Advertisement

ಮುಸ್ಲಿಮರನ್ನು ಖಳನಾಯಕರನ್ನಾಗಿಸಿದ್ದಾರೆ : ಕೆಪಿಸಿಸಿ ವಿಶೇಷ ಸಭೆಯಲ್ಲಿ ಸಿದ್ದರಾಮಯ್ಯ

02:29 PM Apr 01, 2022 | Team Udayavani |

ಬೆಂಗಳೂರು: ಹಿಜಾಬ್ ವಿಚಾರದಲ್ಲಿಮುಸ್ಲಿಮರನ್ನು ಖಳನಾಯಕರನ್ನಾಗಿ ಬಿಂಬಿಸಲು ಬಿಜೆಪಿ ಸರಕಾರ ಯತ್ನಿಸಿದೆ. ಅಲ್ಪಸಂಖ್ಯಾತರ ರಕ್ಷಣೆ ವಿಚಾರದಲ್ಲಿ ಕಾಂಗ್ರೆಸ್ ಇನ್ನಷ್ಟು ಆಕ್ರಮಣಕಾರಿಯಾಗಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

Advertisement

ರಾಹುಲ್ ಗಾಂಧಿ ಸಮ್ಮುಖದಲ್ಲಿ ನಡೆದ ಕೆಪಿಸಿಸಿ ವಿಶೇಷ ಸಭೆಯಲ್ಲಿ ಈ ವಿಚಾರವನ್ನು ಅವರು ಪ್ರಸ್ತಾಪಿಸಿದ್ದಾರೆ. ಡಿ.ಕೆ.ಶಿವಕುಮಾರ್, ರ‍್ಗೆ, ಹರಿಪ್ರಸಾದ್, ಎಂ.ಬಿ.ಪಾಟೀಲ್ ಸೇರಿದಂತೆ ಕಾಂಗ್ರೆಸ್ನ ಇನ್ನಿತರ ನಾಯಕರು ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿಲ್ಲ. ಆದರೆ ಸಿದ್ದರಾಮಯ್ಯ ಮಾತ್ರ ಹಿಜಾಬ್ ವಿಚಾರವನ್ನು ಬಲವಾಗಿ ಪ್ರತಿಪಾದಿಸುವ ಮೂಲಕ ತಮ್ಮ ನಿಲುವಿಗೆ ಅಂಟಿಕೊಂಡಿದ್ದಾರೆ.

ಸರಕಾರ ಮನಸು ಮಾಡಿದ್ದರೆ ಹಿಜಾಬ್ ವಿಚಾರವನ್ನು ರಾಜ್ಯಾದ್ಯಂತ ಹರಡದಂತೆ ತಡೆಯಬಹುದಿತ್ತು. ಆದರೆ ಭಜರಂಗದಳ, ಹಿಂದೂ ಮಹಾಸಭಾ, ಆರ್ ಎಸ್ಎಸ್ ಜತೆ ಸೇರಿ ಇದಕ್ಕೆ ಕುಮ್ಮಕ್ಕು ನೀಡಿತು. ಎಸ್ ಡಿಪಿಐ ಕೂಡಾ ಅದಕ್ಕೆ ಪ್ರೇರಣೆ ನೀಡಿದೆ. ಮುಸ್ಲಿಂರನ್ನು ಖಳನಾಯಕರನ್ನಾಗಿಸುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.

ಈ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಅನಗತ್ಯ ವಿಚಾರವನ್ನು ಮುನ್ನೆಲೆಗೆ ತರುತ್ತಿದೆ. ಗೋಹತ್ಯೆ ನಿಷೇಧ ಕಾಯಿದೆ, ಮತಾಂತರ ಕಾಯಿದೆ, ಹಿಜಾಬ್ ಹಾಗೂ ಈಗ ಹಲಾಲ್ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ. ಬಿಜೆಪಿ ಹಾಗೂ ಸಂಘ ಪರಿವಾರಕ್ಕೆ ಸಂವಿಧಾನದ ಮೇಲೆ ನಂಬಿಕೆಯಿಲ್ಲ. ಹೀಗಾಗಿ ಕೋಮುವಾದಕ್ಕೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಕೋಮು ವಿಚಾರವನ್ನು ಪ್ರತಿಪಾದಿಸಿದಾಗ ಮಾತ್ರ ಸಮಾಜದ ಬಾಂಧವ್ಯ ಹಾಳು ಮಾಡಲು ಸಾಧ್ಯ ಎಂದು ಬಿಜೆಪಿ ನಂಬಿದೆ. ಆದರೆ ಜಾತ್ಯತೀತ ತತ್ವದ ವಿಚಾರದಲ್ಲಿ ಕಾಂಗ್ರೆಸ್ಗೆ ಸ್ಪಷ್ಟತೆ ಇರಬೇಕು. ನಾವು ಮುಸ್ಲಿಂ ಸಮುದಾಯದ ಜತೆ ನಿಲ್ಲದೇ ಇದ್ದರೆ ಆ ಜನಾಂಗಕ್ಕೆ ಹಾಗೂ ಜಾತ್ಯತೀತ ತತ್ವಕ್ಕೆ ಬೆಲೆ ನೀಡಲು ಸಾಧ್ಯವಿಲ್ಲ. ಸೋನಿಯಾ ಹಾಗೂ ರಾಹುಲ್ ಗಾಂಧಿ ಈ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಭಾವಿಸಿದ್ದೇನೆ ಎಂದು ಹೇಳಿದರು.

Advertisement

ಇದು ಚುನಾವಣಾ ರ‍್ಷ. ಹೀಗಾಗಿ ಆರು ತಿಂಗಳು ಮುಂಚಿತವಾಗಿಯೇ ನಾವು ಅಭ್ಯರ್ಥಿಗಳ ಆಯ್ಕೆ ಮಾಡಬೇಕು. ಆಗಷ್ಟೇ ಸಾಕಷ್ಟು ಸಿದ್ಧತೆಯೊಂದಿಗೆ ಚುನಾವಣೆ ಎದುರಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next