Advertisement

ನೀವು ನಿಮ್ಮ ಸ್ಮಾರ್ಟ್ ಫೋನ್ ನನ್ನು ಮಾರಾಟ ಮಾಡ್ತಿದ್ದೀರಾ? ಹಾಗಾದ್ರೇ ಈ ಲೇಖನ ಓದಲೇಬೇಕು..!

08:00 PM May 20, 2021 | ಶ್ರೀರಾಜ್ ವಕ್ವಾಡಿ |

ನೀವೇನಾದರೂ ಹೊಸ ಮೊಬೈಲ್ ಫೋನ್ ಕೊಂಡುಕೊಳ್ಳಲು ಹೊರಟಿದ್ದೀರಾ ? ಈ ಕಾರಣದಿಂದಾಗಿ ನಿಮ್ಮ ಹಳೆಯ ಸ್ಮಾರ್ಟ್ ಫೋನ್ ಯಾರಿಗಾದರೂ ಮಾರಬೇಕೆಂದಿದ್ದೀರಾ? ಆದರೆ, ನಿಮ್ಮ ಫೋನ್‌ ನಲ್ಲಿರುವ ಸಂಪರ್ಕ, ಸಂದೇಶಗಳು ಇತ್ಯಾದಿ ಮಾಹಿತಿಗಳನ್ನು ಏನು ಮಾಡುವುದು? ಹೇಗೆ ಸಂರಕ್ಷಿಸುವುದು? ನಿಮ್ಮ ಯಾವುದೇ ಮೊಬೈಲ್ ಫೋನ್ ಅನ್ನು ಮಾರಾಟ ಮಾಡುವ ಮುನ್ನ ಇದನ್ನೆಲ್ಲಾ ಮಾಡಲೇಬೇಕು.

Advertisement

ಇದನ್ನೂ ಓದಿ : ಕೋವಿಡ್ ಸ್ವ ಪರೀಕ್ಷೆ ಮಾಡಿಕೊಳ್ಳುವ ಕಿಟ್ ಗಳು 3-4 ದಿನಗಳಲ್ಲಿ ಲಭ್ಯ.? : ಐಸಿಎಂಆರ್

  • ಸಂಪರ್ಕ ಪಟ್ಟಿಯನ್ನು ಬ್ಯಾಕ್‌ ಅಪ್ ಮಾಡಿ

ನೀವು ಆಂಡ್ರಾಯ್ಡ್ ಬಳಕೆದಾರರಾದರೆ, ಅದರಲ್ಲೂ ಗೂಗಲ್ ಆ್ಯಪ್‌ ಗಳನ್ನು ಅತಿಯಾಗಿ ಬಳಸುವವರಾದರೆ, ನಿಮ್ಮ ಮೊಬೈಲ್‌ ನಲ್ಲಿರುವ ಎಲ್ಲಾ ಸಂಪರ್ಕಗಳನ್ನು ಜೀಮೇಲ್‌ ಗೆ ಬ್ಯಾಕ್‌ ಅಪ್ ಮಾಡಿಡಿ. ಎಲ್ಲರ ಕಾಂಟ್ಯಾಕ್ಟ್ ಸಂಖ್ಯೆಯೂ ಸಿಮ್ ಕಾರ್ಡ್ ನಲ್ಲಿ ಸೇವ್ ಆಗಿದ್ದರೆ ಏನೂ ತೊಂದರೆ ಆಗುವುದಿಲ್ಲ. ಬದಲಿಗೆ ಫೋನ್‌ ನಲ್ಲಿಯೇ ಸೇವ್ ಆಗಿದ್ದರೆ, ಅದನ್ನು ಟ್ರಾನ್ಸ್ಫರ್ ಮಾಡಲು ಸ್ವಲ್ಪ ಕಷ್ಟವಾದೀತು. ಅದಲ್ಲದೆ, ಇನ್ನು ಮುಂದೆ ಹೊಸಬರ ಸಂಖ್ಯೆಯನ್ನು ಸೇವ್ ಮಾಡಲು ಇದ್ದರೆ, ನಿಮ್ಮ ಜೀಮೇಲ್‌ ನಲ್ಲಿಯೇ (https://contacts.google.com/ ) ಸೇವ್ ಮಾಡಿದರೆ ಉತ್ತಮ.

  • ಫೋಟೋ, ವೀಡಿಯೋಗಳನ್ನು ಕ್ಲೌಡ್ ಸ್ಟೋರೇಜ್‌ ನಲ್ಲಿ ಬ್ಯಾಕ್‌ ಅಪ್ ಮಾಡುವುದು

ಹಲವರಿಗೆ ಇದು ಗೊತ್ತಿರಲಿಕ್ಕೂ ಇಲ್ಲ. ನಾವು ಸಾಮಾನ್ಯವಾಗಿ ಹೊಸ ಫೋನ್ ಖರೀದಿಸಿದಾಗ, ಒಂದು ಮೊಬೈಲ್‌ ನಿಂದ ಮತ್ತೊಂದಕ್ಕೆ ಎಲ್ಲಾ ಫೋಟೋ-ವೀಡಿಯೋಗಳನ್ನು ಶೇರ್ ಮಾಡುತ್ತೇವೆ. ಇದರ ಬದಲಿಗೆ, ಹಳೇ ಫೋನ್‌ ನಲ್ಲಿಯೇ ಇದನ್ನು ಗೂಗಲ್, ಮೈಕ್ರೋಸಾಫ್ಟ್ ಅಥವಾ ಇತರ ಕ್ಲೌಡ್ ಸ್ಟೋರೇಜ್‌ ಗೆ ಬ್ಯಾಕ್‌ ಅಪ್ ಮಾಡಿಟ್ಟರೆ, ಹೊಸ ಫೋನ್‌ ಗೆ ಶೇರ್ ಮಾಡುವ ಮೊದಲೇ, ನೀವು ಅಪ್ಲೋಡ್ ಮಾಡಿದ ಡ್ರೈವ್‌ ನ ಅಕೌಂಟ್ ಹಾಕಿದ ಕೂಡಲೆ ನಿಮಗೆ ಅದರ ಎಕ್ಸೆಸ್ ಸಿಗುವುದು. ಎಲ್ಲವೂ ಆನ್‌ ಲೈನ್‌ನಲ್ಲಿಯೇ ಸಿಗುವುದರಿಂದ ನಿಮಗೆ ಬೇಕಾಗಿರುವುದನ್ನು ಮಾತ್ರ ಡೌನ್‌ ಲೋಡ್ ಮಾಡಿಟ್ಟುಕೊಳ್ಳಬಹುದು.

  • ಎಲ್ಲಾ ಸಾಮಾಜಿಕ ಮಾಧ್ಯಮಗಳಿಂದ ಲಾಗ್‌ ಔಟ್ ಆಗಲು ಮರೆಯದಿರಿ!

ಪ್ರಸ್ತುತ ಕಾಲಘಟ್ಟದಲ್ಲಿ ಓದಲು, ಬರೆಯಲು ಬರುವುದಕ್ಕಿಂತ ನೀವು ಸಾಮಾಜಿಕ ಮಾಧ್ಯಮ-ಜಾಲತಾಣಗಳಲ್ಲಿ ಎಷ್ಟು ಸಕ್ರಿಯರಾಗಿದ್ದೀರ ಎಂಬುವುದರ ಮೇಲೆ ಕೆಲವರು ಸಾಕ್ಷರತೆಯನ್ನು ಅಳೆಯುತ್ತಾರೆ. ಹೀಗಿರುವಾಗ, ನಿಮ್ಮ ಫೋನ್‌ ನಲ್ಲಿ ಯಾವೆಲ್ಲಾ ಆ್ಯಪ್ ಗಳಿವೆಯೋ, ಯಾವುದೆಲ್ಲಾ ಜಾಲತಾಣಗಳೊಳಗೆ ಲಾಗ್ ಇನ್ ಆಗಿದ್ದೀರೋ, ಅದರಿಂದ ಲಾಗ್‌ ಔಟ್ ಆಗಿ. ಸಾಮಾನ್ಯವಾಗಿ ನಿಮ್ಮ ಫೋನ್ ಸೆಟ್ಟಿಂಗ್‌ ನಲ್ಲಿ “ಅಕೌಂಟ್ಸ್”ಎಂದು ಸರ್ಚ್ ಮಾಡಿದಾಗ ಯಾವುದೆಲ್ಲಾ ಜಾಲತಾಣಗಳಲ್ಲಿ ನೀವು ಲಾಗ್ ಇನ್ ಆಗಿದ್ದೀರಿ ಎಂಬುವುದನ್ನು ನೋಡಬಹುದಾಗಿದೆ.

Advertisement

ಕೆಲವೊಮ್ಮೆ ನಿಮ್ಮ ಫೋನ್‌ ನನ್ನು ಮುಂದೆ ಖರೀದಿಸುವವರು ನಿಮ್ಮ ಅಕೌಂಟ್ ನನ್ನು ದುರುಪಯೋಗಪಡಿಸಬಹುದು. ನಿಮ್ಮ ಹೆಸರಿರುವ ಖಾತೆಯಿಂದ ನಿಮಗೇ ಗೊತ್ತಿಲ್ಲದೆ ಏನಾದರೂ ಚಟುವಟಿಕೆಗಳು ಆಗಬಹುದು. ಹಾಗಾಗಿ ಲಾಗ್‌ ಔಟ್ ಆಗುವುದು ಉತ್ತಮ.

  • ಎಸ್‌ ಡಿ ಕಾರ್ಡ್, ಸಿಮ್ ಕಾರ್ಡ್ ತೆಗೆದಿಡಿ

ಹಲವರು ಇದನ್ನು ಮರೆತುಬಿಡುತ್ತಾರೆ. ಯಾವಾಗಲೂ ನಿಮ್ಮ ಮೊಬೈಲ್ ರಿಪೇರಿಗೆ ಕೊಡುವಾಗ ಅಥವಾ ಅದನ್ನು ಯಾರಿಗಾದರೂ ಮಾರಾಟ ಮಾಡುವಾಗ, ಅದರಿಂದ ಎಸ್‌ ಡಿ ಕಾರ್ಡ್ ಹಾಗೂ ಸಿಮ್ ಕಾರ್ಡ್ಗಳನ್ನು ಹೊರತೆಗೆಯಿರಿ. ಇಲ್ಲದಿದ್ದರೆ, ನಿಮ್ಮ ಖಾಸಗಿ ಮಾಹಿತಿಗಳು, ಸಂಪರ್ಕ ಪಟ್ಟಿ ಇತ್ಯಾದಿ ವಿಷಯಗಳು ಇತರರಿಗೆ ಸಿಗುವ ಸಾಧ್ಯತೆ ಇರುತ್ತದೆ.

  • ವಾಟ್ಸಾಪ್ ಬ್ಯಾಕ್‌ ಅಪ್

ಒಂದೆರಡು ಅಪರೂಪದ ಸ್ವೀಟ್ ಕಿಸ್ ಗಳನ್ನು ಹೊರತುಪಡಿಸಿ, ವಾಟ್ಸಾಪ್ ಇಲ್ಲದೇ ಇರುವವರು ಯಾರಾದ್ರೂ ಇದ್ದಾರಾ! ವಾಟ್ಸಾಪ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಅದಲ್ಲದೆ, ಹಲವು ಬಹುಮುಖ್ಯ ಮಾಹಿತಿಗಳು ಅದರಲ್ಲಿರಲೂಬಹುದು. ಹಾಗಾಗಿ ನಿಮ್ಮ ಸ್ಮಾರ್ಟ್‌ಫೋನ್ ರೀಸೆಟ್ ಮಾಡುವ ಮುನ್ನ ವಾಟ್ಸಾಪ್ ಅನ್ನು ಯಾವುದಾದರೂ ಕ್ಲೌಡ್ ಸ್ಟೋರೇಜ್‌ನಲ್ಲಿ ಬ್ಯಾಕ್‌ಅಪ್ ಮಾಡಿ. ವಾಟ್ಸಾಪ್‌ಗೆ ಹೋಗಿ, ಮೋರ್ (ಮೂರು ಚುಕ್ಕಿಗಳು) ಆಪ್ಷನ್ ನಲ್ಲಿ ಸೆಟ್ಟಿಂಗ್ – ಚಾಟ್ಸ್ – ಚಾಟ್ಸ್ ಬ್ಯಾಕ್‌ಅಪ್ – ಬ್ಯಾಕ್‌ಟಪ್ ಟು ಗೂಗಲ್ ಡ್ರೈವ್. ಆಗ, ಹೊಸ ಸ್ಮಾರ್ಟ್ಫೋನ್‌ನಲ್ಲಿ ವಾಟ್ಸಾಪ್ ಇನ್‌ಸ್ಟಾಲ್ ಮಾಡಿದಾಗ, ಹಳೆಯ ಚಾಟ್‌ಗಳನ್ನು ಅದರಲ್ಲಿ ಪುನಃ ಪಡೆಯಬಹುದು.

  • ಫ್ಯಾಕ್ಟರಿ ರೀಸೆಟ್

ಎಲ್ಲಾ ಮುಖ್ಯ ಮಾಹಿತಿಗಳನ್ನು ಬ್ಯಾಕ್‌ಅಪ್ ಮಾಡಿ ಮುಗಿದ ಬಳಿಕ ಹಾಗೂ ಫೋನ್ ಒಳಗಿನಿಂದ ಸಿಮ್ ಹಾಗೂ ಎಸ್‌ ಡಿ ಕಾರ್ಡ್ ಹೊರತೆಗೆದ ಬಳಿಕ, ನಿಮ್ಮ ಫೋನನ್ನು ರೀಸೆಟ್ ಮಾಡಿ. ಸೆಟ್ಟಿಂಗ್ಸ್ ನಲ್ಲಿ ಪ್ಯಾಕ್ಟರಿ ರೀಸೆಟ್ ಅಥವಾ ಇರೇಸ್ ಆಲ್ ಡೇಟಾ ಅನ್ನೋ ಆಪ್ಷನ್ ಸರ್ಚ್ ಮಾಡಿ, ಎಲ್ಲವನ್ನೂ ಇರೇಸ್ ಮಾಡಿಬಿಡಿ. ಆಗ ನಿಮ್ಮ ಫೋನ್, ಆರಂಭದಲ್ಲಿದ್ದಂತೆ ಕಂಡುಬರುವುದು.

ಇವಿಷ್ಟು ಮಾಡಿದರೆ, ಮೊಬೈಲ್ ಸ್ಕ್ರೀನ್‌ ನಲ್ಲಿ ಯಾವುದೇ ಡ್ಯಾಮೇಜ್ ಆಗಿರದಿದ್ದರೆ ನಿಮ್ಮ ಸ್ಮಾರ್ಟ್ಫೋನ್ ಹೊಸತರಂತೆ ಕಾಣುವ ಸಾದ್ಯತೆ ಹೆಚ್ಚಿರುತ್ತದೆ. ಆಗ, ನೀವು ಅದನ್ನು ಎಕ್ಸ್ಚೇಂಜ್‌ ನಲ್ಲಿ ಅಥವಾ ಹೇಗಾದರೂ ಮಾರಾಟ ಮಾಡಿದರೆ ಒಳ್ಳೆಯ ಮೌಲ್ಯ ಬರುವುದರಲ್ಲಿ ಯಾವುದೇ ಸಂಶಯವಿಲ್ಲ.

ಇಂದುಧರ ಹಳೆಯಂಗಡಿ

ಇದನ್ನೂ ಓದಿ : ರಾಜ್ಯ ಸರ್ಕಾರದಿಂದ ಕಾಟಾಚಾರದ ಪ್ಯಾಕೇಜ್‌  : ಸತೀಶ ಜಾರಕಿಹೊಳಿ

Advertisement

Udayavani is now on Telegram. Click here to join our channel and stay updated with the latest news.

Next