Advertisement
ದಿನನಿತ್ಯದ ಬಳಕೆಗೆ ಬೇಕಾಗುವ ಕೈಚೀಲಗಳಿಂದ ಹಿಡಿದು ಮದುವೆ ಮನೆಯಲ್ಲಿ ಲಲನೆಯರ ಕೈಯಲ್ಲಿ ಝಗಮಗಿಸುವ ತರಹೇವಾರಿ ಬ್ಯಾಗ್‌ಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿವೆ. ತಮ್ಮ ಬೇಕು ಬೇಡ ಎಲ್ಲವನ್ನೂ ವ್ಯಾನಿಟಿ ಬ್ಯಾಗಿನೊಳಗೆ ತುಂಬಿಕೊಳ್ಳುವ ಹೆಂಗಳೆಯರಿಗೆ ಸೂಕ್ತ ಎನ್ನಿಸುವ ವಿಭಿನ್ನ ಶೈಲಿಯ ಬ್ಯಾಗ್‌ಗಳ ಮಾಹಿತಿ ಸೇರಿದಂತೆ ವ್ಯಾನಿಟಿ ಬ್ಯಾಗ್ ಖರೀದಿ ಮಾಡುವಾಗ ಗಮನಿಸಬೇಕಾದ ಅಂಶಗಳು ಬಹಳಷ್ಟಿವೆ.
ಒಂದು ಕಡೆ ಭುಜಕ್ಕೆ ನೇತು ಹಾಕಿಕೊಳ್ಳಬಹು ದಾದ ಈ ಬ್ಯಾಗ್ ಒಂದು ದಿನದ ತಿರುಗಾಟಕ್ಕೆ ಸೂಕ್ತವಾಗಿದ್ದು, ಅಗತ್ಯವೆನ್ನಿಸುವ ವಸ್ತುಗಳನ್ನು ಜೋಡಿಸಿಟ್ಟುಕೊಳ್ಳಬಹುದು. ಜತೆಗೆ ನಿತ್ಯ ಬಳಕೆಗೂ ಈ ಬ್ಯಾಗ್ ಸೂಟ್ ಆಗಲಿದ್ದು, ಜೀನ್ಸ್, ಕುರ್ತಾ ಟಾಪ್ ಡ್ರೆಸ್‌ಗಳಿಗೆ ಹಾಕಿಕೊಂಡರೆ ಚೆನ್ನಾಗಿ ಒಪ್ಪುತ್ತದೆ. ಸ್ಲಿಂಗ್ ಬ್ಯಾಗ್‌ಗಳು
ಇತ್ತೀಚೆಗೆ ದೊಡ್ಡದೊಡ್ಡ ವ್ಯಾನಿಟಿ ಬ್ಯಾಗ್‌ಗಳ ಸ್ಥಾನವನ್ನು ಪುಟ್ಟದಾಗಿ ನೋಡಲು ಮುದ್ದುಮುದ್ದಾಗಿರುವ ಸ್ಲಿಂಗ್ ಬ್ಯಾಗ್‌ಗಳು ಆವರಿಸಿವೆ. ಕೈಗೆ ಭಾರವಾಗಿ ಜೋತುಬೀಳದ, ಕಂಡಕ್ಟರ್ ಶೈಲಿಯಲ್ಲಿ ಕ್ರಾಸ್ ಆಗಿ ನೇತು ಹಾಕಿಕೊಳ್ಳಬಹುದಾದ ಈ ಬ್ಯಾಗ್‌ಗಳು ಕಾಲೇಜು ಯುವತಿಯರಿಂದ ಹಿಡಿದು ಗೃಹಿಣಿಯರ ತನಕ ಮೆಚ್ಚುಗೆಗೆ ಪಾತ್ರವಾಗಿವೆ. ಮೊಬೈಲ್, ವಾಹನ ಕೀ ಚೈನ್‌ಗಳು ಸಹಿತ ಹಲವಾರು ಸಣ್ಣಪುಟ್ಟ ವಸ್ತುಗಳನ್ನು ಇಡಬಹುದಾಗಿದ್ದು, ಇದರಲ್ಲಿ ಹತ್ತಾರು ಸಣ್ಣ ಪ್ಯಾಕೇಟ್‌ಗಳಿರುತ್ತವೆ. ಜೀನ್ಸ್, ಫಾರ್ಮಲ್, ಚೂಡಿದಾರ್, ಜುಬ್ಟಾ, ಸೀರೆ, ಲೆಹಂಗಾ ಹೀಗೆ ಯಾವ ಉಡುಪಿಗೂ ಈ ಸ್ಲಿಂಗ್ ಬ್ಯಾಗ್‌ಗಳು ಹೊಂದುತ್ತವೆ.
Related Articles
Advertisement
ಬ್ಯಾಗ್‌ಗಳನ್ನು ಖರೀದಿ ಮಾಡುವಾಗ ಪಾಲಿಸ ಬೇಕಾದ ಅಗತ್ಯ ಟಿಪ್ಸ್– ನಿಮಗೆ ಹೊಂದುವ ವ್ಯಾನಿಟಿ ಬ್ಯಾಗ್‌ಗಳನ್ನು ಖರೀದಿಸಿ. ಬ್ಯಾಗ್‌ನ ಗಾತ್ರ, ಬಣ್ಣ, ಆಕಾರ ನಿಮ್ಮ ಸೌಂದರ್ಯಕ್ಕೆ ಸಾಥ್ ನೀಡುತ್ತದೆಯೇ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.
– ಬ್ಯಾಗ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಮೊದಲು ಕನ್ನಡಿ ಮುಂದೆ ನಿಂತು, ಬ್ಯಾಗುಗಳನ್ನು ಹೆಗಲಿಗೇರಿಸಿ ನೋಡಿ. ನಿಮಗೆ ಖುಷಿ ಎನಿಸಿದರೆ ಖರೀದಿಸಿ.
– ಬ್ಯಾಗ್‌ಗಳನ್ನು ಖರೀದಿಸುವಾಗ ಪಾಕೆಟ್, ಜಿಪ್ ಸರಿಯಿದೆಯೇ
ಎಂದು ಪರೀಕ್ಷಿಸಿ ಖರೀದಿಸಿ.
– ಕಚೇರಿಗೇ ಇರಲಿ, ಪಾರ್ಟಿ, ಸಮಾರಂಭಗಳಿಗೆಂದೇ ಸಿದ್ಧಪಡಿಸಿದ ಬ್ಯಾಗ್‌ಗಳಿವೆ. ಸಂದರ್ಭಕ್ಕೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಿ.
– ಬ್ರಾಂಡೆಡ್ ಬ್ಯಾಗ್‌ಗಳನ್ನೆ ಖರೀದಿಸಿ. ಹೆಚ್ಚು ಕಾಲ ಬಾಳಿಕೆ ಬರುತ್ತವೆ.
– ಧರಿಸುವ ಉಡುಗೆಗೆ ಅನುಗುಣವಾಗಿ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಿ.