Advertisement

ಲಾಕ್ ಡೌನ್ ಸಮಯದಲ್ಲಿ ಜನರು ಈ ಅಪ್ಲಿಕೇಶನ್ ಗಳತ್ತ ತಿರುಗಿಯೂ ನೋಡಲಿಲ್ಲ!

05:05 PM Jun 16, 2020 | Mithun PG |

ದೇಶದಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದ ಸಂದರ್ಭದಲ್ಲಿಯೇ ಪ್ರಧಾನಿ ಮೋದಿ ಮಾರ್ಚ್ 24ರಂದು ಸಂಪೂರ್ಣ ಲಾಕ್ ಡೌನ್ ಘೋಷಿಸಿದ್ದರು. ನಂತರ ಮೇ 31 ರವರೆಗೆ ವಿಸ್ತರಿಸಲ್ಪಟ್ಟು, ಮುಂದಿನ ದಿನಗಳಲ್ಲಿ ಕೊಂಚ ಸಡಿಲಿಸಲಾಗಿತ್ತು. ಕೋವಿಡ್ ದೇಶದ ಜೀವನದ ವೇಗವನ್ನು ಸ್ಥಗಿತಗೊಳಿಸಿತು. ಮಾತ್ರವಲ್ಲದೆ ತಂತ್ರಜ್ಞಾನ ಕ್ಷೇತ್ರದ ಮೇಲೂ ಗಂಭೀರ ಪರಿಣಾಮ ಬೀರಿತ್ತು. ಲೂಡೋ ಕಿಂಗ್, ಆರೋಗ್ಯ ಸೇತು ಮುಂತಾದ ಅಪ್ಲಿಕೇಶನ್ ಗಳು ಅತೀ ಹೆಚ್ಚು ಜನಪ್ರಿಯ ಪಡೆದರೆ, ಇನ್ನೂ ಹಲವು ಆ್ಯಪ್ ಗಳು ಈ ಸಂದರ್ಭದಲ್ಲಿ ನಿಷ್ಪ್ರಯೋಜಕವಾಗಿ ಮಕಾಡೆ ಮಲಗಿದ್ದವು. ಅಂತಹ ಆ್ಯಪ್ ಗಳ ಪರಿಚಯ ಇಲ್ಲಿದೆ.

Advertisement

ಲಾಕ್ ಡೌನ್ ಸಮಯದಲ್ಲಿ  ಹೋಟೆಲ್ ಬುಕಿಂಗ್, ಫ್ಲೈಟ್ ಬುಕಿಂಗ್‌ ನಿಂದ  ಹಿಡಿದು ವಿವಿಧ ಟ್ರಾವೆಲ್ ಅಪ್ಲಿಕೇಶನ್‌ ಗಳಿಗೆ ಕೆಲಸವೇ ಇರಲಿಲ್ಲ.  ಮಾತ್ರವಲ್ಲದೆ  ಚಲನಚಿತ್ರ ಟಿಕೆಟ್ ಕಾಯ್ದಿರಿಸುವಿಕೆಯಿಂದ ಹಿಡಿದು ಗೃಹೋಪಯೋಗಿ ವಸ್ತುಗಳು, ಪುಸ್ತಕಗಳು ಅಥವಾ ಫ್ಯಾಷನ್ ಪರಿಕರಗಳಿಗಾಗಿ ಇದ್ದ ವಿವಿಧ ಇ-ಕಾಮರ್ಸ್ ಸೈಟ್‌ ಗಳೆಲ್ಲವೂ ಅಪ್ರಸ್ತುತವಾಗಿದ್ದವು.

ಸರಳವಾಗಿ ಹೇಳುವುದಾದರೆ, ನಮ್ಮ ದೈನಂದಿನ ಜೀವನದಲ್ಲಿ ನಾವು ಬಳಸುತ್ತಿದ್ದ ಕೆಲವು ಪ್ರಮುಖ ಅಪ್ಲಿಕೇಶನ್‌ ಗಳು ರಾತ್ರೋರಾತ್ರಿ ಬಳಕೆಯಲ್ಲಿರಿಲಿಲ್ಲ. ಆದರೆ ಕೆಲವು ಆ್ಯಪ್ ಗಳು  ಸ್ವಲ್ಪ ವಿಭಿನ್ನವಾದ ಜಾಣ್ಮೆ ಪ್ರದರ್ಶಿಸಿ  ತಮ್ಮ ಇರುವಿಕೆಯನ್ನು ಕಂಡುಕೊಂಡವು. ಪ್ರಮುಖವಾಗಿ ಸ್ವಿಗ್ಗಿ ಆಹಾರದ ಜೊತೆಗೆ ದಿನಸಿ ವಸ್ತುಗಳನ್ನು ತಲುಪಿಸಲು ಪ್ರಾರಂಭಿಸಿತು. ಝೋಮ್ಯಾಟೋ ಕೆಲವಡೆ ಮದ್ಯ ಸರಬರಾಜು ಮಾಡಲು ಮುಂದಾಗಿತ್ತು. ಆದರೆ ಕೆಲ ಸಮಯದವರೆಗೆ ಈ ಅಪ್ಲಿಕೇಶನ್‌ಗಳ ಬಳಕೆ ಗಮನಾರ್ಹವಾಗಿ ಕಡಿಮೆಯಾಯಿತು ಎಂಬುದಂತು ಸುಳ್ಳಲ್ಲ.

ಕೋವಿಡ್ ಕಾಲಕ್ಕಿಂತ ಮೊದಲು ಭಾರತದಲ್ಲಿ ಸಂಚಾರ ವ್ಯವಸ್ಥೆ ಎಂಬುದು ಅಸ್ತವ್ಯಸ್ತವಾಗಿದ್ದವು. ಪದೇ ಪದೇ ಟ್ರಾಫಿಕ್ ಜಾಮ್, ಅಪಘಾತಗಳು ಮುಂತಾದವು ಸಂಭವಿಸುತ್ತಿತ್ತು.  ಕಟ್ಟುನಿಟ್ಟಾದ ಮಾನದಂಡಗಳಿಂದ  ಓಲಾ ಮತ್ತು ಉಬರ್‌, ಬೌನ್ಸ್ ನಂತಹ ಸೇವೆಗಳು  ನಗಣ್ಯವಾಗಿ ಅದರ ಅಪ್ಲಿಕೇಶನ್‌ಗಳು ಕೂಡ ನಿಷ್ಪ್ರಯೋಜಕವಾಗಿದ್ದವು.  ಸರ್ಕಾರವು ಲಾಕ್ ಡೌನ್ ಮಾನದಂಡಗಳನ್ನು ಕ್ರಮೇಣ ಸಡಿಲಿಸುವುದರೊಂದಿಗೆ, ಕ್ಯಾಬ್ ಸೇವೆಗಳು ಈಗ ದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ.

ಮ್ಯಾಪ್ ಗಳು: ಲಾಕ್ ಡೌನ್ ಸಮಯದಲ್ಲಿ ಗೂಗಲ್ ಮ್ಯಾಪ್, ಆ್ಯಪಲ್ ಮ್ಯಾಪ್ ಬಳಸುವವರ ಸಂಖ್ಯೆ ಕೂಡ ಇಳಿಕೆ ಕಂಡಿತ್ತು. ಕೂಡಲೇ ಎಚ್ಚೆತ್ತುಕೊಂಡ ಗೂಗಲ್ ಮ್ಯಾಪ್, ಕೋವಿಡ್ ಸೋಂಕಿತರಿರುವ ಪ್ರದೇಶಗಳನ್ನು ತಿಳಿಸುವ ಮತ್ತು ಅತೀ ಹೆಚ್ಚು ಜನ ದಟ್ಟಣೆ ಇರುವ ಪ್ರದೇಶಗಳನ್ನು ತಿಳಿಸುವ  ಫೀಚರ್ ಅನ್ನು ತಂದು ತನ್ನ ಅಸ್ತಿತ್ವ ಉಳಿಸಿಕೊಂಡಿತು.

Advertisement

ಇ-ಕಾಮರ್ಸ್: ಅಮೆಜಾನ್ , ಫ್ಲಿಫ್ ಕಾರ್ಟ್, ಬಿಗ್ ಬಾಸ್ಕೆಟ್ ಮುಂತಾದ ಇ ಕಾಮರ್ಸ್ ಆ್ಯಪ್/ ಸೈಟ್ ಗಳು ಲಾಕ್ ಡೌನ್ ಸಮಯದಲ್ಲಿ ಅತೀ ಕಡಿಮೆ ಬಳಕೆದಾರರನ್ನು ಕಂಡಿತ್ತು,  ಕೆಲಕಾಲ ಇದರ ಸರ್ವಿಸ್ ಗಳು ಸ್ಥಗಿತಗೊಂಡಿತ್ತು. ಅದಾಗ್ಯೂ ಲಾಕ್ ಡೌನ್ ನೀತಿಗಳು ಸಡಿಲಗೊಂಡಾಗ ದಿನಸಿ ಸೇರಿದಂತೆ ಇತರ ವಸ್ತುಗಳನ್ನು ಗ್ರೀನ್  ಮತ್ತು ಆರೆಂಜ್ ವಲಯಗಳಿಗೆ ಸರಬರಾಜು ಮಾಡಲು ತೊಡಗಿದವು.

ಟ್ರಾವೆಲ್ ಬುಕಿಂಗ್: ಲಾಕ್ ಡೌನ್ ಟೂರಿಸಂ ಕ್ಷೇತ್ರಗಳ ಮೇಲೂ ಗಂಭೀರ ಪರಿಣಾಮ ಬೀರಿದವು. ಯಾತ್ರ, ಮೇಕ್ ಮೈ ಟ್ರಿಪ್ ಮುಂತಾದ ಅಪ್ಲಿಕೇಶನ್ ಗಳನ್ನು ಬಳಸುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾದವು.

ಮನರಂಜನಾ ಕ್ಷೇತ್ರ: ಕೋವಿಡ್ ಆರಂಭದ ಸಮಯದಲ್ಲಿ ಸಿನಿಮಾಗಳ ಚಿತ್ರೀಕರಣವು ಸ್ಥಗಿತಗೊಂಡಿತ್ತು. ಮಾತ್ರವಲ್ಲದೆ ಚಿತ್ರಪ್ರದರ್ಶನಗಳು ಸಂಪೂರ್ಣ ಶಟ್ ಡೌನ್ ಆಗಿದ್ದವು. ಈ ಸಮಯದಲ್ಲಿ ಬುಕ್ ಮೈ ಶೋ ಅಪ್ಲಿಕೇಶನ್ ಬಳಕೆದಾರರಿಲ್ಲದೆ  ಮೂಲೆಗುಂಪಾಗಿತ್ತು. ಇವುಗಳು ಮಾತ್ರವಲ್ಲದೆ, ಮಿಂತ್ರ, ಝೋಮ್ಯಾಟೋ, ಸ್ವಿಗ್ಗಿ, ಡೋಮಿನೋಸ್ ಅಪ್ಲಿಕೇಷನ್ ಗಳು ಕೂಡ ಬಳಕೆದಾರರಿಲ್ಲದೆ ನಷ್ಟ ಅನುಭವಿಸಿದ್ದವು.

  • ಮಿಥುನ್ ಮೊಗೇರ
Advertisement

Udayavani is now on Telegram. Click here to join our channel and stay updated with the latest news.

Next