Advertisement
ಈ ಕೆರೆ ತುಂಬಿ ಹರಿದರೇ ಬೆಂಡೇಕೆರೆ, ಹರತನಹಳ್ಳಿ, ಬಸವರಾಜಪುರ, ಜಾಜೂರು, ನಾಗತೀಹಳ್ಳಿ, ವೆಂಕಟಾಪುರ, ಮಾರ್ಗದ ಎಲ್ಲಾ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ವೃದ್ದಿಯಾಗುವ ಜತೆಗೆ 15 ಗ್ರಾಮಗಳ ಕೃಷಿಗೆ ಅನುಕೂಲವಾಗಲಿದೆ. ಸುಮಾರು 2500 ಎಕರೆ ಪ್ರದೇಶದ ತೆಂಗಿನ ತೋಟಗಳಿಗೆ ಈ ಕೆರೆಯ ಅಂತರ್ಜಲವೇ ಪ್ರಮುಖ ಆಧಾರ.
Related Articles
Advertisement
ಕೆರೆ ಏರಿ ದುರಸ್ತಿ ಅವಶ್ಯಸಣ್ಣ ನೀರಾವರಿ ಇಲಾಖೆಯ ನಿರ್ಲಕ್ಷ್ಯದಿಂದ ಕೆರೆಗೆ ನಗರದ ಕೊಳಚೆ ನೀರು ಹರಿದು ಬರುತ್ತಿದೆ. ಕೆರೆಯ ತುಂಬಾ ಬಳ್ಳಾರಿ ಜಾಲಿ ಮುಳ್ಳು ಗಿಡಗಳು ಹೆಚ್ಚು ಬೆಳೆದು ನಿಂತಿವೆ. ಇದನ್ನು ತೆರವು ಪಡಿಸುವ ಕಾರ್ಯ ನಡೆದೇ ಇಲ್ಲ. ಜನ,ಜಾನುವಾರುಗಳಿಗೆ ನೀರು ಮತ್ತು ಮೇವಿನ ತಾಣವಾಗಿದ್ದ ಈ ಕೆರೆ ಅಂಗಳದಲ್ಲಿ ನಗರದ ಕಸವಿಲೇವಾರಿಯಾ ಗುತ್ತಿರುವುದು, ಒಳಚರಂಡಿ ಕಲುಷಿತ ನೀರು ಸೇರುತ್ತಿರುವುದು ಕೆರೆ ಹಾನಿಗೆ ಕಾರಣವಾಗಿದೆ. ಕೆರೆಯ ಎರಿಯೂ ಅನೇಕ ವರ್ಷಗಳಿಂದ ದುರಸ್ತಿಯಾಗದೆ ಶಿಥಿಲವಾಗಿದೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 34 ದೊಡ್ಡಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸಂಬಂಧಿಸಿದಂತೆ 439 ಕೋಟಿ ರೂ ಗಳ ಕ್ರಿಯಾಯೋಜನೆಗೆ ಡಿಪಿಆರ್ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಕೊಳವೆಬಾವಿಗಳು ಅಗತ್ಯಕ್ಕಿಂತಲೂ ಹೆಚ್ಚು ಇರುವ ಕಾರಣ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಕೆರೆಗಳು ಒಣಗಿವೆ.
-ಬಾಲಕೃಷ್ಣ, ಸಹಾಯಕ ಎಂಜಿನಿಯರ್ ಇತಿಹಾಸ ಪ್ರಸಿದ್ಧ ತಿಮ್ಮಪ್ಪನಾಯಕನಕೆರೆ ಏರಿಯು ಶಿಥಿಲವಾಗಿರುವ ಕಾರಣ ದುರಸ್ಥಿ ಕಾರ್ಯಕೈಗೊಳ್ಳಬೇಕಾಗಿದೆ. ನಗರದ ಕೊಳಚೆ ನೀರು ಹರಿದು ಬಂದು ಸೇರುತ್ತಿರುವುದನ್ನು ಹಾಗೂ ತ್ಯಾಜ್ಯಗಳನ್ನು ಜನರು ತಂದು ಹಾಕುತ್ತಿರುವುದನ್ನು ತಪ್ಪಿಸಬೇಕು ಹಾಗೂ ಬಳ್ಳಾರಿ ಜಾಲಿ ಗಿಡಗಳ ತೆರವು ಕಾರ್ಯ ಮಾಡುವ ಮೂಲಕ ಕೆರೆಯ ಪುನಚ್ಛೇತನ ಮಾಡಬೇಕಿದೆ.
-ಸೋಮಶೇಖರ್, ನಾಗತಿಹಳ್ಳಿ ನಿವಾಸಿ