Advertisement

ಬ್ಯಾಂಕ್‌ ವಿವರ ನೀಡುವ  ಮೊದಲು ಯೋಚಿಸಿ

12:32 PM Dec 11, 2017 | |

ಮೊಬೈಲ್‌ ಬ್ಯಾಂಕಿಂಗ್‌, ಇಂಟರ್‌ನೆಟ್‌ ಬ್ಯಾಂಕಿಂಗ್‌ನಲ್ಲಿ ವಂಚನೆಯನ್ನು ಎಲ್ಲಿ ಮಾಡುತ್ತಾರೆ, ಹೇಗೆ ಮಾಡುತ್ತಾರೆ, ಯಾರು ಮಾಡುತ್ತಾರೆ ಎಂಬುದು ಅಷ್ಟು ಸುಲಭವಾಗಿ ತಿಳಿಯುವುದಿಲ್ಲ. ಹೆಚ್ಚಿನ ಫೋನ್‌ ಕರೆಗಳು ಹಿಂದಿ ಭಾಷೆಯಲ್ಲಿಯೇ ಶುರುವಾಗುತ್ತವೆ. 

Advertisement

ಡೆಬಿಟ್‌ ಏಟಿಎಂ ಕಾರ್ಡ್‌ಗಳು ಮತ್ತು ಇಂಟರ್ನೆಟ್‌, ಮೊಬೈಲ್ ಬ್ಯಾಂಕಿಂಗ್‌ಗೆ ಸಂಬಂಧಿಸಿದಂತೆ ಕಳೆದ ವರ್ಷ ಬ್ಯಾಂಕ್‌ಗಳಲ್ಲಿ ಸುಮಾರು 16,468 ವಂಚನೆ ಪ್ರಕರಣಗಳು ನಡೆದಿವೆ. ಕಳೆದ ಮೂರು ವರ್ಷಗಳಲ್ಲಿ ಪ್ರತಿತಾಸಿಗೆ 88,553 ರೂ.ಗಳನ್ನು ಅನ್ನು ಸೈಬರ್‌ ವಂಚನೆಯಲ್ಲಿ ಬ್ಯಾಂಕ್‌ಗಳು, ಕಳೆದುಕೊಂಡಿವೆಯಂತೆ. ಏಪ್ರಿಲ್ 2014 ರಿಂದ ಜೂನ್‌ 2017ರ ವರೆಗೆ ಬ್ಯಾಂಕುಗಳು 252 ಕೋಟಿಯನ್ನು ಕಳೆದುಕೊಂಡಿದ್ದು, ಈ ಮೊತ್ತವನ್ನು 50,500 ರೈತರಿಗೆ ತಲಾ 50,000 ಪರಿಹಾರ ಕೊಡಲು ಬಳಸಬಹುದಿತ್ತು ಎಂದು ಆರ್ಥಿಕ ತಜ್ಞರು ಹೇಳುತ್ತಾರೆ. ಬ್ಯಾಂಕುಗಳು ಪ್ರತಿದಿನ ಸರಾಸರಿ 21.24 ಲಕ್ಷಗಳ ಇಂಥ 40 ವಂಚನೆಯ ಪ್ರಕರಣಗಳನ್ನು ವರದಿಮಾಡಿವೆಯಂತೆ. ಹಾಗಾದರೆ ವರದಿಯಾಗದ ಪ್ರಕರಣಗಳಲ್ಲಿನ ಮೊತ್ತ ಎಷ್ಟೋ? ಇದನ್ನು ತಡೆಯಲು, ಆಂತರಿಕ ವ್ಯವಸ್ಥೆಯನ್ನು ದೋಷರಹಿತವಾಗಿ ಮಾಡುವುದೇ ಉಳಿದಿರುವ ಹಾದಿ ಎನ್ನಬಹುದೇನೋ. ಬ್ಯಾಂಕುಗಳು ಈ ನಿಟ್ಟಿನಲ್ಲಿ ಗ್ರಾಹಕರ ರಕ್ಷಣೆಗಾಗಿ round the clock ಎಚ್ಚರವಹಿಸುತ್ತವೆ.

ವಂಚನೆ 1
ವಂಚನೆಗಳಲ್ಲಿ ಅತಿ ಹಳೆಯ ತಂತ್ರಗಾರಿಕೆ ಹಾಗೂ ಇಂದೂ ಕೂಡ ಚಾಲ್ತಿಯಲ್ಲಿರುವುದು ಐದು ಲಕ್ಷ ಅಮೆರಿಕನ್‌ ಡಾಲರ್‌ ಲಾಟರಿ. ಈ ಶುಭ ಸಮಾಚಾರ ಮೊಬೈಲ್/ಇ-ಮೇಲ್ ಮೂಲಕ ಬರುತ್ತದೆ. ಈ ಲಾಟರಿ ಲಕ್ಷ್ಮೀಯನ್ನು ನಿಮ್ಮದಾಗಿಸುತ್ತೇವೆ ಎಂದು ಹೇಳುವ ಮಂದಿ ನಿಮ್ಮ ಬ್ಯಾಂಕ್‌ ಖಾತೆ ವಿವರಗಳನ್ನು ಪಡೆದುಕೊಳ್ಳುತ್ತಾರೆ. ಲಾಟರಿ ಹಣವನ್ನು ನಿಮ್ಮ ಖಾತೆಗೆ ಜಮಾ ಮಾಡಲು ಪೊ›ಸೆಸ್ಸಿಂಗ್‌ ಶುಲ್ಕ, ಕೊರಿಯರ್‌ ಶುಲ್ಕ ಇತರೆ ಇತರೆ ಶುಲ್ಕವೆಂದು ಸುಮಾರು 20,000 ಡಾಲರ್‌ ಅನ್ನು ಅವರ ಖಾತೆಗೆ ಜಮಾ ಮಾಡುವಂತೆ ಕೇಳುತ್ತಾರೆ. 

ಒಮ್ಮೆ ಹಣವನ್ನು ಅವರ ಖಾತೆಗೆ ಜಮಾ ಮಾಡಿದ ಕೂಡಲೇ ಅವರ ಮೊಬೈಲ… ಬಂದ್‌ ಆಗುತ್ತದೆ. ಗ್ರಾಹಕನ ಹಣ ಕೈಬಿಡುವುದರೊಂದಿಗೆ, ನಿಮ್ಮ ಬ್ಯಾಂಕ್‌ ಖಾತೆಯ ವಿವರಗಳು ಮೂರನೇ ವ್ಯಕ್ತಿಯ ಕೈಗೆ ದೊರೆತು, ಇನ್ನೊಂದು ವಂಚನೆಗೆ ಮುಹೂರ್ತ ಫಿಕ್ಸ್‌ ಆಗುತ್ತದೆ.

ವಂಚನೆ 2
ವಿದೇಶಿಗನೊಬ್ಬ ಪೋನ್‌ ಮಾಡಿ ತನ್ನ ಆಸ್ತಿಯನ್ನು ನಿಮಗೆ ದಾನ ಮಾಡಿ, ಭಾರತಕ್ಕೇ ಬಂದು ಸೆಟ್ಲ ಆಗುವುದಾಗಿ ಹೇಳುತ್ತಾನೆ. ನಮ್ಮವರೇ ನಮಗೆ ನ್ಯಾಯಯುತವಾಗಿ, ಕಾನೂನಾತ್ಮಕವಾಗಿ ಮತ್ತು ನೈತಿಕವಾಗಿ ನೀಡಬೇಕಾದ್ದನ್ನು ನೀಡದೇ ಸತಾಯಿಸುವಾಗ, ಮುಖವನ್ನೂ ನೋಡಿರದ ವಿದೇಶಿಯನೊಬ್ಬ ಲಕ್ಷಾಂತರ ಡಾಲರ್‌ ನೀಡುವುದಾಗಿ ಹೇಳುವುದನ್ನು ಅಮಾಯಕರು ನಂಬುತ್ತಾರೆ. ತನ್ನ ಅಪಾರ ಆಸ್ತಿಯನ್ನು ಕಡಿಮೆ, ಬೆಲೆಗೆ ಮಾರುವುದಾಗಿ ಹೇಳುವ ವಿದೇಶಿಗ, ಪ್ರಾರಂಭಿಕ ಖರ್ಚಿಗಾಗಿ ನಿಮ್ಮಿಂದ ಹತ್ತಿಪ್ಪತ್ತು ಸಾವಿರ ಡಾಲರ್‌ನಷ್ಟು ಹಣ ಕೇಳುತ್ತಾನೆ. ಅವನು ಹೇಳಿದ ಖಾತೆಗೆ ಹಣ ಹಾಕಿ, ನಿಮ್ಮ ಬ್ಯಾಂಕ್‌ ವಿವರವನ್ನು ಅವನಿಗೆ ನೀಡಿದರೆ… ತಕ್ಷಣ ಆತನ ಮೊಬೈಕ್ಷ್ಮೀ ಸ್ವಿಚ್‌ ಆಫ‌… ಆಗುತ್ತದೆ. 

Advertisement

ವಂಚನೆ 3
ಇದೇ ರೀತಿ ಭಾರೀ ಮೌಲ್ಯದ ಗಿಫ್ಟ್ ಕಳಿಸಿರುವುದಾಗಿಯೂ, ಅದು ಏರ್‌ಪೋರ್ಟ್‌ನಲ್ಲಿ ಇರುವುದಾಗಿಯೂ, ಕಸ್ಟಮ್ಸ್‌, ಕೊರಿಯರ್‌, ಮಿಸಲೇನಿಯನ್ಸ್‌ , ಪ್ಯಾಕಿಂಗ್‌… ಇತ್ಯಾದಿ ಶುಲ್ಕ ಗಳಿಗಾಗಿ ಇಂತಿಷ್ಟು ಹಣವನ್ನು ಇಂಥ ಖಾತೆಗೆ ಜಮಾ ಮಾಡುವಂತೆ ಕರೆ ಬರುತ್ತದೆ.. ಕೊರಿಯರ್‌ ಮಾಡಿರುವುದಕ್ಕೆ ಸಾಕ್ಷಿಯಾಗಿ ರಸೀತಿಯನ್ನು ಕಳಿಸಿಕೊಡುತ್ತಾರೆ. ಅವರ ಖಾತೆಗೆ ಜಮಾ ಆದ ತಕ್ಷಣ ಅವರ ಮೊಬೈಲ… ಆಫ್ ಅಗುತ್ತದೆ. 

ವಂಚನೆ 4
ಆ ಬ್ಯಾಂಕಿನ ಕಾರ್ಡ್‌ ವಿಭಾಗದಿಂದ ಮಾತನಾಡುತ್ತಿರುವುದಾಗಿ ಹೇಳಿ, ನಿಮ್ಮ ಕಾರ್ಡ್‌ ಅಪ್‌ ಡೇಟ… ಮಾಡುವುದಾಗಿ ನಂಬಿಸುತ್ತಾರೆ. ನಿಮ್ಮ ಕಾರ್ಡ್‌ನ ಪೂರಾ ಮಾಹಿತಿಯನ್ನು ಪಡೆಯತ್ತಾರೆ. ಕೆಲವು ಬಾರಿ ಹೊಸ ಕಾರ್ಡ್‌ ನೀಡುತ್ತೇವೆ, ಒನ್‌ ಟೈಮ… ಪಾಸ್‌ವರ್ಡ್‌ ಕೊಡುತ್ತೇವೆ, ಆಧಾರ್‌ ನಂಬರ್‌ ಅಪ್‌ಡೇಟ್‌ ಮಾಡುತ್ತೇವೆ ಎಂದೂ ಹೇಳಬಹುದು. 

ಮಾಹಿತಿ ಕೊಟ್ಟ ಕ್ಷಣಾರ್ಧದಲ್ಲಿ ನಿಮ್ಮ ಖಾತೆಯಿಂದ ನಿಮ್ಮ ಹಣ ಮಾಯವಾಗುತ್ತದೆ. ಮೊಬೈಲ… ಬ್ಯಾಂಕಿಂಗ್‌, ಇಂಟರ್ನೆಟ್‌ ಬ್ಯಾಂಕಿಂಗ್‌ನಲ್ಲಿ ವ್ಯವಹಾರ ಮಾಡುವಾಗ, ಮೂರನೆಯವರ, ಮುಖ್ಯವಾಗಿ ಅಪರಿಚಿತರ ಸಹಾಯ ಪಡೆಯಬೇಡಿ. ಹಾಗೆಯೇ ನಿಮ್ಮ ಪಾಸ್‌ವರ್ಡ್‌ ಗೌಪ್ಯವಾಗಿರಲಿ. ಇಂಥ ವಂಚನೆಯನ್ನು ಎಲ್ಲಿ ಮಾಡುತ್ತಾರೆ, ಹೇಗೆ ಮಾಡುತ್ತಾರೆ, ಯಾರು ಮಾಡುತ್ತಾರೆ ಎನ್ನುವುದು ಅಷ್ಟು ಸುಲಭವಾಗಿ ತಿಳಿಯುವುದಿಲ್ಲ. ಬಹುತೇಕ ಫೋನ್‌ ಕರೆಗಳು ಹಿಂದಿ ಭಾಷೆಯಲ್ಲಿಯೇ ಶುರುವಾಗುತ್ತದೆ. 

ಒಂದು ವಿಚಾರ ಗೊತ್ತಿರಲಿ. ಹೀಗೆ ವಂಚನೆಗೀಡಾದ ಪ್ರತಿಯೊಂದು ಪ್ರಕರಣಗಳಲ್ಲೂ ಬ್ಯಾಂಕುಗಳು ತಮ್ಮ ಗ್ರಾಹಕರ ನೆರವಿಗೆ ಧಾವಿಸುವುದು ಕಷ್ಟ. ಗ್ರಾಹಕರ involvement ಇಲ್ಲದೇ, ಅವರ ಅರಿವಿಗೆ ಬರದೇ, ಅವರ ಮುಗ್ಧತನವನ್ನು ದುರುಪಯೊಗ ಮಾಡಿಕೊಂಡು ಗ್ರಾಹಕರನ್ನು ವಂಚಿಸಿದರೆ, ಇದಿಷ್ಟೂ ಸಂಗತಿ ಬ್ಯಾಂಕುಗಳಿಗೆ ಮನದಟ್ಟಾದರೆ ಬ್ಯಾಂಕುಗಳು ಅಂಥ ಗ್ರಾಹಕರಿಗೆ ಸಹಾಯಮಾಡುತ್ತವೆ. ಇಂಥ ಪ್ರಕರಣಗಳಲ್ಲಿ ಬ್ಯಾಂಕುಗಳು ತಮ್ಮದೇ ನೀತಿ ನಿಯಮಾವಳಿ, ಪದ್ಧತಿಯ ಅನುಗುಣವಾಗಿ ಸಹಾಯ ಮಾಡುತ್ತವೆ. ಗ್ರಾಹಕರು ತಮ್ಮ ಸಾಮಾನ್ಯ ಜ್ಞಾನವನ್ನು ಉಪಯೋಗಿಸದೇ ಹೆಚ್ಚಿನ ಹಣ ಸಂಪಾದನೆಯ ಆಸೆಯಿಂದ ವಂಚನೆಯ ಜಾಲಕ್ಕೆ ಬಿದ್ದರೆ, ಆಗ ಬ್ಯಾಂಕುಗಳು ಸಹಾಯ ಮಾಡುವುದು ಕಷ್ಟ. 

ವಂಚನೆಗೀಡಾದ ಪ್ರತಿಯೊಂದು ಪ್ರಕರಣಗಳಲ್ಲೂ ಬ್ಯಾಂಕುಗಳು ತಮ್ಮ ಗ್ರಾಹಕರ ನೆರವಿಗೆ ಧಾವಿಸುವುದು ಕಷ್ಟ. ಗ್ರಾಹಕರ involvement ಇಲ್ಲದೇ, ಅವರ ಅರಿವಿಗೆ ಬರದೇ, ಅವರ ಮುಗ್ಧತೆಯನ್ನು ದುರುಪಯೊಗ ಮಾಡಿಕೊಂಡು ಗ್ರಾಹಕರನ್ನು ವಂಚಿಸಿದರೆ, ಇದಿಷ್ಟೂ ಸಂಗತಿ ಬ್ಯಾಂಕುಗಳಿಗೆ ಮನದಟ್ಟಾದರೆ ಬ್ಯಾಂಕುಗಳು ಅಂಥ ಗ್ರಾಹಕರಿಗೆ ಸಹಾಯಮಾಡುತ್ತವೆ.

ರಮಾನಂದ ಶರ್ಮ

Advertisement

Udayavani is now on Telegram. Click here to join our channel and stay updated with the latest news.

Next