Advertisement

ಗೃಹ ಸಚಿವರು ಹೆಣ್ಣುಮಕ್ಕಳು ಸುರಕ್ಷಿತವಾಗಿ ಓಡಾಡಬಹುದಾದ ಸಮಯ ತಿಳಿಸಲಿ:ಅಮ್ರಪಾಲಿ ಸುರೇಶ್

09:09 PM Aug 28, 2021 | Adarsha |

ತೀರ್ಥಹಳ್ಳಿ:-ಮೈಸೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣ ದೇಶಾದ್ಯಂತ ಸದ್ದು ಸಂಚಲನ ಮಾಡಿದೆ. ಸಮಸ್ತ ನಾಗರಿಕ ಪ್ರಪಂಚ ಈ ಘಟನೆ ಖಂಡಿಸುತ್ತದೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ಈ ಅತ್ಯಾಚಾರ ಪ್ರಕರಣವನ್ನು ಖಂಡಿಸುತ್ತದೆ ಹಾಗೂ  ಅತ್ಯಾಚಾರ ಮಾಡಿದ ಅಪರಾಧಿಗಳು ಯಾವುದೇ ರಾಜ್ಯ, ಯಾವುದೇ ಕೋಮು ಅಥವಾ ಯಾವುದೇ ಪ್ರಾಂತ್ಯ ಭಾಷಿಗರು ಆದರೂ ಅವರು ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ಪಡಿಸುತ್ತದೆ ಎಂದು ಅಮ್ರಪಾಲಿ ಸುರೇಶ್ ತಿಳಿಸಿದ್ದಾರೆ.

Advertisement

ಗ್ರಹ ಎಂದರೆ ಮನೆ, ಗ್ರಹ ಸಚಿವರು ಎಂದರೆ ಮನೆಯ ಮುಖ್ಯಸ್ಥರು ಎಂಬುದು ನಿರ್ವಿವಾದ ,ಮನೆಗೆ ಒಳ್ಳೆಯದಾದರೆ ಟಿಪ್ಪಣಿ ನಿಮಗೇ ಸಲ್ಲುತ್ತದೆ ಅದೇ ಮನೆಯ ಸದಸ್ಯರು ತೊಂದರೆಗೆ ಸಂಕಷ್ಟಕ್ಕೆ ಒಳಗಾದಲ್ಲಿ ಟೀಕೆ ಬರುವುದು ಸಹಜವೇ. ಹಾರ ತುರಾಯಿ ಬಯಸುವ ಜೀವ ಟೀಕೆ ಬಂದಾಗ ಹತಾಶೆಗೆ ಒಳಗಾದರೆ ಹೀಗೆ ನಾಲಿಗೆಯ ಮೇಲಿನ ಹತೋಟಿ ಕಳೆದು ಕೊಂಡರೆ ಹೇಗೆ? ಜಿಲ್ಲೆಯಲ್ಲಿ ಒಬ್ಬ ನಾಯಕರಿಗೆ ಈಗಾಗಲೇ ನಾಲಿಗೆ ಹಾಗೂ ಮೆದುಳಿನ ಮೇಲಿನ ಸಂಪರ್ಕ ಕಳೆದು ಹೋಗಿ ಕೆಲವು ದಶಕಗಳೇ ಕಳೆದು ಹೋಗಿದೆ ನೀವು ಹಾಗೆ ಆಗದಿರಲಿ ಎಂಬ ಕಾಳಜಿ ನಮಗಿದೆ ಎಂದು ನುಡಿದರು.

ಅತ್ಯಾಚಾರದಂತಹ ವಿಷಯದಲ್ಲೂ ತಮಾಷೆ ಮಾಡುವ ನಿಮ್ಮ ಮನಸ್ಥಿತಿಯನ್ನು ಒಪ್ಪಲಾಗದು. ರಾತ್ರಿ ಏಳುವರೆಗೆ ಆ ಹುಡುಗಿಗೆ ಅಲ್ಲಿ ಹೋಗುವ ಕೆಲಸ ಏನಿತ್ತು ಅನ್ನುವ ನೀವು ಬೆಳಿಗ್ಗೆ ಎಂಟು ಮೂವತ್ತಕ್ಕೆ ಶಾಲೆಗೆಂದು ಹೊರಟ ಬಾಲಕಿ ಎರಡೇ ದಿನದಲ್ಲಿ ಶವವಾಗಿ ಮನೆಗೆ ಬರುತ್ತಾಳೆ ತನಿಖಾ ಅಧಿಕಾರಿಗಳು ವರದಿ ನೀಡುವ ಮೊದಲೇ ಅದು ಅತ್ಯಾಚಾರ ಪ್ರಕರಣ ಎಂದು ನೀವು ಘೋಷಣೆ ಮಾಡುತ್ತೀರಿ ಹಾಗೂ ತನಿಖಾ ವರದಿ ಬಂದ ಮೇಲೆ ಅದು ತಿರುಚಿದ ವರದಿ ಇದರ ಹಿಂದೆ ಕೈವಾಡ ಹುನ್ನಾರ ಎಂದು  ಪ್ರತಿಭಟನೆ ಮಾಡುತ್ತೀರ ಪ್ರಚಾರ ಅದರ ಲಾಭ ಎರಡೂ ಪಡೆದು ಅಧಿಕಾರದ ಹುದ್ದೆ ಏರಿದ ನಂತರ ನಿಮಗೆ ಜಾಣ ಕಿವುಡು, ಕುರುಡು ಕಾಡುತ್ತಿದೆ ಅಲ್ಲವೇ?

ಕಾಂಗ್ರೆಸ್ ಪಕ್ಷವು ಈಗ ವಿರೋಧ ಪಕ್ಷದ ಸ್ಥಾನದಲ್ಲಿ ಇದೆ ಆಡಳಿತ ಪಕ್ಷ ಹೊಣೆಗೇಡಿತನ ಪ್ರದರ್ಶನ ಮಾಡಿದರೆ ಅದನ್ನು ಖಂಡಿಸುವ ಕೆಲಸ ಮಾಡುತ್ತದೆ ಅದನ್ನೇ ಮಾಡುತ್ತಿದೆ ,ಟೀಕೆ ಹಾಗೂ ಅತ್ಯಾಚಾರ ಎರಡೂ ಒಂದೇ ಅನ್ನುವ ನಿಮ್ಮ ಮನಸ್ಥಿತಿಯನ್ನು ಒಪ್ಪಲಾಗದು ಎಂದರು.

ನಿಮ್ಮ ಮೇಲೆ ಕಾಂಗ್ರೆಸ್ ಪಕ್ಷ ಅತ್ಯಾಚಾರ ಮಾಡುತಿದ್ದರೆ ಅದನ್ನು ನಾನು ಖಂಡಿಸುತ್ತೇನೆ ಹಾಗೂ ನಿಮ್ಮ ಮೇಲೆ ಅತ್ಯಾಚಾರ ಮಾಡಿದವರು ಅದೆಷ್ಟೇ ಪ್ರಭಾವಶಾಲಿ ಯಾದರು ಅವರು ಮೇಲೆ ಕಠಿಣವಾದ ಕ್ರಮ ತೆಗೆದುಕೊಳ್ಳಲೇ ಬೇಕು ಎಂದು ಆಗ್ರಹಿಸುತ್ತೇನೆ ಎಂದು ಅಮ್ರಪಾಲಿ ಸುರೇಶ್ ಕಿಡಿಕಾರಿದ್ದಾರೆ.

Advertisement

ಈ ಹಿಂದೆ ಕಿಮ್ಮನೆ ರತ್ನಾಕರ್ ಅವರು ಶಿಕ್ಷಣ ಸಚಿವರಾಗಿದ್ದ ಸಮಯದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನಲೆಯಲ್ಲಿ ಲೀಕ್ ಮಿನಿಸ್ಟರ್ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಿಗ್ಗಾ ಮುಗ್ಗಾ ಟೀಕಿಸಿದ್ದ ಇವರ ಹಿಂಬಾಲಕರು ಈಗ ನಾಲಿಗೆ ಲೀಕ್ ಮಿನಿಸ್ಟರ್ ಎಂದು ಒಪ್ಪಿಕೊಳ್ಳುವವರೇ ಎಂದು ಪ್ರಶ್ನಿಸಿದರು.

ಇದನ್ನೂ ಓದಿ:ಮುಂದಿನ ದಿನಗಳಲ್ಲಿ ಕೆಎಚ್‌ಡಿಸಿ ನಿಗಮಕ್ಕೆ ಹೊಸ ಬೆಳಕು – ಸಿದ್ದು ಸವದಿ

ಗ್ರಹ ಸಚಿವರು ನೀಡಿದ ಹೇಳಿಕೆ ನೋಡಿದರೆ ಬೇಸರವಾಗುತ್ತದೆ. ಸ್ವತಃ ಮುಖ್ಯಮಂತ್ರಿ ಗಳೇ ತನಿಖೆಯ ನೇರ ವರದಿ ತಾನಾಗೇ ನೀಡುವಂತೆ ಅಧಿಕಾರಿಗಳಿಗೆ ನಿದರ್ಶನ ನೀಡಿದ್ದಾರೆ ಬಹುಶಃ ಕರ್ನಾಟಕ ಇತಿಹಾಸದಲ್ಲೇ ಪ್ರಥಮ ಉದಾಹರಣೆ ಇದು ಎನ್ನಬಹುದು ಎಂದರು.

ಕಡಿದಾಳು ಮಂಜಪ್ಪ ಶಾಂತವೇರಿ ಗೋಪಾಲಗೌಡ ರಂತಹ ಮಹಾನ್ ನಾಯಕರು ಪ್ರತಿನಿಧಿಸಿದ ಈ ಕ್ಷೇತ್ರದ ಪ್ರತಿಷ್ಠೆ ಸದಾಕಾಲ ಮುಂದುವರೆಯಲಿ ಎಂಬುದು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ನಾಗರೀಕರು ಆಗ್ರಹಿಸುತ್ತಿದ್ದಾರೆ ಎಂದು ಹೇಳಿದರು.

ಸಂತ್ರಸ್ತ ಹೆಣ್ಣು ಮಗಳಿಗೆ ನ್ಯಾಯ ಸಿಗಲಿ ಅತ್ಯಾಚಾರ ಮಾಡಿದ ಕಾಮುಕರಿಗೆ ಕಠಿಣ ಶಿಕ್ಷೆಯಾಗಲಿ ಎಂದು ಅಮ್ರಪಾಲಿ ಸುರೇಶ್ ಪತ್ರಿಕಾ ಹೇಳಿಕೆಯ ಮೂಲಕ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next