Advertisement

Kerala ದಲ್ಲಿ ತಿರುವನಂತಪುರಂ ಬಿಜೆಪಿಯ ಪ್ರಬಲ ಕ್ಷೇತ್ರವಾದರೂ.. :ತರೂರ್

06:13 PM Jun 03, 2024 | Team Udayavani |

ತಿರುವನಂತಪುರಂ: ಕೇರಳದಲ್ಲಿ ತಿರುವನಂತಪುರಂ ಲೋಕಸಭಾ ಕ್ಷೇತ್ರ ಬಿಜೆಪಿಯ ಪ್ರಾಬಲ್ಯವಿದೆ ಎಂದು ನನಗೆ ಸಂಪೂರ್ಣವಾಗಿ ತಿಳಿದಿದೆ, ಎರಡು ಬಾರಿ ಬಿಜೆಪಿ ಎರಡನೇ ಸ್ಥಾನಕ್ಕೆ ಬಂದಿದ್ದು, ಈ ಬಾರಿ ಮತ್ತೊಮ್ಮೆಯೂ ಎರಡನೇ ಸ್ಥಾನಕ್ಕೆ ಬರಲು ಸಂಪೂರ್ಣವಾಗಿ ಸಮರ್ಥವಾಗಿದೆ’ ಎಂದು ಕೇರಳದ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಕ್ಷೇತ್ರದ ಸಂಸದ ಶಶಿ ತರೂರ್ ಎಕ್ಸಿಟ್ ಪೋಲ್ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ ಕೇರಳದಲ್ಲಿ ಬಿಜೆಪಿ ಖಾತೆ ತೆರೆಯಲಿರುವ ಕುರಿತು ಪ್ರತಿಕ್ರಿಯಿಸಿದ ತರೂರ್, ಬಿಜೆಪಿ ಕೇರಳದಲ್ಲಿ ನಿಜವಾಗಿ ಗೆಲ್ಲುವ ಸಾಧ್ಯತೆಯು ಈ ಸಮಯದಲ್ಲಿ ದೂರವಾಗಿದೆ ಏಕೆಂದರೆ ಅದಕ್ಕೆ ಕೆಲವು ಆಧಾರಗಳಿರಬೇಕು. ನಾವು ನಿಜವಾಗಿಯೂ ಎಲ್ಲಾ ಕಡೆ ನೋಡಿದ್ದೇವೆ, ಯಾವುದೇ ಅಲೆ ಇರಲಿಲ್ಲ..ತ್ರಿಕೋನ ಸ್ಪರ್ಧೆಯಲ್ಲಿ, ಒಂದು ಪ್ರಮುಖ ಆಡಳಿತ ವಿರೋಧಿ ಪರಿಸ್ಥಿತಿ ಇದ್ದು ಕ್ಷೇತ್ರದ ಪ್ರಸ್ತುತ ವ್ಯವಸ್ಥೆಯಲ್ಲಿ ನಿಖರವಾಗಿ ಏನು ಕೊರತೆಯಿದೆ ಎಂಬ ಗ್ರಹಿಕೆ ಇರಬೇಕು ಅಥವಾ ಪರ್ಯಾಯದ ಬಗ್ಗೆ ನಿಜವಾಗಿಯೂ ಅದ್ಭುತವಾದದ್ದು ಇದೆ ಎಂಬ ಗ್ರಹಿಕೆ ಇರಬೇಕು. ನಾಳೆಯ ಮತ ಎಣಿಕೆಗೆ ನಾವು ಸಾಕಷ್ಟು ನಿರಾಳವಾಗಿದ್ದೇವೆ’ ಎಂದು ತರೂರ್ ಹೇಳಿದ್ದಾರೆ.

‘ತಿರುವನಂತಪುರಂ ಮಾತ್ರವಲ್ಲ, ಎಕ್ಸಿಟ್ ಪೋಲ್‌ಗಳಲ್ಲಿ ನೀವೆಲ್ಲರೂ ನೋಡಿದ ಸಂಖ್ಯೆಗಳು ರಾಷ್ಟ್ರವ್ಯಾಪಿಯಾಗಿ ನಾಳೆ ಸುಳ್ಳಾಗುತ್ತವೆ ಎಂದು ನನಗೆ 100% ವಿಶ್ವಾಸವಿದೆ’ ಎಂದರು.

“ನಾವು ದೇಶಾದ್ಯಂತ ಪ್ರಚಾರ ಮಾಡಿರುವುದರಿಂದ ನಾವು ಸಂದೇಹ ಮತ್ತು ಅಪನಂಬಿಕೆಯಿಂದ ನೋಡುತ್ತಿದ್ದೇವೆ. ಜನರ ನಾಡಿಮಿಡಿತ ಏನೆಂಬುದರ ಬಗ್ಗೆ ನಮಗೂ ಅರಿವಿದೆ ಮತ್ತು ಈ ಸಮೀಕ್ಷೆಗಳಲ್ಲಿ ಅದು ನಿಖರವಾಗಿ ಪ್ರತಿಫಲಿಸುತ್ತದೆ ಎಂದು ನಾವು ನಂಬುವುದಿಲ್ಲ. ನಮ್ಮ ಪಕ್ಷದ ಅಧ್ಯಕ್ಷ ಖರ್ಗೆ ಅವರು ಎಲ್ಲ ಇಂಡಿಯಾ ಮೈತ್ರಿಕೂಟದ ಸದಸ್ಯರನ್ನು ಭೇಟಿ ಮಾಡಿದ್ದು 295 ಗಳಿಸುತ್ತಿದ್ದೇವೆ ಎಂದು ಅವರು ಮನವರಿಕೆ ಮಾಡಿಯೇ ಹೇಳಿದ್ದಾರೆ’ ಎಂದರು.

‘ಕೆಲವು ಎಕ್ಸಿಟ್ ಪೋಲ್ ಸಮೀಕ್ಷೆಗಳು ಕೇರಳದಲ್ಲಿ ಬಿಜೆಪಿ 7 ಸ್ಥಾನ ಗೆಲ್ಲುತ್ತದೆ ಎಂದು ಹೇಳುವ ಮೂಲಕ ನಗೆಪಾಟಲಿಗೀಡಾಗಿವೆ. ಅವರು ಹೀಟ್‌ಸ್ಟ್ರೋಕ್‌ನಿಂದ ಬಳಲುತ್ತಿದ್ದಾರೆ ಅಥವಾ ಅವರಿಗೆ ಕೇರಳದ ಬಗ್ಗೆ ಅರ್ಥವೇ ಆಗಿಲ್ಲ. ಈ ಎಲ್ಲ ಕಾರಣಗಳಿಗಾಗಿ ಅವುಗಳನ್ನು ಗಂಭೀರವಾಗಿ ಪರಿಗಣಿಸಬಾರದು ಎಂದು ನಾನು ಭಾವಿಸುತ್ತೇನೆ’ ಎಂದರು.

Advertisement

ತಿರುವನಂತಪುರಂ ನಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರ ಶೇಖರ್ ಅವರು ತರೂರ್ ಅವರ ವಿರುದ್ಧ ಬಿಜೆಪಿ ಹುರಿಯಾಳಾಗಿದ್ದಾರೆ. ಕ್ಷೇತ್ರ ಭಾರಿ ಕುತೂಹಲ ಕೆರಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next