ಹೊಸದಿಲ್ಲಿ: ಬಹುತೇಕ ಭಾರತೀಯರ ದಿನಚರಿ ಚಹಾ ಅಥವಾ ಕಾಫಿ ಸವಿಯುವುದರಿಂದಲೇ ಆರಂಭವಾಗುತ್ತದೆ. ಚಹಾದೊಂದಿಗೆ ಹೆಚ್ಚಿನವರು ಟೋಸ್ಟ್ ಅಥವಾ ರಸ್ಕ್ ಗಳನ್ನು ತಿನ್ನುತ್ತಾರೆ. ರಸ್ತೆ ಬದಿ ಸ್ಟಾಲ್ ಗಳಲ್ಲಿ ಚಹಾ ಕುಡಿಯುವವರು ಕೂಡಾ ಟೀ-ಟೋಸ್ಟ್ ಉತ್ತಮ ಕಾಂಬಿನೇಶನ್ ಎಂದೇ ಹೇಳುತ್ತಾರೆ.
ಆದರೆ ವೈರಲ್ ಆಗಿರುವ ವಿಡಿಯೋವೊಂದು ಈ ಟೋಸ್ಟ್ ಪ್ರೇಮಿಗಳಿಗೆ ಶಾಕ್ ಕೊಡುವುದು ಖಂಡಿತ. ನಿಮ್ಮ ಖರೀದಿಸುವ ಬಣ್ಣ ಬಣ್ಣದ ಪೊಟ್ಟಣಗಳಲ್ಲಿ ಪ್ಯಾಕ್ ಆಗಿ ಬರುವ ಟೋಸ್ಟ್ ಹೇಗೆ ಪ್ಯಾಕೇಜಿಂಗ್ ಮಾಡುತ್ತಾರೆ ಗೊತ್ತಾ? ಟೋಸ್ಟ್ ಗಳನ್ನು ಪ್ಯಾಕೆಟ್ ಗೆ ತುಂಬಿಸುವವರ ವಿಡಿಯೋವೊಂದು ಇದೀಗ ವೈರಲ್ ಆಗಿದೆ.
ಒಮ್ಮೆ ನೀವು ಈ ವಿಡಿಯೋವನ್ನು ನೋಡಿದರೆ, ನಿಮ್ಮ ಜೀವನದಲ್ಲಿ ನೀವು ಎಂದಿಗೂ ಟೋಸ್ಟ್ ತಿನ್ನುವುದಿಲ್ಲ. ಟೋಸ್ಟ್ ತಯಾರಿಕಾ ಕಾರ್ಖಾನೆಯ ಕೆಲಸಗಾರರು ಯಾವುದೇ ಸ್ವಚ್ಛತೆಯಿಲ್ಲದೆ, ಅಸಹ್ಯ ಹುಟ್ಟಿಸುವಂತಹ ದೃಶ್ಯಗಳು ಈ ವೀಡಿಯೊದಲ್ಲಿದೆ.
ವೀಡಿಯೊದಲ್ಲಿ, ಕಾರ್ಖಾನೆಯ ಕೆಲವು ಕೆಲಸಗಾರರು ನೆಲದ ಮೇಲೆ ಇರಿಸಿರುವ ಟೋಸ್ಟ್‌ಗಳ ಮೇಲೆ ತಮ್ಮ ಕಾಲಿರಿಸಿಕೊಂಡು ಒಟ್ಟಿಗೆ ಕುಳಿತುಕೊಂಡಿರುವುದನ್ನು ಕಾಣಬಹುದು. ಇದು ಮಾತ್ರವಲ್ಲ ಅವರು ಪ್ಯಾಕ್ ಮಾಡುವಾಗ ಟೋಸ್ಟ್ ಅನ್ನು ನಾಲಿಗೆಯಿಂದ ನೆಕ್ಕಿ ನಂತರ ಅದನ್ನು ಪೊಟ್ಟಣದೊಳಗೆ ತುಂಬುವುದನ್ನು ಸಹ ನೋಡಬಹುದು.
ವಿಡಿಯೋ ನೋಡಿ:ಕಾಲಿನಿಂದ ಒದ್ದು ,ನೆಕ್ಕಿ ಮಾಡುವ TOASTನ್ನು ನಾವು ತಿನ್ನೋದ ?
ಕಾರ್ಖಾನೆಯ ಕೆಲಸಗಾರನು ಉದ್ದೇಶಪೂರ್ವಕವಾಗಿ ಇಂತಹ ಕೆಲಸ ಮಾಡಿದ್ದಾನೆ ಎಂಬುದು ವೀಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟಿಜನ್ ಗಳು ಈ ಕೆಲಸಗಾರರ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.