ಕುಂಬಳೆ: ವೃದ್ಧ ದಂಪತಿ ವಾಸವಾಗಿದ್ದ ಮನೆಗೆ ಕಳ್ಳರು ನುಗ್ಗಿ ಒಡವೆ ದೋಚಿದ ಘಟನೆ ಚೆಮ್ನಾಡಿನಲ್ಲಿ ನಡೆದಿದೆ.ಚೆಮ್ನಾಡು ಪರವನಡ್ಕ ಬಳಿಯ ಕೈಂದಾರಿನಲ್ಲಿ ವಾಸವಾಗಿರುವ ಕೋಡೋತ್ ಕುಂಞಿಕಣ್ಣನ್ ನಂಬ್ಯಾರ್ (78)ಮತ್ತು ಪತ್ನಿ ತಂಗಮಣಿ (70) ವಾಸವಾಗಿದ್ದ ಮನೆಗೆ ಮುಂಜಾನೆ ಮುಖಗವಸು ಧರಿಸಿದ ಮೂವರು ದರಡೆಕೋರರು ಮನೆಗೆ ನುಗ್ಗಿ ಮನೆಯವರಿಗೆ ಹಲ್ಲೆ ನಡೆಸಿ ಬಳಿಕ ಚಾಕು ಬೀಸಿ ಕೊಲೆ ಬೆದರಿಕೆ ಒಡ್ಡಿ ತಂಗಮಣಿಯವರ ಮೈಮೇಲಿದ್ದ ಒಡವೆಗಳನ್ನು ದೋಚಿದ ಬಳಿಕ ಕವಾಟಿನೊಳಗಿದ್ದ ಚಿನಾಭರಣಗಳನ್ನು ಒಯ್ದಿರುವರು.
ಸುಮಾರು 8 ಪವನ್‌ನಷ್ಟು ಚಿನ್ನವನ್ನು ದೋಚಿದ ಕಳ್ಳರು ತಮಿಳು ಮಲಯಾಳ ಭಾಷೆಯಲ್ಲಿ ಮಾತನಾಡಿದ್ದರು.
ದರೋಡೆಕೋರರು ತೆರಳಿದ ಬಳಿಕ ದಂಪತಿಯರು ಪೊಲೀಸರಿಗೆ ಮತ್ತು ನೆರೆಮನೆಗೆ ವಿಷಯ ತಿಳಿಸಿದಾಗ ಮೇಲ್ಪರಂಬ ಪೊಲೀಸರು ಮತ್ತು ಪಕ್ಕದಲ್ಲಿ ನಡೆಯುತ್ತಿದ್ದ ಕಬಡ್ಡಿ ಪಂದ್ಯಾಟಕ್ಕೆ ಸೇರಿದವರು ಸ್ಥಳಕ್ಕಾಗಮಿಸಿ ಕಳ್ಳರನ್ನು ಪತ್ತೆ ಹಚ್ಚಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಬೆಳಗ್ಗೆ ಕಾಸರಗೋಡಿನಿಂದ ಉನ್ನತ ಪೊಲಿಸ್ ಅಧಿಕಾರಿಯವರು,ಬೆರಳಚ್ಚು ತಜರು,ಶ್ವಾನ ದಳ ತಂಡ ಸ್ಥಳಕ್ಕೆ ಆಗಮಿಸಿ ತಪಾಸಣೆ ನಡೆಸಿ ದರೋಡೆ ತಂಡವನ್ನು ಪತ್ತೆ ಹಚ್ಚಲು ಬಲೆ ಬೀಸಿದ್ದಾರೆ.
7.2 ಲೀಟರ್ ಮದ್ಯ ವಶ
ಕುಂಬಳೆ: ಬದಿಯಡ್ಕ ದೇರಡ್ಕ ಕರ್ನಾಟಕ ಗಡಿಯಲ್ಲಿ ಬದಿಯಡ್ಕ ಅಬಕಾರಿ ವಲಯಾಧಿಕಾರಿಯವರ ನೇತೃತ್ವದಲ್ಲಿ ತನಿಖೆ ನಡೆಸಿದಾಗ 7.2 ಲೀಟರ್ ಕರ್ನಾಟಕ ನಿರ್ಮಿತ ಮದ್ಯವನ್ನು ಪತ್ತೆ ಹಚ್ಚಿದ್ದಾರೆ.ಆರೋಪಿ ಅಜ್ಜಾವರ ಗಂಧದಗುಡ್ಡೆಯ ನಾಗರಾಜ ಎಂಬಾತನನ್ನು ಸ್ಕೂಟಿ ಸಹಿತ ವಶಪಡಿಸಲಾಗಿದೆ.
ಬದಿಯಡ್ಕ ಅಬಕಾರಿ ವಲಯಾಧಿಕಾರಿಯವರ ನೇತೃತ್ವದಲ್ಲಿ ಮುಳ್ಳೇರಿಯದಲ್ಲಿ ತನಿಖೆ ನಡೆಸಿದಾಗ ಪಕ್ಕದ ಗುಡ್ಡದಲಿ É10 ಲೀಟರ್ ನಾಡ ಸಾರಾಯಿ ಮತ್ತು ಸುಮಾರು 10 ಲೀಟರ್ ಹುಳಿರಸವನ್ನು ಪತ್ತೆ ಹಚ್ಚಿ ಅದನ್ನು ಅಲ್ಲೇ ಚೆಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿರುವರು. ಪೆರಿಯಾ ಗ್ರಾಮದ ಅರಂಗನಡ್ಕದಲ್ಲಿ ಹೊಸದುರ್ಗ ಅಬಕಾರಿ ಅಧಿಕಾರಿ ಗಂಗಾಧರನ್ ನೇತೃತ್ವದಲ್ಲಿ ತಪಾಸಣೆ ನಡೆಸಿದಾಗ 7.5 ಲೀಟರ್ ಮದ್ಯವನ್ನು ವಶಪಡಿಸಿದ್ದಾರೆ. ಮದ್ಯ ಮಾರಾಟದ ಮಹಿಳೆ ಮಾದವಿ ಎಂ. ಎಂಬಾಕೆಯನ್ನು ಬಂಧಿಸಲಾಗಿದೆ.
ಯುವಕ
ನೇಣಿಗೆ ಶರಣು
ಕುಂಬಳೆ: ಅಡೂರು ಮಂಡೆಬೆಟ್ಟು ಸರೋಜಿನಿಯವರ ಪುತ್ರ ವಿಜಿತ್ ಕುಮಾರ್ (32) ಎಂಬ ಯುವಕನ ಮೃತದೇಹ ಮನೆ ಪಕ್ಕದ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈತ ಶಬರಿಮಲೆ ಯಾತ್ರೆಗೆ ಮಾಲೆ ಧರಿಸಿದ್ದು ಆದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.