Advertisement

ಒಂದು ವೇಳೆ ಕಠಿಣ ಕ್ರಮ ತೆಗೆದುಕೊಂಡರೆ 3ನೇ ಕೋವಿಡ್ ಅಲೆಯನ್ನು ತಡೆಗಟ್ಟಬಹುದು: ಕೇಂದ್ರ

07:11 PM May 07, 2021 | Team Udayavani |

ನವದೆಹಲಿ: ಭಾರತದಲ್ಲಿ ಕೋವಿಡ್ ಎರಡನೇ ಅಲೆ ಭೀತಿಯನ್ನು ಮೂಡಿಸಿರುವ ನಡುವೆಯೇ ದೇಶದಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಂಡರೆ ಮಾರಣಾಂತಿಕ ಮೂರನೇ ಅಲೆಯನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ತಪ್ಪಿಸಲು ನೆರವಾಗಬಹುದು ಎಂದು ಕೇಂದ್ರ ಸರ್ಕಾರದ ಮುಖ್ಯ ವೈಜ್ಞಾನಿಕ ಸಲಹೆಗಾರ ಕೆ.ವಿಜಯ್ ರಾಘವನ್ ಶುಕ್ರವಾರ(ಮೇ 07) ತಿಳಿಸಿದ್ದಾರೆ.

Advertisement

ಒಂದು ವೇಳೆ ನಾವು ಕಠಿಣ ಹಾಗೂ ಸಮರ್ಪಕ ಕ್ರಮಗಳನ್ನು ತೆಗೆದುಕೊಂಡರೆ ದೇಶದ ಎಲ್ಲೆಡೆ ಕೋವಿಡ್ 19 ಮೂರನೇ ಅಲೆಯ ಸೋಂಕು ಹರಡುವ ಸಾಧ್ಯತೆ ಕಡಿಮೆ ಎಂದು ಹೇಳಿದರು. ಇದು ರಾಜ್ಯ, ಜಿಲ್ಲೆ, ನಗರ ಮತ್ತು ಸ್ಥಳೀಯವಾಗಿ ಯಾವ ಎಷ್ಟು ಪರಿಣಾಮಕಾರಿಯಾಗಿ ನಿರ್ಬಂಧ ಜಾರಿಗೊಳಿಸಲಾಗಿದೆ ಎಂಬುದರ ಮೇಲೆ ಅವಲಂಬಿತವಾಗಿದೆ ಎಂದು ತಿಳಿಸಿದ್ದಾರೆ.

ಮೂರನೇ ಕೋವಿಡ್ ಅಲೆ ಅನಿವಾರ್ಯ ಎಂದು ಹೇಳಿದ ಎರಡು ದಿನಗಳ ನಂತರ, ನಾವು ಬಲವಾದ ಕ್ರಮಗಳನ್ನು ತೆಗೆದುಕೊಂಡರೆ ಕೋವಿಡ್ 3ನೇ ಅಲೆಯನ್ನು ತಡೆಗಟ್ಟಬಹುದಾಗಿದೆ ಎಂದು ಹೇಳಿರುವುದಾಗಿ ಎಎನ್ ಐ ವರದಿ ಮಾಡಿದೆ.

ಸಚಿವಾಲಯದ ಮಾಹಿತಿ ಪ್ರಕಾರ, ಸದ್ಯದ ಎರಡನೇ ಅಲೆಯಲ್ಲಿ ದೇಶದ 12 ರಾಜ್ಯಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಕೋವಿಡ್ ಸಕ್ರಿಯ ಪ್ರಕರಣಗಳಿವೆ, ಏಳು ರಾಜ್ಯಗಳಲ್ಲಿ 50 ಸಾವಿರದಿಂದ ಒಂದು ಲಕ್ಷದವರೆಗೆ ಸಕ್ರಿಯ ಪ್ರಕರಣಗಳಿವೆ ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next