Advertisement
ಕೆಯ್ಯೂರು ಗ್ರಾಮಸ್ಥರ ಮಾದರಿ ಗ್ರಾಮದ ಕನಸು ‘ವಿಷನ್ 2025’ ಇದರ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡ ಇಬ್ರಾಹಿಂ ವಿವಿಧ ಸಂಘ ಸಂಸ್ಥೆಗಳು, ಧಾರ್ಮಿಕ ಕೇಂದ್ರ ಸಮಿತಿಗಳು ಹಾಗೂ ಗ್ರಾಮಸ್ಥರ ಸಹಭಾಗಿತ್ವದಿಂದ ‘ಹಸುರು ಕೆಯ್ಯೂರು’ ಸಾಕಾರಗೊಳಿಸುವ ಆಶಯವನ್ನು ಮುಂದಿಟ್ಟಿದ್ದಾರೆ.
ಕಟ್ಟತ್ತಾರು ಹಾಗೂ ಅಂಕತ್ತಡ್ಕ ನಡುವೆ ಕೆಯ್ಯೂರು ಗ್ರಾಮದ ವ್ಯಾಪ್ತಿ ಇದೆ. ಈ 3 ಕಿ.ಮೀ. ಉದ್ದದ ರಸ್ತೆ ಎರಡೂ ಕಡೆಗಳಲ್ಲಿ ಸಾಲು ಮರಗಳನ್ನು ನೆಟ್ಟು ಬೆಳೆಸುವ ಗುರಿ ಹೊಂದಲಾಗಿದೆ. ಪಾರ್ಕ್ ನಿರ್ಮಾಣ
ಕಟ್ಟತ್ತಾರು, ಕೆಯ್ಯೂರು, ಶಾಲೆ ಬಳಿ, ಸಂತೋಷ್‌ನಗರ, ಮಾಡಾವು ಕಟ್ಟೆ, ಅಂಕತ್ತಡ್ಕ ಜಂಕ್ಷನ್‌ಗಳಲ್ಲಿ ಹಸುರು ಹುಲ್ಲಿನ ಪಾರ್ಕ್ ನಿರ್ಮಾಣ ಮಾಡುವುದು. ಪ್ರತಿಯೊಂದು ಅಂಗಡಿ, ಕಟ್ಟಡ ಮಾಲಕರು ತಮ್ಮ ಕಟ್ಟಡದ ಎದುರು ಭಾಗದಲ್ಲಿ ಹಸುರು ಹುಲ್ಲಿನ ಪಾರ್ಕ್ ಮಾಡಿ, ಅದನ್ನು ನಿರ್ವಹಿಸುವುದು ಯೋಜನೆಯ ಭಾಗವಾಗಿದೆ.
Related Articles
ಅಂತರ್ಜಲ ವೃದ್ಧಿಗೆ ಇಂಗು ಗುಂಡಿ ಅತೀ ಅಗತ್ಯ. ಪ್ರತಿ ಮನೆಯಲ್ಲೂ ಇಂಗು ಗುಂಡಿ ನಿರ್ಮಾಣ ಮಾಡಿ ಅಂರ್ತಜಲ ಮಟ್ಟ ಹೆಚ್ಚಿಸಲು ಆದ್ಯತೆ ನೀಡುವ ಯೋಜನೆ ರೂಪಿಸಲಾಗಿದೆ. ಈ ಬಗ್ಗೆ ಇಬ್ರಾಹಿಂ ಅವರು ಸಭೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
Advertisement
ಶಿವರಾಮ ರೈ ಕಜೆ, ನಿವೃತ್ತ ತಹಶೀಲ್ದಾರ್ ವಿಶ್ವನಾಥ ಪೂಜಾರಿ, ಕೆಯ್ಯೂರು ಗ್ರಾ.ಪಂ. ಅಧ್ಯಕ್ಷ ಬಾಬು ಬಿ., ಉಪಾಧ್ಯಕ್ಷ ರಾಧಾಕೃಷ್ಣ ಗೌಡ, ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ, ಶರತ್ ಕುಮಾರ್ ಮಾಡಾವು, ಸಿಆರ್‌ಪಿ ಅಬ್ದುಲ್ ಬಶೀರ್, ಕೆಯ್ಯೂರು ಪ್ರೌಢಶಾಲಾ ಮುಖ್ಯಗುರು ವಿನೋದ್ ಕುಮಾರ್ ಕೆ.ಎಸ್., ಆನಂದ ರೈ ದೇವಿನಗರ, ಜಯರಾಮ ಶೆಟ್ಟಿ ಇಳಂತಾಜೆ ಮುಂತಾದವರೂ ಈ ಕನಸಿಗೆ ನೀರೆರೆಯುತ್ತಿದ್ದಾರೆ.
ಬೆಂಬಲ ಇದೆಶಿಕ್ಷಕ ಇಬ್ರಾಹಿಂ ಒಂದು ಒಳ್ಳೆಯ ಕನಸನ್ನು ಗ್ರಾಮದ ಜನರ ಮುಂದಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಹಸುರು ಅತೀ ಮುಖ್ಯ. ಈ ಯೋಚನೆ, ಯೋಜನೆಗೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು ಸ್ಥಳೀಯರಾದ ದಂಬೆಕಾನ ಸದಾಶಿವ ರೈ ಹೇಳಿದ್ದಾರೆ. ಸೋಮವಾರಪೇಟೆಯ ಮೇರುಗಲಲೆ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿರುವ ಇಬ್ರಾಹಿಂ ಕೆಯ್ಯೂರು ಗ್ರಾಮದ ಮಾಡಾವು ನಿವಾಸಿ. ಮೇರುಗಲಲೆ ಶಾಲೆಯಲ್ಲಿ ಲ್ಯಾಬ್ ನಿರ್ಮಾಣದ ಮೂಲಕ ರಾಷ್ಟ್ರಮಟ್ಟದಲ್ಲಿ ಅವರು ಸುದ್ದಿಯಾಗಿದ್ದರು. ಪರಿಸರಕ್ಕೆ ಹೆಚ್ಚಿನ ಒತ್ತು ನೀಡುವ ಇವರು ಮರ-ಗಿಡಗಳನ್ನು ಬೆಳೆಸುವಲ್ಲಿ ಅಪಾರ ಕಾಳಜಿ ಹೊಂದಿದ್ದಾರೆ. ಶಾಲಾ ಆವರಣದಲ್ಲೂ ಹಸುರಿಗೆ ಹೆಚ್ಚಿನ ಒತ್ತು ನೀಡಿರುವ ಅವರು, ಮಕ್ಕಳಲ್ಲಿ ಪರಿಸರ ಜಾಗೃತಿಯನ್ನು ಎಳೆಯ ಪ್ರಾಯದಲ್ಲೇ ಮೂಡಿಸಬೇಕಾಗಿದೆ ಎನ್ನುತ್ತಾರೆ. ಶಿಕ್ಷಕನ ಕನಸು
ಸೋಮವಾರಪೇಟೆಯ ಮೇರುಗಲಲೆ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿರುವ ಇಬ್ರಾಹಿಂ ಕೆಯ್ಯೂರು ಗ್ರಾಮದ ಮಾಡಾವು ನಿವಾಸಿ. ಮೇರುಗಲಲೆ ಶಾಲೆಯಲ್ಲಿ ಲ್ಯಾಬ್ ನಿರ್ಮಾಣದ ಮೂಲಕ ರಾಷ್ಟ್ರಮಟ್ಟದಲ್ಲಿ ಅವರು ಸುದ್ದಿಯಾಗಿದ್ದರು. ಪರಿಸರಕ್ಕೆ ಹೆಚ್ಚಿನ ಒತ್ತು ನೀಡುವ ಇವರು ಮರ-ಗಿಡಗಳನ್ನು ಬೆಳೆಸುವಲ್ಲಿ ಅಪಾರ ಕಾಳಜಿ ಹೊಂದಿದ್ದಾರೆ. ಶಾಲಾ ಆವರಣದಲ್ಲೂ ಹಸುರಿಗೆ ಹೆಚ್ಚಿನ ಒತ್ತು ನೀಡಿರುವ ಅವರು, ಮಕ್ಕಳಲ್ಲಿ ಪರಿಸರ ಜಾಗೃತಿಯನ್ನು ಎಳೆಯ ಪ್ರಾಯದಲ್ಲೇ ಮೂಡಿಸಬೇಕಾಗಿದೆ ಎನ್ನುತ್ತಾರೆ.
ಪ್ರಕೃತಿ ಪರ
ಪ್ರಕೃತಿ ಮಾರಕವಾದರೆ ಅಪಾಯ ಕಟ್ಟಿಟ್ಟ ಬುತ್ತಿ. ಆದ್ದರಿಂದ ಪ್ರಕೃತಿಯನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ಇದು ಆಂದೋಲನದ ರೀತಿಯಲ್ಲಿ ನಡೆಯಬೇಕು. ಸಂಘ ಸಂಸ್ಥೆಗಳು ಸಹಕಾರ ನೀಡಬೇಕು. – ಬಾಲಕೃಷ್ಣ ರೈ ನೆಟ್ಟಾಳ, ಸ್ಥಳೀಯರು
ಅರಣ್ಯ ನಾಶ ಸಲ್ಲದು
ಇದು ಒಳ್ಳೆಯ ಯೋಚನೆ. ನಾವು ಮರ ಕಡಿಯುವುದನ್ನು ನಿಲ್ಲಿಸಬೇಕು. ನೆಟ್ಟ ಗಿಡಗಳನ್ನು ಉಳಿಸಿ ಬೆಳೆಸಬೇಕು. ಕೆಯ್ಯೂರನ್ನು ಹಸುರು ಗ್ರಾಮವನ್ನಾಗಿಸುವ ಕನಸಿಗೆ ಸಹಕಾರ ನೀಡುತ್ತೇವೆ.
– ಶಶಿಧರ್ ರಾವ್ ಬೊಳಿಕ್ಕಲ, ಅಧ್ಯಕ್ಷರು, ಕೆಯ್ಯೂರು-ಕೆದಂಬಾಡಿ ಸಿಎ ಬ್ಯಾಂಕ್
– ಶಶಿಧರ್ ರಾವ್ ಬೊಳಿಕ್ಕಲ, ಅಧ್ಯಕ್ಷರು, ಕೆಯ್ಯೂರು-ಕೆದಂಬಾಡಿ ಸಿಎ ಬ್ಯಾಂಕ್