Advertisement

ಈ ಬಾರಿ ಕಾಶ್ಮೀರದಲ್ಲೇ ತ್ರಿವರ್ಣ ಧ್ವಜ ಹಾರಿಸ್ತಾರಾ ಪ್ರಧಾನಿ ನರೇಂದ್ರ ಮೋದಿ?

09:10 AM Aug 04, 2019 | Nagendra Trasi |

ಜಮ್ಮು-ಕಾಶ್ಮೀರ; ಕಾಶ್ಮೀರದಲ್ಲಿ ದೊಡ್ಡ ಪ್ರಮಾಣದಲ್ಲಿ ಅರೆಸೇನಾಪಡೆಗಳನ್ನು ನಿಯೋಜಿಸುತ್ತಿರುವ ಬಗ್ಗೆ ತೀವ್ರ ಕುತೂಹಲಗಳು ಮೂಡಿರುವಂತೆಯೇ? ಈ ಬಾರಿ ಆಗಸ್ಟ್‌ 15ರಂದು ಪ್ರಧಾನಿ ನರೇಂದ್ರ ಮೋದಿ ಜಮ್ಮು ಮತ್ತು ಕಾಶ್ಮೀರದ ಪ್ರಮುಖ ಕೇಂದ್ರ ಲಾಲ್‌ಚೌಕ್‌ನಲ್ಲೇ ತ್ರಿವರ್ಣ ಧ್ವಜಾರೋಹಣ ನೆರವೇರಿಸುತ್ತಾರಾ? ಎಂಬ ಪ್ರಶ್ನೆಗಳು ಜೋರಾಗಿವೆ.

Advertisement

ಹಿಂದಿನ ಕೆಲವು ಪ್ರಕರಣಗಳ ಸಂದರ್ಭ ಶ್ರೀನಗರದ ಲಾಲ್‌ ಚೌಕ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸಲು ಯತ್ನಿಸಿದ್ದಾಗ ವ್ಯಾಪಕ ಗಲಭೆಗಳಾಗಿತ್ತು. ಇದು ಕರ್ಫ್ಯೂವರೆಗೆ ಹೋಗಿತ್ತು. ಶ್ರೀನಗರದ ಕೆಲ ಭಾಗಗಳಲ್ಲಿ ಭಾರತ ವಿರೋಧಿ ಶಕ್ತಿಗಳಿದ್ದರಿಂದ ಈ ಗಲಭೆಯಾಗಿದೆ ಎಂದು ಹೇಳಲಾಗಿತ್ತು. ಅದೇನಿದ್ದರೂ ಬದಲಾದ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರ ವಿಚಾರದಲ್ಲಿ ಅದೇನಿದ್ದರೂ ಭಾರತದ್ದೇ. ಪಾಕಿಸ್ಥಾನ ನಡೆಸುತ್ತಿರುವ ಕುಕೃತ್ಯಗಳನ್ನು ಮಣಿಸುವಂತೆ ಖುದ್ದು ಪ್ರಧಾನಿ ಮೋದಿಯೇ ಸ್ವಾತಂತ್ರ್ಯದಿನಂದು ಧ್ವಜಾರೋಹಣಕ್ಕೆ ಸಜ್ಜಾಗಲಿದ್ದಾರೆ. ಇದಕ್ಕಾಗಿಯೇ ದೊಡ್ಡ ಪ್ರಮಾಣದಲ್ಲಿ ಅರೆಸೇನಾಪಡೆಗಳನ್ನು ನಿಯೋಜಿಸಲಾಗಿದೆ ಎನ್ನಲಾಗುತ್ತಿದೆ.

ಅಂದೇನಾಗಿತ್ತು?

2012ರಲ್ಲೂ ಬಿಜೆಪಿ ನಾಯಕರು ಗಣರಾಜ್ಯೋತ್ಸವದಂದು ತ್ರಿವರ್ಣ ಧ್ವಜ ಹಾರಿಸಲು ಉದ್ದೇಶಿಸಿದ್ದು, ಗಲಾಟೆಗೆ ಕಾರಣವಾಗಿತ್ತು. 1991 ಡಿ.11ರಂದು ಏಕತಾ ಯಾತ್ರೆಯನ್ನು ಬಿಜೆಪಿ ಕನ್ಯಾಕುಮಾರಿಯಿಂದ ಆರಂಭಿಸಿದ್ದು, 2012 ಜನವರಿ 26ರಂದು ಗಣರಾಜ್ಯೋತ್ಸವಕ್ಕೆ ತ್ರಿವರ್ಣ ಧ್ವಜಾರೋಹಣ ನೆರವೇರಿಸಲು ಉದ್ದೇಶಿಸಿತ್ತು. ಈ ಕಾರ್ಯಕ್ರಮವನ್ನು ಅಂದು ಆಯೋಜಿಸಿದ್ದವರು ಖುದ್ದು ನರೇಂದ್ರ ಮೊದಿ. ಆಗ ಅವರು ರಾಷ್ಟ್ರೀಯ ಚುನಾವಣಾ ಸಮಿತಿಯ ಸದಸ್ಯರಾಗಿದ್ದರು. ಜತೆಗೆ ಯಾತ್ರೆಯ ಸಂಚಾಲಕರಾಗಿದ್ದರು. ಆದರೆ ಲಾಲ್‌ಚೌಕದಲ್ಲಿ ಪ್ರತ್ಯೇಕತಾವಾದಿಗಳಿಗೆ ಸಡ್ಡು ಹೊಡೆಯುವಂತೆ ಧ್ವಜಾರೋಹಣ ನಡೆಸುವುದು ಆಗ ಕೇಂದ್ರ ಸರಕಾರ ನಡೆಸುತ್ತಿದ್ದ ಕಾಂಗ್ರೆಸ್‌ ಮತ್ತು ಜಮ್ಮು ಮತ್ತು ಕಾಶ್ಮೀರ ಸರಕಾರ ನಡೆಸುತ್ತಿದ್ದ ನ್ಯಾಷನಲ್‌ ಕಾನ್ಫರೆನ್ಸ್‌ಗೆ ಇಷ್ಟವಿರಲಿಲ್ಲ.

ಬಿಜೆಪಿ ನಾಯಕರಿಗೆ ತಡೆ

Advertisement

ಧ್ವಜಾರೋಹಣಕ್ಕೆ ಬಂದ ಬಿಜೆಪಿ ನಾಯಕರನ್ನು ತಡೆಯಲು ಎರಡೂ ಸರಕಾರಗಳು ಪ್ರಯತ್ನಿಸಿದವು. ಕಾರ್ಯಕರ್ತರು ಬರುತ್ತಿದ್ದ ರೈಲುಗಳನ್ನು ತಡೆಯಲಾಗಿದ್ದು, ಇದರೊಂದಿಗೆ ಕಾಶ್ಮೀರ ಪ್ರವೇಶಿಸಲು ಯತ್ನಿಸಿದ ಅರುಣ್‌ ಜೇಟಿÉ, ಸುಷ್ಮಾ ಸ್ವರಾಜ್‌ ಅವರನ್ನು ತಡೆದು ಬಂಧಿಸಲಾಗಿತ್ತು. ಕೊನೆಗೂ ಒಂದಷ್ಟು ಜನ ಒಳಪ್ರವೇಶಿಸುವುದರಲ್ಲಿ ಶಕ್ತವಾಗಿದ್ದರು.

ಅರಳಿದ ತ್ರಿವರ್ಣ ಧ್ವಜ

ಅದ್ಹೇಗೋ ಮೋದಿ ಮತ್ತು ಮುರಳಿ ಮನೋಹರ ಜೋಶಿಯವರು ಲಾಲ್‌ಚೌಕ್‌ ಸನಿಹ ತೆರಳಿದ್ದು ಗಣರಾಜ್ಯೋತ್ಸವದ ಧ್ವಜಾರೋಹಣ ನಡೆಸಿದ್ದರು. ಜೋಶಿ ಪಕ್ಕವೇ ಆಗ ನರೇಂದ್ರ ಮೋದಿ ನಿಂತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next