Advertisement

ಮೈಸೂರು ದಸರಾ…ಆಹಾ ಆಗಸದಿಂದಲೇ ಮೈಸೂರು ಸೊಬಗು ಸವಿಯಿರಿ!

11:58 AM Sep 18, 2017 | Team Udayavani |

ಮೈಸೂರು: ಮೈಸೂರು ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಈ ವರ್ಷವೂ ಮೈಸೂರು ಜಿಲ್ಲಾಡಳಿತ ಪವನ್ ಹನ್ಸ್ ಸಹಯೋಗದೊಂದಿಗೆ ಹೆಲಿಕಾಪ್ಟರ್ ನಲ್ಲಿ ಮೈಸೂರಿನ ಸೊಬಗನ್ನು ನೋಡುವ ಅವಕಾಶ ಕಲ್ಪಿಸಿದೆ. ಹಾಗಾಗಿ ಆಗಸದಿಂದಲೇ ಸಾಂಸ್ಕೃತಿಕ ನಗರಿ ಮೈಸೂರಿನ ಸೊಬಗನ್ನು ಪ್ರವಾಸಿಗರು ಸವಿಯಬಹುದಾಗಿದೆ.

Advertisement

ಸೆಪ್ಟೆಂಬರ್ 21ರಿಂದ ಮೈಸೂರು ದಸರಾ ಆರಂಭವಾಗಲಿದ್ದು, ಇದಕ್ಕಾಗಿ ಪವನ್ ಹನ್ಸ್ ಮತ್ತು ಜಿಪ್ಸನ್ ಏವಿಯೇಷನ್ ಸಂಸ್ಥೆಗಳು 2 ಹೆಲಿಕಾಪ್ಟರ್ ಗಳನ್ನು ಆಯೋಜಿಸಿದೆ. ಪ್ರವಾಸಿಗರು ಹೆಲಿಕಾಪ್ಟರ್ ನಲ್ಲಿ ಅರಮನೆ, ಚಾಮುಂಡಿಬೆಟ್ಟ, ಕಾರಂಜಿಕರೆ ಹಾಗೂ ಕುಕ್ಕರಹಳ್ಳಿ ಕೆರೆಯ ವಿಹಂಗಮ ನೋಟವನ್ನು ಆಕಾಶದಿಂದಲೇ ವೀಕ್ಷಿಸಬಹುದಾಗಿದೆ.

ಬೆಳಗ್ಗೆ 8ರಿಂದ ಸಂಜೆ 5ಗಂಟೆವರೆಗೆ ಹೆಲಿಕಾಪ್ಟರ್ ಪ್ರವಾಸಿಗರಿಗೆ ಲಭ್ಯವಾಗಲಿದೆ. ಮೈಸೂರಿನ ಸೊಬಗನ್ನು ವಿಶಿಷ್ಟವಾಗಿ ಸವಿಯಬೇಕೆಂಬ ಹಂಬಲ ಇರುವವರು ಈ ಬಾರಿಯೂ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸಬಹುದಾಗಿದೆ.

ಹೆಲಿಕಾಪ್ಟರ್ ಪ್ರಯಾಣಕಕ್ಕೆ ದರ ಎಷ್ಟು?

Advertisement

ಪ್ರತಿ ಹಾರಾಟಕ್ಕೆ ಒಬ್ಬರಿಗೆ 2,300 ರೂಪಾಯಿ ದರ ನಿಗದಿಪಡಿಸಲಾಗಿದೆ. 6 ವರ್ಷ ಮೇಲ್ಪಟ್ಟ ಮಕ್ಕಳಿಗೆ 2000ರೂಪಾಯಿ ಟಿಕೆಟ್ ದರ ನಿಗದಿ ಮಾಡಲಾಗಿದೆ. ಪ್ರವಾಸಿಗರನ್ನು ಆಕರ್ಷಿಸುವ ನೆಲೆಯಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಮೈಸೂರು ಜಿಲ್ಲಾಡಳಿತ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next