ಕೋಲ್ಕತಾ: ಪಶ್ಚಿಮಬಂಗಾಳದ ಟಿಎಂಸಿ ಘಟಾನುಘಟಿ ನಾಯಕರು ಇ.ಡಿ, ಸಿಬಿಐ ಬಲೆಗೆ ಸಿಕ್ಕಿಹಾಕಿಕೊಳ್ಳುತ್ತಿದ್ದು, ಮತ್ತೊಂದೆಡೆ ಟಿಎಂಸಿ ಪ್ರಭಾವಿ ಮುಖಂಡ ಪವನ್ ಕೆ ವರ್ಮಾ ಶುಕ್ರವಾರ (ಆಗಸ್ಟ್ 12)ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಮೂಲಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ಇಕ್ಕಟ್ಟಿಗೆ ಸಿಲುಕುವಂತಾಗಿದೆ.
ಇದನ್ನೂ ಓದಿ:ಎಸ್‌ಯುವಿ ಅಪಘಾತದಲ್ಲಿ 6 ಸಾವು: ಕಾಂಗ್ರೆಸ್ ಶಾಸಕನ ಅಳಿಯನ ವಿರುದ್ಧ ಪ್ರಕರಣ
ವರ್ಮಾ ಈ ಬಗ್ಗೆ ಟ್ವೀಟ್ ಮಾಡಿದ್ದು, ದಯವಿಟ್ಟು ನನ್ನ ರಾಜೀನಾಮೆಯನ್ನು ಸ್ವೀಕರಿಸಿ. ನನಗೆ ನೀಡಿದ ಆತ್ಮೀಯ ಸ್ವಾಗತ ಮತ್ತು ನಿಮ್ಮ ಪ್ರೀತಿ, ಸೌಜನ್ಯಕ್ಕಾಗಿ ನಾನು ನಿಮಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಿಮಗೆ ಶುಭ ಹಾರೈಸುತ್ತೇನೆ ಎಂದು ಉಲ್ಲೇಖಿಸಿದ್ದಾರೆ.
ಜೆಡಿಯು ಮಾಜಿ ಸಂಸದ ಪವನ್ ಕೆ ವರ್ಮಾ ಅವರು ಕಳೆದ ವರ್ಷ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಈ ಸಂದರ್ಭದಲ್ಲಿ ಪ್ರತಿಪಕ್ಷಗಳನ್ನು ಬಲಪಡಿಸುವ ಕೆಲಸ ಮಾಡುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಹೇಳಿರುವುದುನ್ನು ಸ್ಮರಿಸಿಕೊಳ್ಳಬಹುದು.
ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯ ವಿರುದ್ಧ ಬಿಜೆಪಿ ಮೈತ್ರಿ ಪಕ್ಷವಾಗಿದ್ದ ಜೆಡಿಯು ವಿರುದ್ಧ ವಾಗ್ದಾಳಿ ನಡೆಸಿದ್ದ ಪರಿಣಾಮ ಪ್ರಶಾಂತ್ ಕಿಶೋರ್ ಮತ್ತು ವರ್ಮಾ ಅವರನ್ನು ಕಳೆದ ವರ್ಷ ಜೆಡಿಯುನಿಂದ ವಜಾಗೊಳಿಸಲಾಗಿತ್ತು.
ಭ್ರಷ್ಟಾಚಾರ ಮತ್ತು ವಿವಿಧ ಪ್ರಕರಣಗಳಲ್ಲಿ ಟಿಎಂಸಿ ಮುಖಂಡರಾದ ಪಾರ್ಥ ಚಟರ್ಜಿ ಮತ್ತು ಅನುಬ್ರತಾ ಮೊಂಡಲ್ ಅವರನ್ನು ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಬಂಧಿಸಿದ ನಂತರ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.