ಲಕ್ನೋ: ಉತ್ತರಪ್ರದೇಶ ರಾಜ್ಯವನ್ನು ನಂಬರ್ ವನ್ ಮಾಡುವುದಾಗಿ ಯಾರು (ಬಿಜೆಪಿ) ಹೇಳುತ್ತಿದ್ದಾರೋ ಅವರು, ನಿಜಕ್ಕೂ ರಾಜ್ಯವನ್ನು ಲಾಕಪ್ ಡೆತ್, ರೈತರ ಆತ್ಯಹತ್ಯೆ ಪ್ರಕರಣ, ಹಸಿವಿನ ಸೂಚ್ಯಂಕದಲ್ಲಿ ಏರಿಕೆ ಹಾಗೂ ಸಾರ್ವಜನಿಕ ಸಂಸ್ಥೆ, ಬ್ಯಾಂಕ್ ಗಳನ್ನು ಮಾರಾಟ ಮಾಡುವ ಮೂಲಕ ನಂಬರ್ ವನ್ ಮಾಡಲು ಹೊರಟಿದೆ ಎಂದು ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಆರೋಪಿಸಿದರು.
ಇದನ್ನೂ ಓದಿ:ಲೋಕಾಯುಕ್ತ ಇದ್ದಿದ್ದರೆ ಸಿದ್ದರಾಮಯ್ಯ ಜೈಲಿಗೆ ಹೋಗಬೇಕಾಗಿತ್ತು: ವಿಶ್ವನಾಥ್
ರಾಯ್ ಬರೇಲಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಯಾದವ್, ಉತ್ತರಪ್ರದೇಶಕ್ಕೆ ಯಾವ ಆಧಾರದ ಮೇಲೆ ನಂಬರ್ ವನ್ ಸ್ಥಾನ ಕೊಡಬೇಕು? ಇಲ್ಲಿ ಸುಲಭವಾಗಿ ವ್ಯವಹಾರ ಮಾಡಲು ಅಸಾಧ್ಯ, ಉತ್ತರ ಪ್ರದೇಶಗಳಲ್ಲಿನ ರಸ್ತೆಯಗಳೂ ಕಳಪೆಯಾಗಿದೆ. ಉತ್ತರ ಪ್ರೇಶದಲ್ಲಿ ರಸ್ತೆ ಉದ್ಘಾಟನೆ ವೇಳೆಯಲ್ಲಿ ತೆಂಗಿನ ಕಾಯಿ ಒಡೆದಾಗ, ತೆಂಗಿನ ಕಾಯಿ ಒಡೆಯಲಿಲ್ಲ, ಬದಲಿಗೆ ರಸ್ತೆಯೇ ಬಿರುಕು ಬಿಟ್ಟಿರುವ ಘಟನೆ ನಡೆದಿದೆ ಎಂದು ಟೀಕಿಸಿದರು.
ಮುಂಬರುವ ಉತ್ತರಪ್ರದೇಶ ಚುನಾವಣೆಯಲ್ಲಿ ಬಿಜೆಪಿಯ ಡಬ್ಬಲ್ ಎಂಜಿನ್ ಸರ್ಕಾರ ಧೂಳೀಪಟವಾಗಲಿದೆ ಎಂದು ಅಖಿಲೇಶ್ ವಾಗ್ದಾಳಿ ನಡೆಸಿದರು. ಈ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದರು.
ಲಾಖೀಂಪುರ್ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರನ್ನು ಉತ್ತರಪ್ರದೇಶ ಸರ್ಕಾರ ಅಮಾನತುಗೊಳಿಸಬೇಕು ಎಂದು ಅಖಿಲೇಶ್ ಯಾದವ್ ಈ ಸಂದರ್ಭದಲ್ಲಿ ಆಗ್ರಹಿಸಿದರು.