Advertisement

ಕ್ರೂಸ್ ಡ್ರಗ್ಸ್ ಪಾರ್ಟಿಗೆ ನನಗೂ ಆಹ್ವಾನ ಬಂದಿತ್ತು: ಮಹಾ ಸಚಿವ ಅಸ್ಲಾಂ ಶೇಖ್

12:53 PM Nov 08, 2021 | Team Udayavani |

ಮುಂಬಯಿ : ಕ್ರೂಸ್ ಪಾರ್ಟಿಗೆ ನನಗೂ ಆಹ್ವಾನ ಬಂದಿತ್ತು ಎಂದು ಮಹಾರಾಷ್ಟ್ರದ ಸಚಿವ ಅಸ್ಲಾಂ ಶೇಖ್ ಸೋಮವಾರ ಹೇಳಿಕೆ ನೀಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ‘ಸಚಿವನಾಗಿರುವುದರಿಂದ ನನಗೆ ಅನೇಕ ಕಾರ್ಯಕ್ರಮಗಳಿಗೆ ಮತ್ತು ಪಾರ್ಟಿಗಳಿಗೆ ಆಹ್ವಾನ ಬರುತ್ತದೆ. ನನ್ನನ್ನು ಕ್ರೂಸ್ ಪಾರ್ಟಿಗೆ ಕಾಶಿಫ್ ಖಾನ್ ಎಂಬುವವರು ಆಹ್ವಾನಿಸಿದ್ದರು. ನನಗೆ ಅವರು ವೈಯಕ್ತಿಕವಾಗಿ ಪರಿಚಯವಿಲ್ಲ ಮತ್ತು ಅವರ ಸಂಪರ್ಕ ಸಂಖ್ಯೆ ಕೂಡ ನನ್ನ ಬಳಿ ಇಲ್ಲ.ಯಾರಾದರೂ ಸಾಕ್ಷ್ಯಗಳಿದ್ದರೆ ಅದನ್ನು ಮುಂದೆ ತರಬೇಕು’ ಎಂದು ಸಚಿವ ಅಸ್ಲಾಂ ಶೇಖ್ ಪ್ರತಿ ಸವಾಲು ಹಾಕಿದ್ದಾರೆ.

ಮಹಾರಾಷ್ಟ್ರದ ಸಚಿವ ಅಸ್ಲಂ ಶೇಖ್ ಅವರು ಫ್ಯಾಶನ್ ಟಿವಿ ಇಂಡಿಯಾ ಎಂಡಿ ಆಗಿರುವ ಡ್ರಗ್ ಪೆಡ್ಲರ್ ಕಾಶಿಫ್ ಖಾನ್ ಅವರನ್ನು ತಮ್ಮ ಪಾರ್ಟಿಗಳಿಗೆ ಕರೆಯುತ್ತಿದ್ದರು ಎಂದು ಬಿಜೆಪಿ ನಾಯಕ ಮೋಹಿತ್ ಕಾಂಬೋಜ್ ಆರೋಪಿಸಿದ್ದರು.

ಕಳೆದ ತಿಂಗಳು ಕ್ರೂಸ್  ಪಾರ್ಟಿ ವೇಳೆ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ನನ್ನು ಎನ್ ಸಿಬಿ ಅಧಿಕಾರಿಗಳು ಬಂಧಿಸಿದ್ದರು.ಪ್ರಕರಣದಲ್ಲಿ ಕಾಶಿಫ್ ಖಾನ್ ಹೆಸರು ಕೇಳಿಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next