Advertisement

Vitla: ಮನೆಗೆ ನುಗ್ಗಿ ನಗ ನಗದು ದೋಚಿದ ಕಳ್ಳರು… ಮನೆ ಕಾಯುತ್ತಿದ್ದ ಸಾಕು ನಾಯಿ ಕಾಣೆ

03:39 PM Aug 06, 2024 | Team Udayavani |

ವಿಟ್ಲ : ಸಾಲೆತ್ತೂರು ನಿವಾಸಿ ಜಗನ್ನಾಥ್ ಅವರ ಮನೆಗೆ ಕಳ್ಳರು ನುಗ್ಗಿ ಚಿನ್ನಾಭರಣ, ನಗದು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕಳವುಗೈದಿದ್ದಾರೆ.

Advertisement

ಜಗನ್ನಾಥ್‌ರವರು ಕೆಲಸದ ನಿಮಿತ್ತ ವಿದೇಶದಲ್ಲಿದ್ದು ಮನೆಯಲ್ಲಿ ಅವರ ಪತ್ನಿ ವಿಜಯ ಜಗನ್ನಾಥ್‌ ಹಾಗೂ ಇಬ್ಬರು ಮಕ್ಕಳು ಮಾತ್ರ ವಾಸಿಸುತ್ತಿದ್ದರು.

ಆ.3ರಂದು ವಿಜಯ ತನ್ನ ಮಕ್ಕಳೊಂದಿಗೆ ಈಶ್ವರಮಂಗಲ ಪಂಚೋಡಿಯಲ್ಲಿರುವ ತಮ್ಮ ತವರು ಮನೆಗೆ ತೆರಳಿದ್ದು ಆ.4ರಂದು ವಾಪಾಸು ಹಿಂದಿರುಗಿ ಮನೆಗೆ ಬರುವ ಈ ವೇಳೆ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.

ಒಟ್ಟು 34 ಗ್ರಾಂ ನಷ್ಟು ಚಿನ್ನ ಹಾಗೂ 6000/-ರೂ ನಗದು ಹಣವನ್ನು ಕಳ್ಳತನ ಮಾಡಿದ್ದಾರೆ. ವಿದೇಶದ ನೋಟುಗಳು ಹಾಗೂ ನಾಣ್ಯಗಳಿದ್ದ ಡಬ್ಬವನ್ನು ಕದ್ದೊಯ್ದಿದ್ದಾರೆ. ವಿಜಯ ಅವರ ಪುತ್ರಿಯ ಶಾಲಾ ಬ್ಯಾಗ್‌ನಲ್ಲಿದ್ದ ಪುಸ್ತಕವನ್ನು ಎಸೆದು ಬ್ಯಾಗನ್ನು ಕೊಂಡೊಯ್ದಿದ್ದಾರೆ. ಕಳ್ಳತನವಾದ ಸೊತ್ತುಗಳ ಒಟ್ಟು ಮೌಲ್ಯ 1,42,000/- ರೂ ಆಗಿದ್ದು, ಘಟನಾ ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಅಲ್ಲದೇ ಮನೆಯನ್ನು ಕಾವಲು ಕಾಯುತ್ತಿದ್ದ ಎರಡು ಶ್ವಾನಗಳಲ್ಲಿ ಒಂದು ಶ್ವಾನ ಕಾಣೆಯಾಗಿದೆ. ಕಳ್ಳರು ನಾಯಿಯನ್ನೂ ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದೆ.

Advertisement

ಇದನ್ನೂ ಓದಿ: Vijayapura: ಕರ್ತವ್ಯದಲ್ಲಿದ್ದ ವೇಳೆ ಮೂರ್ಛೆ ಬಂದು ಕುಸಿದು ಬಿದ್ದ ಪೇದೆ

Advertisement

Udayavani is now on Telegram. Click here to join our channel and stay updated with the latest news.