Advertisement

ಗಡಿಯಲ್ಲಿ ವೃತ್ತಿ ಪರ ಕೋರ್ಸ್‌ಗೆ ಚಿಂತನೆ

12:23 PM Nov 10, 2021 | Team Udayavani |

ಆಳಂದ: ಮಲೆನಾಡಿನಿಂದ ಬಂದ ನಾವು ಬಿಸಿಲು ನಾಡಾದ ಗಡಿನಾಡಿನ ಹೋದಲೂರು ಶಿವಲಿಂಗೇಶ್ವರ ವಿರಕ್ತ ಮಠದ ಮೂಲಕ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕಾರ್ಯಗಳ ಅನುಷ್ಠಾನಕ್ಕೆ ಮುಂದಾಗಿದ್ದೇವೆ. ಇದಕ್ಕೆ ಭಕ್ತರೆ ಆಸ್ತಿ ಎಂದು ಹೋದಲೂರ ಶಿವಲಿಂಗೇಶ್ವರ ವಿರಕ್ತ ಮಠದ ಹಾಗೂ ಚಿಕ್ಕಮಂಗಳೂರಿನ ತರೀಕೆರೆ ತಾಲೂಕಿನ ನಂದಿ ಎಣ್ಣೆಹೂಳೆ ಮಠದ ಪೀಠಾಧಿಪತಿ ಶ್ರೀ ವೃಷಭೇಂದ್ರ ಮಹಾ ಸ್ವಾಮೀಜಿ ಹೇಳಿದರು.

Advertisement

ತಾಲೂಕಿನ ಹೋದಲೂರ ಗಡಿಗ್ರಾಮದ ಶ್ರೀ ಶಿವಲಿಂಗೇಶ್ವರ ವಿರಕ್ತ ಮಠಕ್ಕೆ ಭಕ್ತರು ದೇಣಿಗೆ ರೂಪದಲ್ಲಿ ನೀಡಿದ ಸುಮಾರು 25 ಲಕ್ಷ ರೂ. ವೆಚ್ಚದ ಅನುದಾನದಲ್ಲಿ ನಿರ್ಮಿಸಲಾಗುತ್ತಿರುವ ನೂತನ ಕರ್ತೃ ಗದ್ದುಗೆ ಅಡಿಗಲ್ಲು ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಈಗಾಗಲೇ ರಾಜ್ಯ ಸರ್ಕಾರದಿಂದ ಶ್ರೀಮಠಕ್ಕೆ ಬಿಡುಗಡೆಯಾದ 50 ಲಕ್ಷ ರೂ. ಅನುದಾನದಲ್ಲಿ ಶ್ರೀಮಠದ ಸಭಾಭವನ ಹಾಗೂ ಭಕ್ತರಿಗೆ ವಸತಿ ಭವನ ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ. ಇದಕ್ಕೆ ರಾಜ್ಯ ಸರ್ಕಾರದಿಂದ ಒಂದು ಕೋಟಿ ರೂ. ಅನುದಾನದ ಭರವಸೆ ಸಿಕ್ಕಿದೆ. ಇದರಿಂದ ಗಡಿ ಭಾಗದ ಮಕ್ಕಳಿಗೆ ಶಿಕ್ಷಣ, ವೃತ್ತಿಪರ ಕೋರ್ಸ್‌ಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ ಎಂದರು.

ದುಶ್ಚಟಗಳ ಮುಕ್ತ ಗ್ರಾಮವನ್ನಾಗಿಸುವ ಸಂಕಲ್ಪದ ಜೊತೆಗೆ ಬಹಿರ್ದೆಸೆ ಮುಕ್ತ ಗ್ರಾಮಕ್ಕೆ ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವರ ಮೊರೆಹೋಗಿ ಗ್ರಾಮಕ್ಕೆ ವಿಶೇಷ ಅನುದಾನ ಕೋರಿ ಪ್ರತಿ ಮನೆಗೂ ಶೌಚಾಲಯ ಸೇರಿದಂತೆ ಗ್ರಾಮದ ಅಭಿವೃದ್ಧಿ ಕಾರ್ಯಕ್ಕೆ ಜನಪ್ರತಿನಿಧಿಗಳಿಗೆ ಸಾತ್‌ ನೀಡಲಾಗುವುದು ಎಂದು ಹೇಳಿದರು.

ಅಡಿಗಲ್ಲು ನೆರವೇರಿಸಿದ ಮಹಾರಾಷ್ಟ್ರದ ಕೇಸರ ಜವಳಗಾ ಮಠದ ಶ್ರೀ ವಿರಂತೇಶ್ವರ ಮಹಾ ಸ್ವಾಮೀಜಿ ಆಶೀರ್ವಚನ ನೀಡಿ, ಹೋದಲೂರ ಮಠವು ಕರ್ನಾಟಕ ಗಡಿಯಾದರೆ, ಕೇಸರ ಜವಳಗಾ ಮಹಾರಾಷ್ಟ್ರ ಗಡಿಯಲ್ಲಿನ ಮಠವಾಗಿದ್ದರೂ ಎರಡು ಮಠಗಳು ಜನ ಕಲ್ಯಾಣದ ಉದ್ದೇಶಗಳನ್ನು ಹೊಂದಿವೆ ಎಂದರು.

Advertisement

ಕುರುಬ ಸಮಾಜದ ತಾಲೂಕು ಅಧ್ಯಕ್ಷ ತುಕಾರಾಮ ವಗ್ಗೆ, ವೀರಭದ್ರಪ್ಪ ಖೂನೆ, ಸಾಲೇಗಾಂವ ಶರಣಬಸಪ್ಪ ವಡಗಾಂವ, ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಗುರುನಾಥ ಪಾಟೀಲ ಮಾತನಾಡಿದರು. ಹಿರಿಯರಾದ ಶರಣಬಸಪ್ಪ ಬೋಳಶೆಟ್ಟಿ, ಶ್ರೀಶೈಲ ಬನಶೆಟ್ಟಿ, ಮಲ್ಲಪ್ಪ ಕಾಮಶೆಟ್ಟಿ, ಮಲ್ಲಿನಾಥ ಕೋರೆ, ಶಿವಾಜಿ ಚವ್ಹಾಣ, ಮುರಗಯ್ಯ ಸ್ವಾಮಿ, ಅಣ್ಣೂರದ ಸಿದ್ಧು ಧಮ್ಮೂರೆ ಇನ್ನಿತರರು ಪಾಲ್ಗೊಂಡಿದ್ದರು. ನೂರಂದಯ್ಯ ಸ್ವಾಮಿ ನಿರೂಪಿಸಿದರು, ಶಿವು ಪಾಟೀಲ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next