ಮಧ್ಯಪ್ರದೇಶ : ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯಲ್ಲಿ ಕಳ್ಳನೊಬ್ಬ ಕೆಲವು ದಿನಗಳ ಹಿಂದೆ ದೇವಸ್ಥಾನದಿಂದ ಕದ್ದ ಬೆಳ್ಳಿ ಮತ್ತು ಹಿತ್ತಾಳೆ ವಸ್ತುಗಳನ್ನು ಪತ್ರದ ಮೂಲಕ ಕ್ಷಮೆಯಾಚಿಸಿ ಹಿಂದಿರುಗಿಸಿದ ವಿಚಿತ್ರ ಘಟನೆಯೊಂದು ನಡೆದಿದೆ.
ಅಂದಹಾಗೆ ಕಳ್ಳ ತನ್ನ ಪತ್ರದಲ್ಲಿ ತಾನು ಕಳ್ಳತನ ಮಾಡಿ ತುಂಬಾ ತೊಂದರೆ ಅನುಭವಿಸಿದ್ದೇನೆ ಅದಕ್ಕಾಗಿ ಕ್ಷಮೆಯಾಚಿಸಿ ಕಳ್ಳತನ ಮಾಡಿದ ಎಲ್ಲಾ ವಸ್ತುಗಳನ್ನು ಹಿಂತಿರುಗಿಸುತ್ತಿದ್ದೇನೆ ಎಂದು ಪತ್ರದಲ್ಲಿ ಬರೆದು, ಕಳವು ಮಾಡಿದ ವಸ್ತುಗಳನ್ನೆಲ್ಲಾ ತಂದು ಊರಿನ ಗ್ರಾಮ ಪಂಚಾಯತ್ ಕಟ್ಟಡದ ಬಳಿ ಇಟ್ಟು ಹೋಗಿದ್ದಾನೆ. ಕೆಲ ಸಮಯದ ಬಳಿಕ ಆ ದಾರಿಯಲ್ಲಿ ಸಾಗುವ ವ್ಯಕ್ತಿಗಳು ಗ್ರಮ ಪಂಚಾಯತ್ ಕಟ್ಟಡದ ಬಳಿ ಇರಿಸಿದ್ದ ವಸ್ತುಗಳನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ಈ ವೇಳೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ದೇವಸ್ಥಾನದಲ್ಲಿ ಕದ್ದ ವಸ್ತುಗಳಾಗಿತ್ತು ಅಲ್ಲದೆ ಅದರೊಳಗೆ ಪತ್ರವೊಂದಿತ್ತು ಅದನ್ನು ನೋಡಿದಾಗ ದೇವಸ್ಥಾನದಲ್ಲಿ ಕಳವು ಮಾಡಿದ ಕಳ್ಳರೇ ಇದನ್ನು ಇಟ್ಟು ಹೋಗಿರುವುದು ದೃಢಪಟ್ಟಿದೆ.
ಘಟನೆ ವಿವರ : ಕಳೆದ ಅಕ್ಟೋಬರ್ 24ರ ರಾತ್ರಿ ಬಜಾರ್ ಚೌಕ್‌ನಲ್ಲಿರುವ ಶಾಂತಿನಾಥ ದಿಗಂಬರ ಜೈನ ದೇವಸ್ಥಾನಕ್ಕೆ ನುಗ್ಗಿದ ಕಳ್ಳ ಅಲ್ಲಿದ್ದ ಒಂಬತ್ತು ಬೆಳ್ಳಿಯ ಛತ್ರಿಗಳು ಮತ್ತು ಮೂರು ಹಿತ್ತಾಳೆಯ ವಸ್ತುಗಳನ್ನು ಒಳಗೊಂಡಂತೆ ದುಬಾರಿ ವಸ್ತುಗಳನ್ನು ಕಳವುಗೈದಿದ್ದ, ಈ ಕುರಿತು ಬಾಲಾಘಾಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಪೊಲೀಸರು ಕಳ್ಳರ ಪತ್ತೆಗೆ ವಿವಿಧ ತಂಡ ರಚಿಸಿ ಕಾರ್ಯಾಚರಣೆ ನಡೆಸಿದ್ದರು ಇದನ್ನು ಅರಿತ ಕಳ್ಳ ತನಗಿನ್ನು ಉಳಿಗಾಲವಿಲ್ಲ ಎಂದು ಪತ್ರ ಬರೆದು ಕದ್ದ ವಸ್ತುಗಳನ್ನೆಲ್ಲಾ ಹಿಂತಿರುಗಿಸುವ ನಿರ್ಧಾರಕ್ಕೆ ಬಂದಿದ್ದಾನೆ.
ಘಟನೆಗೆ ಸಂಬಂಧಿಸಿ ಪೊಲೀಸರು ಕಳ್ಳರ ಹುಡುಕಾಟ ಮುಂದುವರೆಸಿದ್ದಾರೆ.
ಇದನ್ನೂ ಓದಿ : ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಯಾಗುತ್ತಿದೆ: ಪ್ರಧಾನಿ ಮೋದಿ