Advertisement

Mining: ಗಣಿಗಾರಿಕೆ ಸರಳಗೊಳಿಸುವ ಚಿಂತನೆ: ಮಹದೇವಪ್ಪ

11:03 PM Aug 11, 2023 | Team Udayavani |

ಬೆಂಗಳೂರು: ಅರಣ್ಯ ಪ್ರದೇಶ ಹಾಗೂ ವಾತಾವರಣ ಎರಡರಲ್ಲೂ ಸಮತೋಲನ ಕಾಪಾಡಿ ಕೊಂಡು ಗಣಿಗಾರಿಕೆಯನ್ನು ಸರಳಗೊಳಿಸುವ ಬಗ್ಗೆ ಸರಕಾರ ಚಿಂತನೆ ನಡೆಸುತ್ತಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ| ಎಚ್‌. ಸಿ. ಮಹದೇವಪ್ಪ ತಿಳಿಸಿದರು.

Advertisement

ದಿ ಇನ್‌ಸ್ಟಿಟ್ಯೂಟ್‌ ಆಫ್ ಎಂಜಿನಿ ಯರ್ (ಭಾರತ) ಶುಕ್ರವಾರ ಆಯೋಜಿಸಿದ್ದ 33ನೇ ರಾಷ್ಟ್ರೀಯ ಗಣಿ ಎಂಜಿನಿಯರ್‌ಗಳ ಸಮಾವೇಶ ಹಾಗೂ “ತಿದ್ದುಪಡಿ ಮಾಡಿದ ಗಣಿ ನಿಯಮಗಳು ಮತ್ತು ಗಣಿಗಾರಿಕೆ ಉದ್ಯಮದ ಮೇಲಿನ ಪರಿಣಾಮ’ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಗಣಿಗಾರಿಕೆ ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿ ಸುತ್ತದೆ. ಕೈಗಾರಿಕೆ, ಉದ್ಯೋಗ, ಮೂಲಸೌಕ ರ್ಯಗಳ ಪೂರೈಕೆಗೆ ಗಣಿಗಾರಿಕೆ ಹೆಚ್ಚು ಸಹಕಾರಿಯಾಗಿ ನಿಂತಿದೆ. ಆದರೂ ಈ ಉದ್ಯಮವು ಅನೇಕ ಸಮಸ್ಯೆಗಳನ್ನು ಎದುರಿಸು ತ್ತಿದೆ. ಅದರಲ್ಲಿ ಮುಖ್ಯವಾಗಿ ಅರಣ್ಯ ಇಲಾಖೆ ನಡುವಿನ ತಿಕ್ಕಾಟ ಬಹಳ ಕಾಲದಿಂದಲೂ ಇದೆ. ಇಂತಹ ವಿವಿಧ ಸಮ ಸ್ಯೆಗಳನ್ನು ಗಮನದಲ್ಲಿಟ್ಟು ಕೊಂಡು ಸಿಎಂ ಸಿದ್ದರಾಮಯ್ಯ ಹಾಗೂ ಅರಣ್ಯ ಸಚಿವರೊಂದಿಗೆ ಚರ್ಚಿಸಿ, ಗಣಿಗಾರಿಕೆಗೆ ಅನುಕೂಲ ವಾಗುವಂಥ ನಿಯಮ  ರೂಪಿಸಲು ನಿರ್ಧರಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next