Advertisement

ಟಿಕೆಟ್‌ ಬುಕಿಂಗ್‌ಗೆ ಅಂತರ ಭಯವಿಲ್ಲ; ಯುಟಿಎಸ್‌ ನಿಯಮಗಳಲ್ಲಿ ಭಾರೀ ಬದಲು

12:42 PM Nov 12, 2022 | Team Udayavani |

ನವದೆಹಲಿ:ರೈಲು ಹೊರಡುವ ಸಮಯ… ಸರದಿಯಲ್ಲಿ ನಿಂತು ಟಿಕೆಟ್‌ ತೆಗೆದುಕೊಳ್ಳುವಷ್ಟು ಸಮಯ ಇಲ್ಲ… ಇಂಥ ಸಮಯದಲ್ಲಿ ಏನು ಮಾಡಬೇಕು?ಇದಕ್ಕಾಗಿಯೇ ರೈಲ್ವೆ ಇಲಾಖೆ, ನಿಮ್ಮ ಮೊಬೈಲ್‌ ಮೂಲಕವೇ ರೈಲು ನಿಲ್ದಾಣದಿಂದ 20 ಕಿಮೀ ದೂರದಿಂದಲೇ ಟಿಕೆಟ್‌ ಖರೀದಿಸುವ ವ್ಯವಸ್ಥೆಯನ್ನು ರೂಪಿಸಿದೆ.

Advertisement

ಅನ್‌ರಿಸರ್ವ್‌ ಟಿಕೆಟ್‌ ಬುಕಿಂಗ್‌ ಸಿಸ್ಟಮ್‌ (ಯುಟಿಎಸ್‌) ವ್ಯವಸ್ಥೆಯ ಅನ್ವಯ ಮೊಬೈಲ್‌ ಆ್ಯಪ್‌ ಮೂಲಕ ಈವರೆಗೆ ಐದು ಕಿಮೀ ವ್ಯಾಪ್ತಿಯೊಳಗೆ ಟಿಕೆಟ್‌ ಖರೀದಿಸಬಹುದಾಗಿತ್ತು. ಇನ್ನು ದೂರದ ಆಂತಕ ಬೇಕಾಗಿಲ್ಲ. ಹೊಸ ನಿರ್ಧಾರದ ಪ್ರಕಾರ ಇನ್ನು ಮುಂದೆ 20 ಕಿಮೀ ದೂರದ ವ್ಯಾಪ್ತಿಯಲ್ಲಿ ಟಿಕೆಟ್‌ಗಳನ್ನು ಬುಕ್‌ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಪರಿಷ್ಕೃತ ನಿರ್ಧಾರದ ಪ್ರಕಾರ ಉಪನಗರ ವ್ಯಾಪ್ತಿಯಲ್ಲಿ ಇಲ್ಲದ ರೈಲು ನಿಲ್ದಾಣ ಅಲ್ಲದ ಪ್ರದೇಶದಲ್ಲಿ ಸದ್ಯ ಇರುವ 5 ಕಿಮೀ ವ್ಯಾಪ್ತಿಯಿಂದ 20 ಕಿಮೀ, ಉಪನಗರದ ವ್ಯಾಪ್ತಿಯಲ್ಲಿ ಬರುವ ರೈಲು ನಿಲ್ದಾಣಗಳಲ್ಲಿ ಹಾಲಿ 2 ಕಿಮೀನಿಂದ 5 ಕಿಮೀಗೆ ಟಿಕೆಟ್‌ ಕಾಯ್ದಿರಿಸುವ ಸೌಲಭ್ಯ ವಿಸ್ತರಿಸಲಾಗಿದೆ.

ಪ್ಯಾಸೆಂಜರ್‌ ರೈಲು ಮತ್ತು ದೂರದ ಸ್ಥಳಗಳಿಗೆ ಪ್ರಯಾಣಿಸುವವರು ಹಲವು ಸಮಯದಿಂದ ಟಿಕೆಟ್‌ ಕಾಯ್ದಿರಿಸುವ ಅಂತರ ಹೆಚ್ಚಿಸುವ ಬಗ್ಗೆ ಮನವಿ ಮಾಡುತ್ತಿದ್ದರು. ಅದಕ್ಕೆ ಅನುಸಾರವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಪಾವತಿ ಹೇಗೆ?:
ಆರ್‌- ವ್ಯಾಲೆಟ್‌, ಪೇಟಿಎಂ, ಮೊಬಿಕ್ಲಿಕ್‌ ಅಥವಾ ಇಂಟರ್‌ನೆಟ್‌ ಬ್ಯಾಂಕಿಂಗ್‌ ವ್ಯವಸ್ಥೆ ಮೂಲಕ ನಿಗದಿತ ಟಿಕೆಟ್‌ ಖರೀದಿಸಿ ಮೊತ್ತ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ. ಹೊಸ ಸೌಲಭ್ಯದಿಂದಾಗಿ ಪ್ರಯಾಣಿಕರಿಗೆ ಕ್ಷಿಪ್ರವಾಗಿ ಟಿಕೆಟ್‌ ಕಾಯ್ದಿರಿಸಲು ಅನುಕೂಲವಾಗಲಿದೆ.

Advertisement

ಸದ್ಯ
ಉಪನಗರ ವ್ಯಾಪ್ತಿಯಲ್ಲಿ ಇಲ್ಲದ ರೈಲು ನಿಲ್ದಾಣ 5 ಕಿಮೀ
ಪರಿಷ್ಕರಣೆ- 20 ಕಿಮೀ
ಉಪ ನಗರ ವ್ಯಾಪ್ತಿಯಲ್ಲಿ ಇರುವ ನಿಲ್ದಾಣ 2 ಕಿಮೀ
ಪರಿಷ್ಕರಣೆ- 5 ಕಿಮೀ

 

Advertisement

Udayavani is now on Telegram. Click here to join our channel and stay updated with the latest news.

Next