Advertisement

Cat; ಚಿತ್ರ ನಿರ್ದೇಶಕಿಯ ಮನೆಗೆ ನುಗ್ಗಿದ ಕಳ್ಳ: ಬೆಕ್ಕಿನಿಂದಾಗಿ ಹೆದರಿ ಪರಾರಿ!

11:29 AM Aug 28, 2024 | Team Udayavani |

ಮುಂಬೈ: ಮರಾಠಿ ಚಲನಚಿತ್ರ ನಿರ್ದೇಶಕಿ ಸ್ವಪ್ನಾ ಜೋಶಿ ಅವರ ಮುಂಬೈನಲ್ಲಿರುವ ಫ್ಲಾಟ್‌ಗೆ ಕಳ್ಳನೊಬ್ಬ ನುಗ್ಗಿ 6,000 ರೂಪಾಯಿ ನಗದು ಹಣದೊಂದಿಗೆ ಪರಾರಿಯಾಗಿದ್ದಾನೆ ಎಂದು ಮಂಗಳವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಸೋಮವಾರ, ಅಂಧೇರಿ (ಪಶ್ಚಿಮ) ದಲ್ಲಿರುವ ಜೋಶಿ ಅವರ ಫ್ಲಾಟ್‌ಗೆ ಭಾನುವಾರ ಪ್ರವೇಶಿಸಿದ ಅಪರಿಚಿತ ವ್ಯಕ್ತಿಯ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಅಂಬೋಲಿ ಪೊಲೀಸ್ ಠಾಣೆಯ ಅಧಿಕಾರಿಯ ಪ್ರಕಾರ, ಕಳ್ಳನು ಡ್ರೈನೇಜ್ ಪೈಪ್‌ ಮೂಲಕ ಮರಾಠಿ ನಿರ್ದೇಶಕಿಯ ಫ್ಲ್ಯಾಟ್‌ಗೆ ನುಸುಳಿದ್ದಾನೆ. ಮನೆಯಲ್ಲಿದ್ದ ಸಾಕು ಬೆಕ್ಕು ಅಪರಿಚಿತನನ್ನು ಕಂಡು ಆತಂಕಕಾರಿ ಶಬ್ದ ಮಾಡಿದ ನಂತರ ಮನೆಯಲ್ಲಿದ್ದ ನಿರ್ದೇಶಕಿಯ ಅಳಿಯ ಎಚ್ಚೆತ್ತುಕೊಂಡಿದ್ದಾರೆ.

ಫ್ಲಾಟ್‌ನಲ್ಲಿ ಅಳವಡಿಸಲಾದ ಸಿಸಿಟಿವಿ ಕೆಮರಾಗಳನ್ನು ಪರಿಶೀಲಿಸಿದಾಗ, ಬೆಳಗಿನ ಜಾವ 3.10 ರಿಂದ 3.30 ರ ನಡುವೆ ಡ್ರೈನೇಜ್ ಪೈಪ್ ಹತ್ತಿ ಕಿಟಕಿಯಿಂದ ಟಿ-ಶರ್ಟ್ ಮತ್ತು  ಶಾರ್ಟ್ಸ್‌ ಧರಿಸಿದ್ದ ಕಳ್ಳ ಮನೆಗೆ ಪ್ರವೇಶಿಸುವುದನ್ನು ಕಂಡಿದ್ದಾರೆ.

ಮನೆಯಲ್ಲಿ ಮಲಗಿದ್ದ ನಿರ್ದೇಶಕಿಯ ವೃದ್ಧ ತಾಯಿಯ ಕೋಣೆಗೆ ಕಳ್ಳ ಪ್ರವೇಶಿಸಿದ್ದಾನೆ. ನಂತರ ಬೆಡ್ ರೂಮ್ ಗೆ ಪ್ರವೇಶಿಸಿದ್ದಾನೆ. ಅಲ್ಲಿ ನಿರ್ದೇಶಕಿ ಪುತ್ರಿ ಮತ್ತು ಆಕೆಯ ಪತಿ ಮಲಗಿದ್ದರು. ಪರ್ಸ್ ಕದ್ದು ಅದರಲ್ಲಿದ್ದ 6,000 ರೂ.ಗಳನ್ನು ಹೊರತೆಗೆದಿದ್ದಾನೆ, ಆದರೆ ಕೋಣೆಯಲ್ಲಿಟ್ಟಿದ್ದ ಲ್ಯಾಪ್‌ಟಾಪ್ ಅನ್ನು ಮುಟ್ಟಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಬೆಕ್ಕಿನ ಕೂಗು ಕೇಳಿಸಿ ಎಚ್ಚೆತ್ತುಕೊಂಡ ನಿರ್ದೇಶಕಿ ಅಳಿಯ ದೇವನ್ ಕಳ್ಳನನ್ನು ಗುರುತಿಸಿ ಅವನನ್ನು ಹಿಡಿಯಲು ಮುಂದಾಗಿದ್ದಾರೆ. ಆದರೆ ಆತ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದನು.

ಚಲನಚಿತ್ರ ನಿರ್ಮಾಪಕರು ಪೊಲೀಸರನ್ನು ಸಂಪರ್ಕಿಸಿದರು ಮತ್ತು ದೂರು ದಾಖಲಿಸಿದರು ಮತ್ತು ಅದರ ಆಧಾರದ ಮೇಲೆ ಅಪರಿಚಿತ ವ್ಯಕ್ತಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next