Advertisement

ಕುಖ್ಯಾತ ದರೋಡೆಕೋರ ಸೇರಿ ಮೂವರ ಸೆರೆ ­

07:49 PM May 06, 2021 | Team Udayavani |

ಹುಬ್ಬಳ್ಳಿ: ಚಾಕುವಿನಿಂದ ಹಲ್ಲೆ ಮಾಡಿ, ಏರ್‌ ಗನ್‌ ತೋರಿಸಿ ನಗದು, ಬಟ್ಟೆಗಳನ್ನು ರಾಬರಿ ಮಾಡಿದ್ದ ಕುಖ್ಯಾತ ದರೋಡೆಕೋರ ಸೇರಿದಂತೆ ಮೂವರನ್ನು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ ಹೇಳಿದರು.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಸೆಟ್ಲಮೆಂಟ್‌ ಕರ್ಕಿ ಬಸವೇಶ್ವರ ನಗರದ ಶ್ರೀನಿವಾಸ ಟಿ. ವೀರಾಪೂರ, ಸಿದ್ದಾರ್ಥ ಊರ್ಫ್‌ ಕಿರಣ ಜಿ. ನವಲಗುಂದ ಹಾಗೂ ಸುಧಾಕರ ಎಸ್‌. ಗಬ್ಬೂರ ಬಂ ಧಿಸಿ, ಅವರಿಂದ ಏರ್‌ಗನ್‌, 7,500ರೂ. ನಗದು, ಬಟ್ಟೆ ಹಾಗೂ ಕೃತ್ಯಕ್ಕೆ ಬಳಸಿದ್ದ ಬುಲೆಟ್‌ ವಾಹನ, ಎರಡು ಮೊಬೈಲ್‌ ವಶಪಡಿಸಿಕೊಂಡಿದ್ದಾರೆ. ಇವರಲ್ಲಿ ರೌಡಿಶೀಟರ್‌ಗಳಾದ ಶ್ರೀನಿವಾಸ ಮತ್ತು ಸಿದ್ಧಾರ್ಥ ಮೇಲೆ ಕೊಲೆ, ಕೊಲೆಗೆ ಯತ್ನ ಹಾಗೂ ದರೋಡೆ, ಕಳ್ಳತನ ಪ್ರಕರಣಗಳಿವೆ. ಇವರನ್ನು ಗಡಿಪಾರು ಮಾಡುವ ನಿಟ್ಟಿನಲ್ಲಿ ಯೋಜಿಸಲಾಗುವುದು ಎಂದು ಎಸ್‌ಪಿ ಬಂಧಿತರು ರವಿವಾರ ರಾತ್ರಿ ಎನ್‌ಎಚ್‌ ರಸ್ತೆಯ ಬೆಳಗಲಿ ಕ್ರಾಸ್‌ ಬಳಿ ನಗರದ ಬಂಕಾಪುರ ಚೌಕ್‌ ಬಳಿಯ ನಿವಾಸಿಗಳಾದ ಶಿರಾಜ ಕೋಳೂರ ಮತ್ತು ಹಾಶೀಮಪೀರ ಸವಣೂರ ಅವರಿಗೆ ಚಾಕುವಿನಿಂದ ಹಲ್ಲೆ ಮಾಡಿ, ಏರ್‌ಗನ್‌ ತೋರಿಸಿ ಅವರ ಬಳಿಯಿದ್ದ 15 ಸಾವಿರ ರೂ. ನಗದು, ಹೊಲಿಯಲು ಎಂದು ಕತ್ತರಿಸಿದ್ದ ಸುಮಾರು 20 ಸಾವಿರ ರೂ. ಮೌಲ್ಯದ ಬಟ್ಟೆಗಳು, ಎಟಿಎಂ ಕಾರ್ಡ್‌ ಇನ್ನಿತರೆ ದಾಖಲಾತಿಗಳಿದ್ದ ಪರ್ಸ್‌ಗಳನ್ನು ದೋಚಿಕೊಂಡು ಹೋಗಿದ್ದರು.

ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಠಾಣೆಯ ಇನ್ಸ್‌ಪೆಕ್ಟರ್‌ ರಮೇಶ ಗೋಕಾಕ, ಪಿಎಸ್‌ ಐಗಳಾದ ಪ್ರಸಾದ ಫಣೇಕರ, ಡಿ. ಚಾಮುಂಡೇಶ್ವರಿ, ಎಎಸ್‌ಐ ಬಿ.ಎಸ್‌. ಹುಬ್ಬಳ್ಳಿ, ಸಿಬ್ಬಂದಿಗಳಾದ ನಾರಾಯಣ ಹಿರೇಹೊಳಿ, ಎಂ.ಎಫ್‌. ಹೆಳವರ, ಮಹಾಂತೇಶ ನಾನಾಗೌಡ, ಡಾಬೋಳಿ, ಎಂ.ಎಫ್‌. ವಾಲೀಕಾರ, ಸಿ.ಬಿ. ಜನಗಣ್ಣವರ, ಎ.ಎ. ಠಕಾಯಿ, ಎಸ್‌.ಸಿ. ಲಕ್ಕಮ್ಮನವರ, ಉದಯಕುಮಾರ, ದೇವರಾಜ ಎಸ್‌.ಎಂ., ಮಕುºಲ ಹುಲ್ಲೂರ, ಭರಮಪ್ಪ ಎ.ಆರ್‌. ಎಸ್‌.ಐ., ವೈ.ಡಿ. ಕುಂಬಾರ, ಮಹಾಂತೇಶ ಬಾಕಿ ಅವರುಳ್ಳ ತನಿಖಾ ತಂಡ ಮೂವರನ್ನು ಬಂಧಿಸಿದ್ದಾರೆ. ಬಂಧಿತರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನ, ಲಾರಿಗಳನ್ನು ತಡೆದು ಚಾಲಕರು-ಸವಾರರನ್ನು ಹೆದರಿಸಿ, ಹಲ್ಲೆ ಮಾಡಿ ರಾಬರಿ ಮಾಡುವುದನ್ನೇ ದಂಧೆ ಮಾಡಿಕೊಂಡಿದ್ದಾರೆ.

ಇವರ ಜತೆ ಇನ್ನಷ್ಟು ಜನರ ತಂಡ ಇರಬಹುದು. ಏರ್‌ಗನ್‌ ಎಲ್ಲಿಂದ ತಂದಿದ್ದರು ಸೇರಿದಂತೆ ಇನ್ನಿತರೆ ಕುರಿತು ತನಿಖೆ ನಡೆಸಲಾಗುವುದು ಎಂದರು. ಇನ್ಸ್‌ಪೆಕ್ಟರ್‌ ರಮೇಶ ಗೋಕಾಕ, ಪಿಎಸ್‌ಐ ಪ್ರಸಾದ ಫಣೇಕರ ಸುದ್ದಿಗೋಷ್ಠಿಯಲ್ಲಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next