Advertisement

ಕೋವಿಡ್ ಲಸಿಕೆ ಪಡೆದಿದ್ದ ಆರೋಗ್ಯ ಕಾರ್ಯಕರ್ತೆ ಸಾವು; ತೆಲಂಗಾಣದಲ್ಲಿ 3ನೇ ಪ್ರಕರಣ

05:29 PM Jan 31, 2021 | Team Udayavani |

ತೆಲಂಗಾಣ: ಕೋವಿಡ್ ಲಸಿಕೆ ತೆಗೆದುಕೊಂಡ ಆರೋಗ್ಯ ಕಾರ್ಯಕರ್ತರೊಬ್ಬರು ಮೃತಪಟ್ಟ ಘಟನೆ ತೆಲಂಗಾಣದಲ್ಲಿ ನಡೆದಿದೆ. ದೇಶಾದ್ಯಂತ ಜನವರಿ 16ರಂದು ಲಸಿಕೆ ಪ್ರಯೋಗ ಆರಂಭಗೊಂಡ ನಂತರ ತೆಲಂಗಾಣದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.

Advertisement

ಮಂಚೇರಿಯಲ್ ಜಿಲ್ಲೆಯ ಕಾಶಿಪೇಟ್ ಗ್ರಾಮದ 55 ವರ್ಷದ  ಆರೋಗ್ಯ ಕಾರ್ಯಕರ್ತೆ ಜನವರಿ 19ರಂದು ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದರು.  ಒಂದು ವಾರದ ಬಳಿಕ ಈ ಆರೋಗ್ಯ ಕಾರ್ಯಕರ್ತೆಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಮಂಚೇರಿಯಲ್ ಜಿಲ್ಲೆಯ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹೈದರಬಾದ್ ಗೆ ಕರೆತರಲಾಗಿತ್ತು. ಆದರೇ ಜನವರಿ 30 ರಂದು ಈ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಈ ಕುರಿತು ಮಾಹಿತಿ ನೀಡಿದ ತೆಲಂಗಾಣದ ಆರೋಗ್ಯ ಇಲಾಖೆ, ಉಸಿರಾಟದ ತೊಂದರೆ ಮತ್ತು ಅಧಿಕ ರಕ್ತದೊತ್ತಡದಿಂದ ಈ ಆರೋಗ್ಯ ಕಾರ್ಯಕರ್ತೆ ಸಾವನ್ನಪ್ಪಿದ್ದಾರೆ ಎಂದು ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ:  ಶಿವಾಜಿ ನಮ್ಮವನೇ.. ಮಹಾರಾಷ್ಟ್ರ ಸರ್ಕಾರ ಮನೆಯೊಂದು ಮೂರು ಬಾಗಿಲಾಗಿದೆ: ಲಕ್ಷ್ಮಣ ಸವದಿ

ಇದಕ್ಕೂ ಮೊದಲು ನಿರ್ಮಲ್ ಮತ್ತು ವಾರಾಂಗಲ್ ಜಿಲ್ಲೆಯ ಆರೋಗ್ಯ ಕಾರ್ಯಕರ್ತರಿಬ್ಬರು ಕೋವಿಡ್ ಲಸಿಕೆ ತೆಗೆದುಕೊಂಡ ಕೆಲವು ದಿನಗಳಲ್ಲೇ ಮೃತಪಟ್ಟಿದ್ದರು.

Advertisement

ಕೋವಿಡ್ ಲಸಿಕಾ ಅಭಿಯಾನ ದೇಶಾದ್ಯಂತ ಆರಂಭಗೊಂಡ ನಂತರ 37 ಲಕ್ಷಕ್ಕಿಂತ ಹೆಚ್ಚು ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕೆಲಸಗಾರರು ಲಸಿಕೆ ಪಡೆದಿದ್ದಾರೆ.

ಇದನ್ನೂ ಓದಿ:  ಜೆಡಿಎಸ್ ಒಂದು ರಾಜಕೀಯ ಪಕ್ಷವೇ ಅಲ್ಲ: ಸಿದ್ದರಾಮಯ್ಯ ಟೀಕೆ

Advertisement

Udayavani is now on Telegram. Click here to join our channel and stay updated with the latest news.

Next