Advertisement
ಮಧ್ಯಾಹ್ನ ತೇರು ಎಳೆಯುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಅಕ್ಷಯ ತೃತೀಯಯದ ದಿನ ಚಿನ್ನ ತೆಗೆದುಕೊಳ್ಳಬೇಕು ಎಂದು ಹೇಳುತ್ತಾರೆ ಆದರೆ ಕಳ್ಳನ ಕೈ ಚಳಕದಿಂದ ಮಹಿಳೆ ಚಿನ್ನ ಕಳೆದುಕೊಂಡು ಆತಂಕಕ್ಕೀಡಾಗಿದ್ದಾರೆ.
ತೀರ್ಥಹಳ್ಳಿ: ಎರಡನೇ ತಿರುಪತಿಯೆಂದೇ ಪ್ರಸಿದ್ಧಿ ಪಡೆದ ತಾಲೂಕಿನ ಆರಗ ಅರುಣಗಿರಿ ಬೆಟ್ಟದ ಶ್ರೀಲಕ್ಷ್ಮಿವೆಂಕಟರಮಣ ಸ್ವಾಮಿ ದೇವರ ರಥೋತ್ಸವವು ಶುಕ್ರವಾರ ಅಕ್ಷತ್ತದಿಗೆಯ ದಿವಸ ಅತ್ಯಂತ ಸಂಭ್ರಮ ಸಡಗರದಿಂದ ನಡೆಯಿತು. ತೀರ್ಥಹಳ್ಳಿಯ ಪುರಾಣ ಪ್ರಸಿದ್ಧ ಎಳ್ಳಮಾವಾಸ್ಯೆಯ ಜಾತ್ರೆ ತಾಲೂಕಿನ ಪ್ರಥಮ ತಾಲೂಕಿನ ಜಾತ್ರಯಾದರೆ ಆರಗ ಅರುಣಗಿರಿಯ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವರ ರಥೋತ್ಸವ ಕೊನೆಯ ಜಾತ್ರಾ ಮಹೋತ್ಸವವಾಗಿರುತ್ತದೆ. ಆರಗ ಸೀಮೆಯ ಹಾಗೂ ತಾಲೂಕಿನ ಸಾವಿರಾರು ಭಕ್ತಾಧಿಗಳು ಈ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ಬಂದಂತಹ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಹೊಮ್ಮಿಕೊಳ್ಳಲಾಗಿತ್ತು.
Related Articles
Advertisement