Advertisement
ಬಿಎಸ್ಪಿ ಖಾತೆಯಲ್ಲಿ 670 ಕೋ.ರೂ. ಫೆಬ್ರವರಿ ತಿಂಗಳಲ್ಲಿ ಪಕ್ಷದ ಖರ್ಚು ವೆಚ್ಚಗಳನ್ನು ಬಿಎಸ್ಪಿ ಚುನಾವಣ ಆಯೋಗಕ್ಕೆ ಸಲ್ಲಿಸಿತ್ತು. ಇದರ ಪ್ರಕಾರ 670 ಕೋಟಿ ರೂ. ಪಕ್ಷದ ಹೆಸರಿನಲ್ಲಿ 8 ಪ್ರಮುಖ ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸಲಾಗಿದೆ. ಜತೆಗೆ 95.54 ಲಕ್ಷ ರೂ. ಕೈಯಲ್ಲಿದೆ ಎಂದು ಹೇಳಿದೆ. ಹಾಗೆಯೇ ಮುಲಾಯಂ ಸಿಂಗ್ ಯಾದವ್ ಅವರ ನೇತೃತ್ವದ ಸಮಾಜವಾದಿ ಪಕ್ಷ ದ್ವಿತೀಯ ಸ್ಥಾನದಲ್ಲಿದೆ. ಒಟ್ಟು 471 ಕೋಟಿ ರೂ. ಠೇವಣಿಯನ್ನು ಪಕ್ಷ ಹೊಂದಿದೆ. ಇತ್ತೀಚೆಗೆ ನಡೆದ 4 ರಾಜ್ಯಗಳ ಚುನಾವಣೆ ಬಳಿಕ ಪಾರ್ಟಿ ಫಂಡ್‌ನಲ್ಲಿ 11 ಕೋಟಿ ರೂ. ಇಳಿಕೆಯಾಗಿದೆ.
ಕರ್ನಾಟಕ ವಿಧಾನಸಭೆ ಚುನಾವಣೆಯ ವೇಳೆ ಕಾಂಗ್ರೆಸ್ 196 ಕೋ.ರೂ. ಬ್ಯಾಂಕ್ ಬ್ಯಾಲೆನ್ಸ್ ಹೊಂದಿತ್ತು. ಕೆಲವು ತಿಂಗಳ ಹಿಂದೆ ಜರಗಿದ 4 ರಾಜ್ಯಗಳ ಚುನಾವಣೆಯ ಲೆಕ್ಕಾಚಾರವನ್ನು ಪಕ್ಷ ಇನ್ನಷ್ಟೇ ಸಲ್ಲಿಸಬೇಕಿದೆ. 5ನೇ ಸ್ಥಾನದಲ್ಲಿ ಬಿಜೆಪಿ
ಕೇಂದ್ರದ ಆಡಳಿತಾರೂಢ ಬಿಜೆಪಿ ಕೇವಲ 83 ಕೋಟಿ ರೂ.ಗಳನ್ನು ಹೊಂದಿದೆ. ಆಶ್ಚರ್ಯ ಎಂದರೆ ಆಂಧ್ರ ಪ್ರದೇಶದ ಚಂದ್ರ ಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಾರ್ಟಿಯ ಬ್ಯಾಂಕ್ ಠೇವಣಿ 107 ಕೋಟಿ ರೂ.ಗಳಿವೆ. ಬಿಜೆಪಿಗೆ ಅತೀ ಹೆಚ್ಚಿನ ಆದಾಯ ಎಲೆಕ್ಟೋರಲ್ ಬಾಂಡ್ ಮೂಲಕ ಖಾತೆಗೆ ಜಮೆಯಾಗುತ್ತಿದೆ.
Related Articles
ರಾಜಕೀಯ ಪಕ್ಷಗಳ ಐಟಿಆರ್ ಮಾಹಿತಿಗಳ ಪ್ರಕಾರ ಬಿಜೆಪಿ ಆದಾಯ 2016-17ರ 1,034 ಕೋಟಿ ರೂ. ಮತ್ತು 2017-18ರಲ್ಲಿ 1,027 ಕೋಟಿ ರೂ.ಗಳನ್ನು ದೇಣಿಗೆ ರೂಪದಲ್ಲಿ ಸಂಗ್ರಹಿಸಿದೆ. ಇದೇ ಅವಧಿಯಲ್ಲಿ ಬಿಎಸ್‌ಪಿ ಆದಾಯ 174 ಕೋಟಿಯಿಂದ 52 ಕೋಟಿ ರೂ.ಗೆ ಇಳಿದಿದೆ. ಕಾಂಗ್ರೆಸ್ 2016-17ರ ಅವಧಿಯಲ್ಲಿ 225 ಕೋಟಿ ರೂ.ಗಳಿಸಿತ್ತು. ಆದರೆ ಈ ಮಾಹಿತಿಯನ್ನು ಪಕ್ಷಗಳು ಚುನಾವಣ ಆಯೋಗಕ್ಕೆ ಸಲ್ಲಿಸಿಲ್ಲ ಎಂದು ಹೇಳಲಾಗುತ್ತಿದೆ. ಸಿಪಿಎಂ ತನ್ನ ಬ್ಯಾಂಕ್ ಬ್ಯಾಲೆನ್ಸ್‌ನಲ್ಲಿ ಸರಾಸರಿಯನ್ನು ಕಾಯ್ದುಕೊಂಡಿದೆ. 100 ಕೋಟಿ ರೂ.ಗಳನ್ನು ಅದು ಕಾಯ್ದುಕೊಳ್ಳುತ್ತಾ ಬಂದಿದೆ. ರಾಜಕೀಯ ಪಕ್ಷಗಳಿಗೆ ಶೇ.87ರಷ್ಟು ಆದಾಯ ದೇಣಿಗೆಯಿಂದ ಬರುತ್ತದೆ.
Advertisement
ಕಾಂಗ್ರೆಸ್‌ಗಿಂತ ಬಿಜೆಪಿ 5 ಪಟ್ಟು ಶ್ರೀಮಂತ 2017-18ರ ಅವಧಿಯಲ್ಲಿ 6 ಪ್ರಮುಖ ಪಕ್ಷಗಳ ಆದಾಯದಲ್ಲಿ ಭಾರೀ ಏರಿಳಿತ ಕಂಡು ಬಂದಿದೆ. 1,293.051 ಕೋಟಿ. ರೂ. ಬಿಜೆಪಿ, ಕಾಂಗ್ರೆಸ್, ಬಿಎಸ್ಪಿ, ಎನ್‌ಸಿಪಿ, ತೃಣಮೂಲ ಕಾಂಗ್ರೆಸ್ ಮತ್ತು ಸಿಪಿಐ ಪಕ್ಷಗಳ ಖಾತೆ ಸೇರಿದೆ. ಆದರೆ ಬಿಜೆಪಿ ಆದಾಯ ಕಾಂಗ್ರೆಸ್‌ಗಿಂತ 5 ಪಟ್ಟು ಹೆಚ್ಚಿದೆ.