Advertisement

Thirthahalli; ಹಾಸ್ಟೆಲ್ ನ ಅಡುಗೆಯಲ್ಲಿ ಪತ್ತೆಯಾಯ್ತಾ ಸತ್ತ ಹಲ್ಲಿ!?

03:43 PM Jun 26, 2024 | Shreeram Nayak |

ತೀರ್ಥಹಳ್ಳಿ: ಪಟ್ಟಣದ ಸೊಪ್ಪುಗುಡ್ಡೆಯಲ್ಲಿರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್‌ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಹಲ್ಲಿ ಬಿದ್ದಿದ್ದ ಸಾರನ್ನೇ ಉಣಬಡಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

Advertisement

ವಿದ್ಯಾರ್ಥಿ ನಿಲಯದಲ್ಲಿ ಬೇಕಾಬಿಟ್ಟಿಯಾಗಿ ಆಹಾರ ವಿತರಿಸಲಾಗುತ್ತಿದೆ. ಸರ್ಕಾರ ನಿಗದಿ ಮಾಡಿರುವಂತೆ ಗುಣಮಟ್ಟದ ಆಹಾರ ನೀಡುತ್ತಿಲ್ಲ. ಹಾಗೂ ಇತ್ತೀಚಿಗೆ ಊಟಕ್ಕಾಗಿ ತಟ್ಟೆ ಹಿಡಿದ ಸಂದರ್ಭದಲ್ಲಿ ನಾಲೈದು ವಿದ್ಯಾರ್ಥಿನಿಯರಿಗೆ ಹಲ್ಲಿಯ ತಲೆ, ಕಾಲು, ಬಾಲದ ತುಂಡುಗಳು ಸಿಕ್ಕಿರುವುದಾಗಿ ಮಾತು ಕೇಳಿ ಬಂದಿದ್ದು ಇದು ಇನ್ನಷ್ಟು ಆತಂಕ ಮೂಡಿಸಿದೆ.

ವಿದ್ಯಾರ್ಥಿನಿಲಯ ಅವ್ಯವಸ್ಥೆಯ ಆಗರವಾಗಿದ್ದು,ಸರಿಯಾಗಿ ನಿರ್ವಹಣೆ ಇಲ್ಲದೆ ಸೋರುತ್ತದೆ.

ಇಲ್ಲಿನ ಸಮಸ್ಯೆಗಳಿಗೆ ಇಲ್ಲಿಯವರೆಗೆ ಪರಿಹಾರ ಸಿಕ್ಕಿಲ್ಲ. ಹಾಸ್ಟೆಲ್ ಅವ್ಯವಸ್ಥೆ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next