Advertisement

ಬ್ರೆಕ್ಸಿಟ್‌ ಆರಂಭಿಸುವ ನಿರ್ಣಾಯಕ ಮಸೂದೆಗೆ ಬ್ರಿಟನ್‌ ಸಂಸತ್ತು ಅಸ್ತು

03:22 PM Feb 09, 2017 | Team Udayavani |

ಲಂಡನ್‌ : ಐರೋಪ್ಯ ಒಕ್ಕೂಟವನ್ನು ತ್ಯಜಿಸುವ ಬಗ್ಗೆ ಮಾರ್ಚ್‌ 31ರೊಳಗೆ ನಿರ್ಣಾಯಕ ಮಾತುಕತೆಗಳನ್ನು ಆರಂಭಿಸುವ ನಿಟ್ಟಿನಲ್ಲಿ ಪ್ರಧಾನಿ ತೆರೆಸಾ ಮೇ ಅವರಿಗೆ ಅಧಿಕಾರವನ್ನು ನೀಡುವ ಮಸೂದೆಗೆ ಬ್ರಿಟಿಷ್‌ ಸಂಸತ್ತಿನಲ್ಲಿ ಇಂದು ಅಭೂತಪೂರ್ವ ಬೆಂಬಲ ದೊರಕಿತು.

Advertisement

ಐರೋಪ್ಯ ಒಕ್ಕೂಟ (ಅಧಿಸೂಚನೆ ಹಿಂಪಡೆಯುವಿಕೆ) ಮಸೂದೆಗೆ, ಅಂತಿಮ ಚರ್ಚೆಯ ಬಳಿಕ,  ಹೌಸ್‌ ಆಫ್ ಕಾಮನ್ಸ್‌ನಲ್ಲಿ  494 – 122 ಮತಗಳ ಅಂತರದಲ್ಲಿ ಅನುಮೋದನೆ ದೊರಕಿತು. 

2019ರ ಒಳಗೆ ಐರೋಪ್ಯ ಒಕ್ಕೂಟದ ಸದಸ್ಯನಲ್ಲದ ಬ್ರಿಟನ್‌ನ ಹೊಸ ವಹಿವಾಟಿಗಾಗಿ ಎರಡು ವರ್ಷಗಳ ಮಾತುಕತೆಯನ್ನು  ಲಿಸ್‌ಬನ್‌ ಒಪ್ಪಂದದ 50 ನೇ ವಿಧಿಯನ್ವಯ ಆರಂಭಿಸಲು ಪ್ರಧಾನಿ ಮೇ ಅವರಿಗೆ ಈ ಮಸೂದೆಯು ಪೂರ್ಣಾಧಿಕಾರ ನೀಡುತ್ತದೆ. 

ಈಗ ಈ ಮಸೂದೆಯು ಕಾಮನ್ಸ್‌ನಲ್ಲಿ ಅಂಗೀಕಾರವಾಗಿರುವುದರಿಂದ ಇದನ್ನು ಇನ್ನು ಹೌಸ್‌ ಆಫ್ ಲಾರ್ಡ್ಸ್‌ (ಮೇಲ್ಮನೆ) ಚರ್ಚಿಸಲಿದೆ. ಇದೇ ಫೆ.20ರಂದ ಬ್ರಿಟಿಷ್‌ ಮೇಲ್ಮನೆಯ ಕಲಾಪಗಳು ಆರಂಭಗೊಳ್ಳಲಿದ್ದು ಅದು ಈ ಮಸೂದೆಗೆ ಅಂತಿಮ ಒಪ್ಪಿಗೆ ನೀಡಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next