ಕಾಶ ಕೊಡುವ ಬಗ್ಗೆಯೂ ಚಿಂತನೆ ನಡೆದಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.
Advertisement
ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಗರ್‌ಹುಕುಂ ಸಾಗುವಳಿಯಡಿ ನಮೂನೆ 50 ಮತ್ತು 56 ರಡಿ ಅರ್ಜಿ ಸಲ್ಲಿಕೆಗೂ ಕಾಲಾವಕಾಶ ಕೊಡಲು ಚರ್ಚೆ ನಡೆದಿದೆ. ಒಟ್ಟಾರೆ ಯಾರಿಗೂ ಅನ್ಯಾಯವಾಗಬಾರದು. ಸರ್ಕಾರದ ಸಲವತ್ತು ಪಡೆಯುವುದರಿಂದ ವಂಚಿತರಾಗಬಾರದು ಎಂಬುದು ನಮ್ಮ ಉದ್ದೇಶ. ಹೀಗಾಗಿ, ಸದ್ಯ ದಲ್ಲೇ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಹೇಳಿದರು. ಕಂದಾಯ ಕಾಯ್ದೆ 192 ಅಡಿ ಸರ್ಕಾರಿ ಭೂಮಿ ಅತಿಕ್ರಮಣಕ್ಕೆ ಐದು ಸಾವಿರ ರೂ.ದಂಡ, ಒಂದು ವರ್ಷ ಜೈಲು ಶಿಕ್ಷೆಯಿದೆ. ಹೀಗಾಗಿ, ಈ ಪ್ರಕರಣಗಳು ಇತ್ಯರ್ಥವಾಗು ವವರೆಗೂ ಆ ಬಗ್ಗೆ ಕ್ರಮ ಕೈಗೊಳ್ಳುವುದು ಬೇಡ ಎಂದೂ ಮೌಖೀಕವಾಗಿ ಸೂಚಿಸಲಾಗಿದೆ ಎಂದು ಹೇಳಿದರು.
ಹೀಗಾಗಿ, ಕುಡಿಯುವ ನೀರಿಗೆ ಹಾಹಾಕಾರ ಪರಿಸ್ಥಿತಿ ಉಂಟಾಗದು ಎಂಬ ಆಶಾಭಾವನೆಯಲ್ಲಿದ್ದೇವೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ಮುಂಗಾರು ಪ್ರಾರಂಭದಲ್ಲಿ ಮಳೆ ಕೊರತೆ ಇದ್ದ ಕಾರಣ ಆತಂಕ ಇದ್ದದ್ದು ಹೌದು. ಆದರೆ, ಕಳೆದ ಎರಡು ತಿಂಗಳಲ್ಲಿ ಮಳೆ ಉತ್ತಮ ವಾಗಿ ಬಿದ್ದಿದೆ. ಮುಂದಿನ ವಾರ ಸಂಪುಟ ಉಪ ಸಮಿತಿ ಸಭೆ ನಡೆಸಿ ಬರ ಪರಿಸ್ಥಿತಿಯ ಪರಾಮರ್ಶೆ ನಡೆಸಿ ಬರಪೀಡಿತ ತಾಲೂಕು ಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
Related Articles
ಕುಡಿಯುವ ನೀರಿನ ಸಮಸ್ಯೆ ತಲೆದೋರದಿದ್ದರೂ ಕೃಷಿ ಉತ್ಪಾದನೆ ಪ್ರಮಾಣ ಕಡಿಮೆಯಾಗಲಿದೆ. ಬೆಳೆನಷ್ಟ ಕುರಿತು ಪ್ರತಿ ಗ್ರಾಮಗಳಲ್ಲಿ ಪರಿಸ್ಥಿತಿಯನ್ನು ಪರಿಶೀಲಿಸಿ ವರದಿ ನೀಡಲು ಗ್ರಾಮ ಲೆಕ್ಕಾಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳನ್ನು ನೇಮಿಸಲಾಗಿದ್ದು, ತಿಂಗಳಲ್ಲಿ ವರದಿ ದೊರೆಯಲಿದೆ ಎಂದು ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು. ಮೋಡ ಬಿತ್ತನೆಯಿಂದಲೂ ಈ ಬಾರಿ ಹಲವೆಡೆ ಉತ್ತಮ ಪ್ರಮಾಣದ ಮಳೆಯಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
Advertisement
ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ಕೇಂದ್ರ 1700 ಕೋಟಿ ರೂ. ನೀಡಿತ್ತು. ಆ ಪೈಕಿ 23,31,565 ರೈತರಿಗೆ 1635.35 ಕೋಟಿ ರೂ. ವಿತರಿಸಲಾಗಿದೆ. ಖಾತೆ ವಿವರ ಹೊಂದಾಣಿಕೆಯಾಗದ ಕಾರಣ 50 ಕೋಟಿ ರೂ. ಉಳಿದಿದೆ. ಹಿಂಗಾರು ನಷ್ಟದ ಬಾಬ್ತು ಕೇಂದ್ರದಿಂದ 650 ಕೋಟಿ ರೂ. ಬಂದಿದ್ದು, 8,58, 220 ರೈತರಿಗೆ 639 ಕೋಟಿ ರೂ. ವಿತರಿಸಲಾಗಿದೆ. ಈ ವರ್ಷ ಬೆಳೆನಷ್ಟ ಬಗ್ಗೆ ಮಾಹಿತಿ ಪಡೆದು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಒಂದೊಮ್ಮೆ ಕೇಂದ್ರ ನೀಡದಿದ್ದರೆ ರಾಜ್ಯವೇ ಭರಿಸಬೇಕಾಗುತ್ತದೆ. ಕಾಗೋಡು ತಿಮ್ಮಪ್ಪ, ಕಂದಾಯ ಸಚಿವ