Advertisement

Theft: ಆನ್‌ಲೈನ್‌ ಡೆಲಿವರಿ ಬಾಯ್‌ನ ಬ್ಯಾಗ್‌ ಲಪಟಾಯಿಸಿದ ಕಳ್ಳರು

11:03 AM Aug 05, 2024 | Team Udayavani |

ಬೆಂಗಳೂರು: ವೈಟ್‌ ಫೀಲ್ಡ್‌ ವ್ಯಾಪ್ತಿಯಲ್ಲಿ ಆನ್‌ಲೈನ್‌ ಡೆಲಿವರಿ ಬಾಯ್‌ವೊಬ್ಬ ಸ್ಕೂಟರ್‌ ಮುಂಭಾಗ ಇಟ್ಟು ಹೋಗಿದ್ದ ಬ್ಯಾಗ್‌ ವೊಂದನ್ನು ಇಬ್ಬರು ಕಳ್ಳರು ಲಪಟಾಯಿಸಿದ್ದಾರೆ.

Advertisement

ವೈಟ್‌ ಫೀಲ್ಡ್ ವ್ಯಾಪ್ತಿಯಲ್ಲಿ ಆ.1ರಂದು ಡೆಲಿವರಿ ಬಾಯ್‌ ರಸ್ತೆ ಪಕ್ಕ ತನ್ನ ಸ್ಕೂಟರ್‌ ನಿಲುಗಡೆ ಮಾಡಿ ಬ್ಯಾಗ್‌ ಅನ್ನು ಸ್ಕೂಟರ್‌ ಮುಂಭಾಗ ಇಟ್ಟು ಕೆಲಸದ ನಿಮಿತ್ತ ಅಲ್ಲೇ ಸಮೀಪದಲ್ಲಿ ಹೋಗಿದ್ದ. ಅದೇ ರಸ್ತೆಯಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ಕಳ್ಳರು ಸ್ಕೂಟರ್‌ ಮುಂದೆ ಇಟ್ಟಿದ್ದ ಬ್ಯಾಗ್‌ ಅನ್ನು ತೆಗೆದುಕೊಂಡು ಕ್ಷಣಮಾತ್ರದಲ್ಲಿ ಪರಾರಿಯಾಗಿದ್ದಾರೆ. ‌

ಕಳ್ಳರ ಕೃತ್ಯ ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ಸೆರೆ ಯಾಗಿದ್ದು, ಇದರ ದೃಶ್ಯಾವಳಿಯನ್ನು ವ್ಯಕ್ತಿಯೊಬ್ಬರು ಸಾಮಾಜಿಕ ಜಾಲ ತಾಣ “ಎಕ್ಸ್‌’ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ಇಂತಹ ಪ್ರಕರಣಗಳ ಬಗ್ಗೆ ಪೊಲೀಸರು ಗಮನಹರಿಸಿ ಕಡಿವಾಣ ಹಾಕಬೇಕು ಎಂದು ಅದೇ ವ್ಯಕ್ತಿ ಎಕ್‌ Õನಲ್ಲಿ ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ಡೆಲಿವರಿ ಬಾಯ್‌ಗಳು ಈ ಕಳ್ಳರ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಸಲಹೆ ನೀಡಿದ್ದಾರೆ.

ಕಳ್ಳರು ಬ್ಯಾಗ್‌ ಕದಿಯುವ ವಿಡಿಯೋ ವೈರಲ್‌ ಆಗಿದೆ. ಬರುತ್ತಿದೆ

 

Advertisement
Advertisement

Udayavani is now on Telegram. Click here to join our channel and stay updated with the latest news.

Next