Advertisement

‘ವಿವಿಯನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸುವ ಚಿಂತನೆ’

11:28 PM Jul 06, 2019 | Team Udayavani |

ಮಂಗಳಗಂಗೋತ್ರಿ: ವಿವಿಯಲ್ಲಿ ಹಳೆ ವಿಚಾರವನ್ನು ಕೆದಕದೆ ಮುಂದಿನ ನಾಲ್ಕು ವರ್ಷ ನಡೆಸುವ ಆಡಳಿತದಲ್ಲಿ ದಕ್ಷತೆ, ಪ್ರಾಮಾಣಿಕತೆ, ಪಾರದರ್ಶಕತೆ ಹಾಗೂ ಅಭಿವೃದ್ಧಿ ಜತೆಗೆ ವಿವಿಯನ್ನು ಇನ್ನಷ್ಟು ಎತ್ತರಕ್ಕೆ ಬೆಳಸುವ ಬಗ್ಗೆಯೇ ಚಿಂತನೆ ಇದೆ. ಸ್ಥಳೀಯ ವ್ಯಕ್ತಿ ಕುಲಪತಿಯಾಗಿರುವುದರಿಂದ ನನ್ನ ಮೇಲೆ ಬಹಳಷ್ಟು ಜವಬ್ದಾರಿ ಇದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ನೂತನ ಉಪ ಕುಲಪತಿ ಪ್ರೊ| ಪಿ.ಎಸ್‌. ಯಡಪಡಿತ್ತಾಯ ಹೇಳಿದರು.

Advertisement

ಮಂಗಳೂರು ವಿಶ್ವವಿದ್ಯಾಲಯ ಶಿಕ್ಷಕರ ಅಸೋಸಿಯೇಶನ್‌ (ಮುಟಾ) ಹಾಗೂ ವಿಶ್ವವಿದ್ಯಾಲಯದ ಎಸ್‌ಸಿ- ಎಸ್‌ಟಿ ಉದ್ಯೋಗಿಗಳ ಸಂಘದ ಸಹಯೋಗದಲ್ಲಿವಿವಿಯ ಉಪನ್ಯಾಸ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಸಮ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಈ ಶೈಕ್ಷಣಿಕ ಸಾಲಿನಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿತರಿಸುವ ಪದ್ಧತಿಯನ್ನು ನಿಲ್ಲಿಸುವ ಚಿಂತನೆ ಇದ್ದು, ಪ್ರಶಸ್ತಿ ಕೊಡಲೇಬೇಕು ಎಂದು ಶಿಕ್ಷಕರು ಒತ್ತಾಯಿಸಿದರೆ ನನ್ನದೇನು ಅಭ್ಯಂತರ ಇಲ್ಲ. ಎಲ್ಲ ಶಿಕ್ಷಕರು ಅತ್ಯುತ್ತಮ ಶಿಕ್ಷಕರೇ ಆಗಿರುವುದರಿಂದ ಉತ್ತಮ ಶಿಕ್ಷಕರ ಅಯ್ಕೆ ಕಠಿನ ಸವಾಲಾಗಿದೆ ಎಂದರು.

ಕಾಲೇಜುಗಳಲ್ಲಿ ಶಿಸ್ತು ತಂಡ

ಪುತ್ತೂರು ಕಾಲೇಜಿನ ಪ್ರಕರಣದ ಬಳಿಕ 210 ಕಾಲೇಜುಗಳಲ್ಲಿ ಶಿಸ್ತಿಗಾಗಿ ತಂಡ ರಚಿಸುವ ಕುರಿತಾಗಿ ಮಾತುಕತೆ ನಡೆಸಿದ್ದೇವೆ. ಮಾಹಿತಿ ಅಭಾವ ಕೊರತೆ ಇದೆ. ಜಾಗೃತಿಯನ್ನು ಮೂಡಿಸಬೇಕಿದೆ ಎಂದು ಹೇಳಿದರು.

Advertisement

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೂಟಾ ಅಧ್ಯಕ್ಷ ಪ್ರೊ| ವಿಶ್ವನಾಥ್‌ ಮಾತನಾಡಿ, ಹಿಂದಿನ ಕುಲಪತಿಗಳಿಗೆ ಎಸ್‌ಸಿ, ಎಸ್‌ಟಿ ಉಪನ್ಯಾಸಕರ ಮೇಲಾಗುತ್ತಿದ್ದ ತೊಂದರೆಗಳ ಕುರಿತು ಮಾತನಾಡಿದ್ದು ಅವರಿಗೆ ಪಥ್ಯವಾಗಲಿಲ್ಲ. ಮೂವತ್ತು ಲಕ್ಷ ರೂ. ಶುಲ್ಕ ಸಿಗುವ ವಿದೇಶಿ ವಿದ್ಯಾರ್ಥಿಗಳಿಗೆ 40 ಕೋಟಿ ರೂ. ವೆಚ್ಚದಲ್ಲಿ ಇಂಟರ್‌ ನ್ಯಾಶನ‌ಲ್ ಹಾಸ್ಟೆಲ್ ಕಟ್ಟಡ ಬೇಕಿದೆಯೇ? ಹಾಗಿದ್ದರೆ ಇತರ ವಿದ್ಯಾರ್ಥಿಗಳಿಗೆ ಏನು ಕೊಟ್ಟಿದ್ದೇವೆ. ಹಾಗಾಗಿ ನೂತನ ಕುಲಪತಿಗಳು ಹಳೆಯ ಬಹಳಷ್ಟು ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದರು.

ಪ್ರೊ| ಮಲ್ಲಿಕಾರ್ಜುನ, ಪ್ರೊ| ಕಿಶೋರಿ ನಾಯಕ್‌ಪ್ರೊ| ಕೆ.ಕೆ. ಆಚಾರ್‌, ಪ್ರೊ|ಪಿ.ಎಲ್. ಧರ್ಮ, ಪ್ರೊ| ಉಮೇಶ್‌ ಚಂದ್ರ ಮಾತನಾಡಿದರು.

ಕುಲಸಚಿವ ಪ್ರೊ| ಎ.ಎಂ. ಖಾನ್‌, ಪ್ರೊ| ಬಾಲಕೃಷ್ಣ, ಪ್ರೊ| ಮಲ್ಲಿಕಾರ್ಜುನಪ್ಪ. ಪ್ರೊ| ದೇವೇಂದ್ರಪ್ಪ ಉಪಸ್ಥಿತರಿದ್ದರು.

ಪ್ರೊ| ಜಗದೀಶ್‌ ಪ್ರಸಾದ್‌ ಸ್ವಾಗತಿಸಿದರು. ಕನ್ನಡ ವಿಭಾಗ ಪ್ರಾಧ್ಯಾಪಕ ಡಾ| ಧನಂಜಯ ಕುಂಬ್ಳೆ ನಿರೂಪಿಸಿದರು. ಉಪನ್ಯಾಸಕ ವಿಜಯರಾಜ್‌ ವಂದಿಸಿದರು.

ಪ್ರಸಾರಾಂಗದ ಮೂಲಕ ಬಹಳಷ್ಟು ಸ್ಥಳೀಯ ಸಾಧಕರ ಕೃತಿಗಳನ್ನು ಹೊರತರಬೇಕಾಗಿದೆ. ದಕ್ಷತೆಗೆ ಬಹಳಷ್ಟು ಕಠಿನ ಕ್ರಮಗಳ ಕಡೆಗೆ ಗಮನ ಹರಿಸಿದ್ದೇನೆ. ಪ್ಲಾಸ್ಟಿಕ್‌ ಮುಕ್ತ ವಿವಿ, ಹೊಟೇಲ್, ಇ- ಗವರ್ನೆನ್ಸ್‌, ನಾಲ್ಕು ವರ್ಷದಲ್ಲಿ ವಿವಿಯನ್ನು ಪೇಪರ್‌ ಲೆಸ್‌ ಮಾಡುವ ಬಹಳಷ್ಟು ಯೋಜನೆಗಳಿದ್ದು 12 ಜನರ ಥಿಂಕ್‌ ಟ್ಯಾಂಕ್‌ ಸಲಹಾ ಸಮಿತಿ ರಚಿಸಿದ್ದು, ಅವರ ಎಲ್ಲರ ಸಹಕಾರ ಪಡೆಯಲಿದ್ದೇನೆ ಎಂದು ಪ್ರೊ| ಪಿ.ಎಸ್‌.ಎಡಪಡಿತ್ತಾಯ ಹೇಳಿದರು.

ದಕ್ಷತೆಗೆ ಕ್ರಮ
ಪ್ರಸಾರಾಂಗದ ಮೂಲಕ ಬಹಳಷ್ಟು ಸ್ಥಳೀಯ ಸಾಧಕರ ಕೃತಿಗಳನ್ನು ಹೊರತರಬೇಕಾಗಿದೆ. ದಕ್ಷತೆಗೆ ಬಹಳಷ್ಟು ಕಠಿನ ಕ್ರಮಗಳ ಕಡೆಗೆ ಗಮನ ಹರಿಸಿದ್ದೇನೆ. ಪ್ಲಾಸ್ಟಿಕ್‌ ಮುಕ್ತ ವಿವಿ, ಹೊಟೇಲ್, ಇ- ಗವರ್ನೆನ್ಸ್‌, ನಾಲ್ಕು ವರ್ಷದಲ್ಲಿ ವಿವಿಯನ್ನು ಪೇಪರ್‌ ಲೆಸ್‌ ಮಾಡುವ ಬಹಳಷ್ಟು ಯೋಜನೆಗಳಿದ್ದು 12 ಜನರ ಥಿಂಕ್‌ ಟ್ಯಾಂಕ್‌ ಸಲಹಾ ಸಮಿತಿ ರಚಿಸಿದ್ದು, ಅವರ ಎಲ್ಲರ ಸಹಕಾರ ಪಡೆಯಲಿದ್ದೇನೆ ಎಂದು ಪ್ರೊ| ಪಿ.ಎಸ್‌.ಎಡಪಡಿತ್ತಾಯ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next