Advertisement
ಗುರುಗಳ ಕಷ್ಟವನ್ನು ನೋಡಿದ ಒಬ್ಬ ಶಿಷ್ಯ ಹತ್ತಿರ ಬಂದು ಏನು ಮಾಡುತ್ತಿದ್ದೀರಿ ಎಂದು ಕೇಳಿದ. ಚಹಾ ಮಾಡುತ್ತಿದ್ದೇನೆ ಎಂದು ಗುರುಗಳು ಉತ್ತರಿಸಿದರು. “ಯಾರಿಗಾಗಿ?’ ಮರುಪ್ರಶ್ನೆ ತೂರಿಬಂತು. “ಓ ಅಲ್ಲಿ ಕುಳಿತಿ ದ್ದಾನಲ್ಲ ಸೋಮಾರಿ, ಅವನಿಗಾಗಿ’ ಎಂದರು ಗುರುಗಳು.
ಶಿಷ್ಯ ಹೇಳಿದ, “ಅವನು ಈಗ ತಾನೇ ಚಹಾ ಮಾಡಿಕೊಳ್ಳುವಷ್ಟು ದೊಡ್ಡವನಾಗಿ ದ್ದಾನಲ್ಲ! ಅವನೇ ಚಹಾ ತಯಾರಿಸಿಕೊಳ್ಳ ಬಹುದಲ್ಲ’. ಗುರುಗಳು ನಸುನಕ್ಕು ಹೇಳಿ ದರು, “ನಾನೀಗ ಇದ್ದೇನಲ್ಲ!’ ಬದುಕಿನ ಅತ್ಯಂತ ಪ್ರಾಮುಖ್ಯವಾದ ತಣ್ತೀ ಏನು? ನಾವು ಏನು ಮಾಡ ಬೇಕೋ, ನಮ್ಮಿಂದ ಏನು ಸಾಧ್ಯವೋ ಅದನ್ನು ಮಾಡು ವುದು. ಪ್ರತೀ ದಿನ ಕೆಲಸ ಕಾರ್ಯಗಳಲ್ಲಿ ಲವಲವಿಕೆ, ನನ್ನಿಂದ ಇದು ಸಾಧ್ಯ ಎಂಬ ಆಶಾಭಾವ, ಆತ್ಮವಿಶ್ವಾಸ ಹೊಂದಿ ತೊಡಗಿಸಿ ಕೊಳ್ಳುವುದು. ನಮ್ಮ ಆಲೋಚನೆಯು “ನಾನು ಇದನ್ನು ಮಾಡಬೇಕು’ ಮತ್ತು “ನಾನು ಇದನ್ನು ಮಾಡಬಾರದು’ ಎಂಬುದ ಕ್ಕಿಂತ “ನಾನು ಇದನ್ನು ಮಾಡಬಲ್ಲೆ’ ಮತ್ತು “ನಾನು ಇದನ್ನು ಮಾಡಲಾರೆ’ ಎಂಬ ಹಾಗಿ ದ್ದರೆ ಚೆನ್ನ. ಅದು ಸಕಾರಾತ್ಮಕವಾಗಿರುತ್ತದೆ ಮತ್ತು ಪ್ರಾಮಾಣಿಕವಾಗಿರುತ್ತದೆ.
Related Articles
Advertisement
ನಿಜಕ್ಕಾದರೆ ಈ ಜಗತ್ತಿನಲ್ಲಿ ನಮಗೆ ಸೇರಿದವರು ಯಾರೂ ಇಲ್ಲ. ನಾವು -ನೀವು ಈ ಭೂಮಿಯಲ್ಲಿ ಜನ್ಮ ತಾಳಿದ ಹಾಗೆ ಅವರೂ ಬಂದವರು. ಮದುವೆಯಾದ ಬಳಿಕ ಈಕೆ ನನ್ನ ಹೆಂಡತಿ ಎನ್ನುತ್ತೇವೆ. ಅದು ನಾವೇ ಸೃಷ್ಟಿಸಿಕೊಂಡ ಸಂಬಂಧ. ಆ ಬಳಿಕ ಆ ವ್ಯಕ್ತಿಯಲ್ಲಿ ಪ್ರೀತಿ, ಮೋಹ ಬೆಳೆಯುತ್ತದೆ. ಸಂಸಾರದಲ್ಲಿ ವಿರಸ ಮೂಡಿದಾಗ ಪ್ರೀತಿ, ಮೋಹಗಳ ಸ್ಥಾನವನ್ನು ಹತಾಶೆ, ದ್ವೇಷ ಆಕ್ರಮಿಸಿ ಕೊಳ್ಳುತ್ತವೆ. ಇದು ಮನಸ್ಸಿನ ಭಾವನೆಗಳ ಆಟ.
ಕೆಲವೇ ಕೆಲವರನ್ನು, ಕೆಲವು ವಸ್ತುಗಳನ್ನು ನಮ್ಮವರು, ನಮ್ಮದು ಎಂದುಕೊಳ್ಳುವುದು ಇನ್ನುಳಿದವರು, ಇನ್ನುಳಿದವುಗಳ ಬಗ್ಗೆ ಪಕ್ಷಪಾತದ ಭಾವನೆಗಳು, ಆಲೋಚನೆಗಳು ರೂಪುಗೊಳ್ಳುವಂತೆ ಮಾಡುತ್ತವೆ. “ನಾನು ಇದನ್ನು ಮಾಡುತ್ತೇನೆ’ – “ಇದನ್ನು ಮಾಡುವುದಿಲ್ಲ’ ಎಂಬುದು ಹುಟ್ಟಿ ಕೊಳ್ಳುವುದು ಆಗಲೇ. ಇಂತಹ ಬೇಲಿಗಳನ್ನು ಹಾಕಿಕೊಂಡಾಗ ನಮ್ಮ ವ್ಯಕ್ತಿತ್ವ ಪೂರ್ಣ ಪ್ರಮಾಣದಲ್ಲಿ ಅರಳುವುದಿಲ್ಲ, ನಾವು ನಮ್ಮ ಪೂರ್ಣ ಸಾಮರ್ಥ್ಯದಲ್ಲಿ ಈ ಜೀವನದಲ್ಲಿ ತೊಡಗಿಕೊಳ್ಳುವುದಿಲ್ಲ.
“ವಸುಧೈವ ಕುಟುಂಬಕಮ್’ ಎಂಬೊಂದು ಆರ್ಷವಾಕ್ಯವಿದೆಯಲ್ಲ! ಅದರಂತೆ ನಡೆಯುವುದು ಶ್ರೇಷ್ಠವಾದ ಮಾರ್ಗ.
( ಸಾರ ಸಂಗ್ರಹ)
ಲೇಖನಗಳನ್ನು ಈ ವಿಳಾಸಕ್ಕೆ ಕಳುಹಿಸಿಬರಹಗಾರರು ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ಲೇಖನಗಳನ್ನು ಛಿಛಜಿಠಿಃuಛಚyಚvಚnಜಿ.cಟಞಗೆ ಕಳುಹಿಸಬಹುದು.
ಸೂಕ್ತವಾದವುಗಳನ್ನು ಪ್ರಕಟಿಸಲಾಗುವುದು.