ಬೆಂಗಳೂರು: ಕಾನೂನು ಸುವ್ಯವಸ್ಥೆ ಚೆನ್ನಾಗಿದ್ದರೆ ರಾಜ್ಯದ ಅಭಿವೃದ್ಧಿಯಾಗತ್ತದೆ. ವಿದ್ಯಾರ್ಥಿಗಳು ನಿರಾಳ ಮನಸ್ಸಿನಿಂದ ಇರುತ್ತಾರೆ. ನಮ್ಮ ಭಾಗದ ಅಭಿವೃದ್ಧಿ ಆಗಬೇಕು ಅಂದರೆ ಕಾನೂನು ಸುವ್ಯವಸ್ಥೆ ಸರಿ ಇರಬೇಕು. ಕಾನೂನಿನ ವ್ಯವಸ್ಥೆ ಸರಿಯಾಗಿ ಇಲ್ಲದೆ ಹೋದರೆ ಅದು ಕರ್ನಾಟಕಕ್ಕೆ ಮಾರಕ ಎಂದು ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ಯೆಯಾದ ಮಸೂದ್ ಮನೆಗೆ ತೆರಳದ ಸಿಎಂ ಬೊಮ್ಮಾಯಿ ನಡೆಗೆ ಕಿಡಿಕಾರಿದರು.
ಹಿಂದೂ- ಮುಸ್ಲಿಂ ಯಾರೇ ಇರಲಿ ಸರ್ಕಾರ ಎಲ್ಲರನ್ನೂ ನಿಷ್ಪಕ್ಷಪಾತವಾಗಿ ನೋಡಬೇಕು. ಒಬ್ಬರ ಮನೆಗೆ ಹೋಗುವುದು, ಇನ್ನೊಬ್ಬರ ಮನೆಗೆ ಹೋಗದಿರುವುದು ಸರಿಯಲ್ಲ. ಒಬ್ಬರಿಗೆ ರಕ್ಷಣೆ ಕೊಡುತ್ತೀರಿ, ಒಬ್ಬರಿಗೆ ಪರಿಹಾರ ಕೊಡುತ್ತೀರಿ. ಇನ್ನೊಬ್ಬರಿಗೆ ಪರಿಹಾರವೂ ಇಲ್ಲ ಸಾಂತ್ವನವೂ ಇಲ್ಲ. ಇದೊಂದು ನಿಷ್ಪಕ್ಷಪಾತ ಸರ್ಕಾರ ಎಂದೆನಿಸುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ:ಸಿಮಿಲಿಪಾಲ್ ನ್ಯಾಶನಲ್ ಪಾರ್ಕ್ ನಲ್ಲಿ ಕ್ಯಾಮರಾ ಕಣ್ಣಿಗೆ ಬಿದ್ದ ಅಪರೂಪದ ಕಪ್ಪು ಹುಲಿ|ವಿಡಿಯೋ
ರಾಜಕೀಯ ಧರ್ಮ ಪಾಲನೆ ಮಾಡಬೇಕು. ಸಂದರ್ಭ ಬಂದರೆ ಸಂಸತ್ ನಲ್ಲಿ ಈ ವಿಷಯ ಪ್ರಸ್ತಾಪ ಮಾಡೋಣ.
ಕೇಂದ್ರ ಸರ್ಕಾರ ಒಂದಲ್ಲ ಒಂದು ವಿಷಯ ತಂದು ಸಂಸತ್ ನಲ್ಲಿ ಗದ್ದಲ ಮಾಡುತ್ತಿದ್ದಾರೆ. ರಾಷ್ಟ್ರದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವುದಕ್ಕೆ ಕೇಂದ್ರ ಸರ್ಕಾರ ಅವಕಾಶ ಕೊಡುತ್ತಿಲ್ಲ. ಗಂಭೀರ ಚರ್ಚೆಗೆ ಅವಕಾಶ ಕೊಡದಿರುವುದು ಬಹಳ ನೋವಾಗುತ್ತಿದೆ. ಈ ರೀತಿಯಾಗಿ ಹಠಮಾರಿತನ ಧೋರಣೆ ನಾನು ನೋಡಿಲ್ಲ ಎಂದು ಖರ್ಗೆ ಹೇಳಿದರು.