Advertisement
ಸಂಭಾವ್ಯ ನೋ ಬಾಲ್‌ಗಾಗಿ ಅಂಪಾಯರ್ ಅಂತಿಮ ಓವರಿನ ಮೂರನೇ ಎಸೆತವನ್ನು ಪರಿಶೀಲಿಸಲು ನಿರಾಕರಿಸಿದ ವೆಳೆ ಪಂತ್ ಅವರು ತನ್ನ ಆಟಗಾರರಾದ ಪೊವೆಲ್ ಮತ್ತು ಕುಲದೀಪ್ ಅವರನ್ನು ಮೈದಾನ ತೊರೆಯುವಂತೆ ಸೂಚಿಸಿದ ಘಟನೆ ಸಂಭವಿಸಿತ್ತು. ಅಂತಿಮವಾಗಿ ಈ ಪಂದ್ಯವನ್ನು ಡೆಲ್ಲಿ 15 ರನ್ನುಗಳಿಂದ ಕಳೆದುಕೊಂಡಿತ್ತು.
Related Articles
Advertisement
ಘಟನೆಯನ್ನು ನೋಡಿದ ಸಹಾಯಕ ಕೋಚ್ ಪ್ರವೀಣ್ ಆಮ್ರೆ ಅಂಪಾಯರ್ ಜತೆ ಮಾಡಲು ಮೈದಾನಕ್ಕೆ ಆಗಮಿಸಿದರು. ಆದರೆ ಅಂಪಾಯರ್ ಅವರನ್ನು ಮರಳುವಂತೆ ಸೂಚಿಸಿದರು.
ಸ್ವಲ್ಪ ಹೊತ್ತಿನ ನಾಟಕೀಯ ಬೆಳವಣಿಗೆಯ ಬಳಿಕ ಪಂದ್ಯ ಪುನರಾರಂಭಗೊಡಿತು. ಆದರೆ ಪೊವೆಲ್ ಇನ್ನುಳಿದ ಮೂರು ಎಸೆತಗಳಲ್ಲಿ ಸಿಕ್ಸರ್ ಬಾರಿಸಲು ವಿಫಲರಾದರು. ಅಂತಿಮವಾಗಿ ಡೆಲ್ಲಿ 15 ರನ್ನುಗಳಿಂದ ಶರಣಾಯಿತು.
ನೋ ಬಾಲ್ ಪ್ರಶ್ನಿಸಲು ಮೈದಾನಕ್ಕೆ ತಂಡದ ಸದಸ್ಯರೊಬ್ಬರನ್ನು ಕಳುಹಿಸಿರುವುದು ಸರಿಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪಂತ್ “ನಿಸ್ಸಂಶಯವಾಗಿ ಇದು ಸರಿಯಲ್ಲ. ಆದರೆ ನಮ್ಮ ಪಾಲಿಗೆ ಆಗಿರುವುದು ಕೂಡ ಸರಿಯಲ್ಲ. ಇದು ಪಂದ್ಯದ ಆ ಕ್ಷಣದಲ್ಲಿ ನಡೆದ ಘಟನೆಯಷ್ಟೇ ಅದಕ್ಕಿಂತ ಹೆಚ್ಚಿನದೇನೂ ಇಲ್ಲ ಎಂದರು.
ಈ ಘಟನೆಯಲ್ಲಿ ಎರಡೂ ಕಡೆಯವರಿಂದ ತಪ್ಪು ಆಗಿದೆ ಎಂದು ಭಾವಿಸಿದ್ದೇನೆ. ನಮ್ಮಿಂದ ಮಾತ್ರ ತಪ್ಪಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಪಂದ್ಯದುದ್ದಕ್ಕೂ ನಾವು ಅಂಪಾಯರ್ ಅವರಿಂದ ಒಳ್ಳೆಯ ಕಾರ್ಯವನ್ನು ಕಂಡಿದ್ದೇವೆ ಎಂದವರು ಹೇಳಿದರು.
ಮೂರನೇ ಎಸೆತವು ಸಿಕ್ಸರ್‌ಗೆ ಹೋಗಿತ್ತು. ಇದೊಂದು ಪುಲ್‌ಟಾಸ್ ಆಗಿತ್ತು ಮತ್ತು ಅಂಪಾಯರ್ ಇದನ್ನು ಸರಿಯಾದ ಎಸೆತ ಎಂದು ಭಾವಿಸಿದ್ದರು. ಆದರೆ ಬ್ಯಾಟ್ಸ್‌ಮನ್ ಇದನ್ನು ನೋ ಬಾಲ್ ಎನ್ನಬೇಕು ಎಂದು ಬಯಸಿದ್ದರು. ಅಂಪಾಯರ್ ಅವರ ತೀರ್ಮಾನ ಸರಿಯಾಗಿತ್ತು ಮತ್ತು ಆ ನಿರ್ಧಾರಕ್ಕೆ ಅಂಟಿಕೊಂಡಿದ್ದರು ಎಂದು ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಹೇಳಿದ್ದಾರೆ.
ಅಂಪಾಯರ್ ನಿರ್ಧಾರವೇ ಅಂತಿಮಮುಂಬಯಿ: ರಾಜಸ್ಥಾನ್ ವಿರುದ್ಧ ಶುಕ್ರವಾರ ನಡೆದ ಐಪಿಎಲ್ ಪಂದ್ಯದ ಅಂತಿಮ ಓವರಿನಲ್ಲಿ ನಡೆದ ಘಟನೆಗೆ ಡೆಲ್ಲಿ ಕ್ಯಾಪಿಟಲ್ಸ್ ವಿರೋಧ ವ್ಯಕ್ತಪಡಿಸಿದೆ. ಇದು ತಪ್ಪು. ಆಟಗಾರರು ಅಂಪಾಯರ್ ಅವರ ನಿರ್ಧಾರವನ್ನು ಒಪ್ಪಿಕೊಳ್ಳಬೇಕು ಮತ್ತು ಪಂದ್ಯ ನಡೆಯುತ್ತಿರುವ ವೇಳೆ ಯಾರಾದರೂ ಮೈದಾನ ಪ್ರವೇಶಿಸುವುದು ಪೂರ್ಣವಾಗಿ ಒಪ್ಪಿಕೊಳ್ಳುವಂತಹ ವಿಷಯವಲ್ಲ ಎಂದು ಡೆಲ್ಲಿಯ ಸಹಾಯಕ ಕೋಚ್ ಶೇನ್ ವಾಟ್ಸನ್ ಹೇಳಿದ್ದಾರೆ. ನೋಡಿ, ಅಂತಿಮ ಓವರಿನಲ್ಲಿ ನಡೆದ ಘಟನೆಯು ನಿರಾಶೆಯನ್ನುಂಟುಮಾಡಿದೆ. ಅಂಪಾಯರ್ ನಿರ್ಧಾರವನ್ನು ನಾವು ಒಪ್ಪಿಕೊಳ್ಳಲೇಬೇಕು. ಅದು ತಪ್ಪು ಅಥವಾ ಸರಿ ಇರಬಹುದು. ನಾವು ಒಪ್ಪಬೇಕಾಗುತ್ತದೆ. ಇದೇ ವೇಳೆ ಮೈದಾನಕ್ಕೆ ತೆರಳುವುದು ಕೂಡ ಸರಿಯಲ್ಲ. ನಾವು ನಿಜವಾಗಿಯೂ ಉತ್ತಮ ಸ್ಥಿತಿಯಲ್ಲಿ ಇರಲಿಲ್ಲ ಎಂದು ವಾಟ್ಸನ್ ಹೇಳಿದ್ದಾರೆ.