರ್ಗೆಯ ಮೂರ್ತಿಗೆ 110 ಕಿಲೋ ಬೆಳ್ಳಿಯನ್ನು ಹಾಕಿ ಅಲಂಕರಿಸಲಾಗಿದೆ. ಚಿನ್ನದ ಬೆಲೆ 10 ಗ್ರಾಂಗೆ 40 ಸಾವಿರ ರೂ.ಗೆ ಏರಿಕೆಯಾಗಿದ್ದರೂ ಇಲ್ಲಿನ ಜನರು ಚಿಂತಿಸಿಲ್ಲ. ಈ ದುರ್ಗೆಯನ್ನು ಅಲಂಕರಿಸಿದ ಚಿನ್ನದ ಬೆಲೆಯೇ 20 ಕೋಟಿ ರೂ. ಆಗಿದೆ.
13 ಅಡಿ ಎತ್ತರದ ದುರ್ಗೆಯ ಮೂರ್ತಿ ಇದಾಗಿದ್ದು, ತಲೆಯಿಂದ ಕಾಲಿನವರೆಗೂ ಚಿನ್ನದಿಂದ ಅಲಂಕರಿಸಲಾಗಿದೆ. ಆಕೆಯ ವಾಹನ ಸಿಂಹ ಮತ್ತು ಮಹಿಷಾಸುರನನ್ನೂ ಕೂಡ ಚಿನ್ನದಿಂದ ಅಲಂಕರಿಸಲಾಗಿದೆ. ಈ ವರ್ಷ ದಲ್ಲೇ ಅತ್ಯಂತ ವೆಚ್ಚದಾಯಕ ಮೂರ್ತಿ ಇದಾಗಿದೆ.
ಈ ಸಂತೋಷ್ ಸ್ಕ್ವೇರ್‌ನಲ್ಲಿ ಹಿಂದಿ ನಿಂದಲೂ ದುರ್ಗೆಯ ಮೂರ್ತಿಯನ್ನು ಚಿನ್ನದಿಂದ ಅಲಂಕರಿಸಲಾಗುತ್ತದೆ. 2017 ರಲ್ಲಿ ಚಿನ್ನದ ಸೀರೆಯನ್ನು ತೊಡಿಸಲಾಗಿತ್ತು. ಇದಕ್ಕೆ 22 ಕಿಲೋ ಚಿನ್ನ ಬಳಸಲಾಗಿತ್ತು. ಈ ಚಿನ್ನದ ಸೀರೆಯನ್ನು ಜನಪ್ರಿಯ ವಿನ್ಯಾಸಗಾರ ಅಗ್ನಿಮಿತ್ರ ಪೌಲ್ ವಿನ್ಯಾಸ ಮಾಡಿದ್ದರು.
ಈ ಸ್ಥಳವು ಜನಪ್ರಿಯ ಆಭರಣಕಾರರೇ ಇರುವ ಬೌಬಝಾರ್ ಬಳಿಯೇ ಇದೆ. ಅಲ್ಲದೆ, ಇಲ್ಲಿಗೆ ಸಮೀಪದಲ್ಲೇ ಮೂರ್ತಿಗಳನ್ನು ತಯಾರಿಸುವ ಸ್ಥಳ ಕಮರ್ತುಲಿ ಕೂಡ ಇದೆ. ಹೀಗಾಗಿ ಈ ದುರ್ಗಾ ಮಾತೆಯ ಮೂರ್ತಿ ಪ್ರತಿ ವರ್ಷವೂ ಅತ್ಯಂತ ವಿಶಿಷ್ಟವಾಗಿರುತ್ತದೆ. ಈ ಮೂರ್ತಿಗಳ ಅಲಂಕಾರಕ್ಕೆ ಬಳಸಲಾದ ಚಿನ್ನವನ್ನು ಇಲ್ಲಿನ ಆಭರಣಕಾರರು ಒದಗಿಸಿದ್ದು, ಮೂರ್ತಿಯನ್ನು ಮುಳುಗಿಸಿದ ಅನಂತರ ಚಿನ್ನವನ್ನು ಆಭರಣಕಾರರು ವಾಪಸ್ ಪಡೆಯುತ್ತಾರೆ.