ಹೊಸದಿಲ್ಲಿ: ಸೋಶಿಯಲ್ ಮೀಡಿಯಾ ವೇದಿಕೆಯಿಂದ ಹೊರ ಹೋಗುತ್ತಿದ್ದೇನೆ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಅಚ್ಚರಿಯ ಘೋಷಣೆ ಮಾಡಿದ್ದಾರೆ. ಈ ಕುರಿತಂತಹ ತಮ್ಮ ಮುಂದಿನ ನಡೆಯನ್ನುಟ್ವೀಟರ್ ಖಾತೆ ಮೂಲಕವೇ ಪ್ರಕಟಿಸಿದ್ದಾರೆ. ಇದು ಸಹಜವಾಗಿಯೇ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚು ಬೆಂಬಲಿಗರನ್ನು ಹೊಂದಿರುವ ಮೋದಿಯವರು ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂ ಹಾಗೂ ಯೂ ಟ್ಯೂಬ್ ಖಾತೆಯಿಂದ ಅಂತರ ಕಾಯ್ದುಕೊಳ್ಳಲಿದ್ದಾರೆ. ತಾನು ನೇರವಾಗಿ ಬಳಸುವುದಿಲ್ಲ ಎಂದು ಹೇಳದಿದ್ದರೂ, ಆ ಅರ್ಥ ಬರುವಂತಹ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ.
ದಿಲ್ಲಿ ಹಿಂಸಾಚಾರ ಕಾರಣ!
ರಾಷ್ಟ್ರ ರಾಜಧಾನಿ ದಿಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೇಶ-ವಿದೇಶಗಳಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ. ಸಾಮಾಜಿಕ ಜಾಲತಾಣಗಳ ಮೂಲಕ ಜನರು ಸಾಕಷ್ಟು ದ್ವೇಷದ ಸಂದೇಶವನ್ನು ಕಳುಹಿಸುತ್ತಿರುವ ಬಗ್ಗೆಯೂ ಸಾಕಷ್ಟು ಮಾತುಗಳು ಕೇಳಿಬರುತ್ತಿವೆ. ಈ ನಡುವೆ ಪ್ರಧಾನ ಮಂತ್ರಿಗಳು ಈ ಘೋಷಣೆ ಮಾಡಿದ್ದಾರೆ.
ಜಾಗೃತಿ ಮೂಡಿಸುತ್ತಾರಾ?
ಸಾಮಾಜಿಕ ಜಾಲತಾಣಗಳ ದುರ್ಬಳಕೆ ಹೆಚ್ಚಾಗುತ್ತಿರುವ ಈ ಬೆನ್ನÇÉೇ ಪ್ರಧಾನಿ ನರೇಂದ್ರ ಮೋದಿ ಇಂತಹದೊಂದು ಟ್ವೀಟ್ ಮಾಡಿರುವುದು ತೀವ್ರ ಕುತೂಹಲಕ್ಕೆ ಆಹಾರವಾಗಿದೆ. ಮಾನ್ಯ ಪ್ರಧಾನ ಮಂತ್ರಿಗಳ ಟ್ವೀಟ್‌ಗೂ ದಿಲ್ಲಿ ಗಲಭೆಗೂ ಸಂಬಂಧವಿದೆಯೇ ಎಂಬ ಚೆರ್ಚೆಗಳು ನಡೆಯುತ್ತಿವೆ. ಸಾಮಾಜಿಕ ಜಾಲತಾಣಗಳ ಬಳಕೆ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಇಂತಹ ನಿರ್ಧಾರ ಮಾಡಿರುವ ಸಾಧ್ಯತೆಯೂ ಇದೆ.
Related Articles
ಮತ್ತೂಂದು ವಿಶ್ಲೇಷಣೆ ಪ್ರಕಾರ ಇನ್ನು ಪರೀಕ್ಷೆಗಳು ಆರಂಭವಾಗಲಿದ್ದು, ವಿದ್ಯಾರ್ಥಿಗಳಿಗೆ ಸಂದೇಶವೊಂದನ್ನು ರವಾನಿಸುವ ನಿಟ್ಟಿನಲ್ಲಿ ಈ ನಡೆ ಅನುಸರಿಸಿರುವ ಸಾಧ್ಯತೆ ಇದೆ. ಇತ್ತೀಚೆಗೆ “ಮನ್ ಕೀ ಬಾತ್’ನಲ್ಲಿ ಪ್ರಧಾನಿಗಳು ಪರೀಕ್ಷೆಯ ಕುರಿತು ವಿಶೇಷವಾಗಿ ಉಲ್ಲೇಖೀಸಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ “ಮೈ ಭಿ ಚೌಕಿದಾರ್’ ಅಭಿಯಾನದ ಮೂಲಕ ಭಾರೀ ಸುದ್ದಿಯಾಗಿದ್ದರು. ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ತಲುಪಿ, ಅದನ್ನು ಒಂದು ವೇದಿಕೆಯನ್ನಾಗಿಸಿದ್ದರು. ಪ್ರಧಾನಿಗಳ ಈ ನಡೆಯನ್ನು ಬಿಜೆಪಿ ಸಂಸದರು, ಸಚಿವರು, ಶಾಸಕರು ಬೆಂಬಲಿಸಿದ್ದು, ನಾವೂ ನಿಮ್ಮ ಜತೆ ಇರಲಿದ್ದೇವೆ ಎಂದಿದ್ದಾರೆ. ಇದು ದೇಶದಲ್ಲಿ ಮತ್ತೂಂದು ಅಭಿಯಾನಕ್ಕೆ ಕಾರಣವಾಗುವ ಸಾಧ್ಯತೆ ಇದೆ.
ಮೋದಿ ಬೆಂಬಲಿಗರು
ಫೇಸ್‌ಬುಕ್ 4.47 ಕೋಟಿ
ಟ್ವೀಟರ್ 5.33 ಕೋಟಿ
ಇನ್‌ಸ್ಟಾಗ್ರಾಂ 3.52 ಕೋಟಿ
ಯೂಟ್ಯೂಬ್ 45 ಲಕ್ಷ