Advertisement

ಅಂಗಡಿ ವ್ಯಾಪಾರಿಗಳಿಂದ ಫ‌ುಟ್‌ಪಾತ್‌ ಒತ್ತುವರಿ

06:10 PM Oct 17, 2019 | Team Udayavani |

ತಿಪಟೂರು: ನಗರ ಬೆಳೆದಂತೆ ಜನಸಂಖ್ಯೆ ಮತ್ತು ವಾಹನಗಳ ಸಂಖ್ಯೆ ದುಪ್ಪಟ್ಟಾಗುತ್ತಿರುವುದರಿಂದ ಪಾದಚಾರಿಗಳಿಗೆ ಓಡಾಡಲು ಜಾಗವೇ ಇಲ್ಲದಂತಾಗಿದ್ದು, ನಗರಸಭೆ ಕೂಡಲೇ ಫ‌ುಟ್‌ಪಾತ್‌ ತೆರವು ಮಾಡಬೇಕೆಂದು ಸಾರ್ವಜನಿಕರ ಒತ್ತಾಯಿಸಿದ್ದಾರೆ.

Advertisement

ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 206ರ ಎರಡೂ ಬದಿ ಫ‌ುಟ್‌ಪಾತ್‌ ನಿರ್ಮಿಸಿಲ್ಲ. ಹೆದ್ದಾರಿ ಅಕ್ಕಪಕ್ಕದಲ್ಲಿದ್ದ ಚರಂಡಿಗಳ ಮೇಲೆಯೇ ಸಾರ್ವಜನಿಕರು ಓಡಾಡುತ್ತಿದ್ದು, ಇದಕ್ಕೆ ಕಂಬಿ ಅಳವಡಿಸಿ ಅನುಕೂಲ ಕಲ್ಪಿಸಲಾಗಿದೆ. ಆದರೆ ಆ ಸ್ಥಳದಲ್ಲಿ ಪೆಟ್ಟಿಗೆ ಅಂಗಡಿ ತೆರೆದು ವ್ಯಾಪಾರ-ವಹಿವಾಟು ನಡೆಸಲಾಗುತ್ತಿದೆ. ಇದರಿಂದ ಜನರು ಬಿ.ಎಚ್‌. ರಸ್ತೆ ಅವಲಂಬಿ ಸುವಂತಾಗಿದ್ದು, ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿದೆ. ಇದಕ್ಕೆ ನಗರಸಭೆ ಹಾಗೂ ಪೊಲೀಸ್‌ ಅಧಿಕಾರಿಗಳೇ ನೇರ ಹೊಣೆಯಾಗಲಿದ್ದಾರೆ.

ನಗರಸಭೆ ನಿರ್ಲಕ್ಷ್ಯ: ಫ‌ುಟ್‌ಪಾತ್‌ ತೆರವಿಗೆ ನಗರಸಭೆ
ಮೀನಮೇಷ ಎಣಿಸುತ್ತಿದ್ದು, ಇತ್ತೀಚೆಗೆ ಕೆಲವು ಕಡೆ ಅಂಗಡಿಗಳ ಮುಂಭಾಗದ ಛಾವಣಿ ಕಿತ್ತಿರುವುದು ಬಿಟ್ಟರೆ ಸಂಪೂರ್ಣ ತೆರವು ನನೆಗುದಿಗೆ ಬಿದ್ದಿದೆ.

ಸಾರ್ವಜನಿಕ ಜಾಗಗಳನ್ನು ಫ‌ುಟ್‌ಪಾತ್‌ ವ್ಯಾಪಾರಿಗಳೇ ಆವರಿಸಿಕೊಂಡಿರುವುದರಿಂದ ದ್ದಾರೆ.
ವದ್ದು,ಸುಗಮ ಸಂಚಾರಕ್ಕೆ ತೊಂದರೆ ಯಾಗಿದೆ. ನಗರಸಭೆ, ಪೊಲೀಸ್‌ ಇಲಾಖೆ ಜಂಟಿ ಸರ್ವೆ ನಡೆಸಿ ಸಮಸ್ಯೆ ನಿವಾರಿಸುತ್ತಿಲ್ಲ. ಕೆಲ ಪೊಲೀಸರು, ನಗರಸಭೆ ಅಧಿಕಾರಿಗಳು ಮಾಮೂಲಿ ಪಡೆದು ವ್ಯಾಪಾರ ಮಾಡಲು ಸಹಕರಿಸುತ್ತಿ ದ್ದಾರೆಂಬುದು ಸಾರ್ವಜನಿಕರ ಆರೋಪ.

ಜಿಲ್ಲಾಧಿಕಾರಿ, ಎಸ್‌ಪಿಗೆ ಒತ್ತಾಯ: ನಗರದ ಹೆದ್ದಾರಿ ಅಕ್ಕಪಕ್ಕದ ಫ‌ುಟ್‌ಪಾತ್‌ ಅಷ್ಟೇ ಅಲ್ಲದೇ, ಟಿ.ಬಿ.ಸರ್ಕಲ್‌, ಹಾಸನ ಸರ್ಕಲ್‌, ಕೋಡಿ ಸರ್ಕಲ್‌, ಸಿಂಗ್ರಿ ನಂಜಪ್ಪ ಸರ್ಕಲ್‌ಗ‌ಳಲ್ಲೂ ಇದೆ ಕತೆ. ನಗರಸಭೆ ಅಧಿಕಾರಿಗಳು ಹಾಗೂ ಪೊಲೀಸರ ಎದುರಿನಲ್ಲೇ ನಡೆಯುತ್ತಿದ್ದರೂ ಕ್ರಮ ತೆಗದು ಕೊಂಡಿಲ್ಲ.ಜಿಲ್ಲಾಧಿಕಾರಿ ಹಾಗೂ ಎಸ್ಪಿ ಖುದ್ದು ಪರಿಶೀಲಿಸಿ ದಿಟ್ಟ ಕ್ರಮ ಜರುಗಿಸಬೇಕಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next