Advertisement
ಇವು ಬಿಬಿಎಂಪಿ 2017-18 ನೇ ಸಾಲಿನ ಬಜೆಟ್‌ನ ಪ್ರಮುಖಾಂಶಗಳು. ಬಿಬಿಎಂಪಿ ಕೇಂದ್ರ ಕಚೇರಿಯ ಕೆಂಪೇಗೌಡ ಪೌರ ಸಭಾಂಗಣದಲ್ಲಿ ಮೇಯರ್ ಜಿ.ಪದ್ಮಾವತಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ಗುಣಶೇಖರ್, ಪಾಲಿಕೆಯ 50ನೇ ಹಾಗೂ ತಮ್ಮ 2ನೇ ಬಜೆಟ್ ಮಂಡಿಸಿದರು. 9241 ಕೋಟಿ ರೂ.ಮೊತ್ತದ ಬಜೆಟ್ ಮಂಡಿಸಿರುವ ಅವರು, ಸಾಲದ ಸಹವಾಸಕ್ಕೆ ಹೋಗಿಲ್ಲ.
Related Articles
Advertisement
ನಾಗರಿಕರ ಮೇಲೆ ಹೊಸ ತೆರಿಗೆಯ ಹೊರೆ ಹೇರಿಲ್ಲ. ಆರ್ಥಿಕ ಶಿಸ್ತಿನ ಮೂಲಕ ಸಂಪನ್ಮೂಲ ಕ್ರೋಡೀಕರಣದ ಕಡೆ ಗಮನ ಹರಿಸಲಾಗಿದ್ದು, ಯಾವುದೇ ಬಹೃತ್ ಯೋಜನೆಗಳ ಘೋಷಣೆ ಇಲ್ಲದಿದ್ದರೂ ಚಾಲ್ತಿಯಲ್ಲಿರುವ ಕಾಮಗಾರಿಗಳಿಗೆ ಹಣ ಹೊಂದಿಸಿರುವುದು ಗುಣಶೇಖರ್ ಅವರ ಜಾಣತನ.
ನಕ್ಷೆ ಉಲ್ಲಂ ಸಿದರೆ ನೆಲಮಹಡಿ ಪಾಲಿಕೆ ವಶಕ್ಕೆ: ನಕ್ಷೆ ಮಂಜೂರಾತಿ ಉಲ್ಲಂ ಸಿ ನಿರ್ಮಿಸುವ ಅಕ್ರಮ ಕಟ್ಟಡಗಳ ನಿಯಂತ್ರಣಕ್ಕೆ ಹೈದರಾಬಾದ್ ಮಾದರಿಯ ನಿಯಮ ಜಾರಿಗೊಳಿಸಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ನಾಲ್ಕು ಮತ್ತು ಅದಕ್ಕಿಂತ ಹೆಚ್ಚು ಅಂತಸ್ತಿನ ವಸತಿ ಅಥವಾ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆದ ನಂತರ 100 ರೂ. ಛಾಪಾ ಕಾಗದಲ್ಲಿ ನೆಲಮಹಡಿಯನ್ನು ಪಾಲಿಕೆಗೆ ನೋಂದಣಿ ಮಾಡಿಕೊಡಬೇಕು. ಕಟ್ಟಡ ನಿರ್ಮಾಣ ಪೂರ್ಣಗೊಂಡ ಬಳಿಕ ಸ್ವಾಧೀನಪತ್ರ ಪಡೆಯುವ ಸಂದರ್ಭದಲ್ಲಿ ನಕ್ಷೆ ಅನುಸಾರ ಕಟ್ಟಡ ನಿರ್ಮಾಣವಾಗದಿದ್ದರೆ ಆ ಜಾಗ ಪಾಲಿಕೆ ವಶವಾಗಲಿದೆ.
ಬಜೆಟ್ ಪಾಲನೆಗೆ ಪೌರವಾಹಿನಿ: ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಣಯಗಳ ಜಾರಿ, ನಿರ್ಣಯಗಳನ್ನು ಸರ್ಕಾರ ಅಂಗೀಕರಿಸಿರುವ ಅಥವಾ ತಿರಸ್ಕೃತಗೊಳಿಸಿರುವ ಬಗ್ಗೆ ಮಾಹಿತಿ ಕ್ರೋಢಿಕರಿಸುವುದು, ಸಭೆಯ ನಿರ್ಣಯಗಳ ಜಾರಿ ಪರಿಶೀಲನೆ ಮತ್ತು ಬಜೆಟ್ ಪತ್ರದಲ್ಲಿನ ಘೋಷಣೆಗಳ ಕುರಿತು ತೆಗೆದುಕೊಂಡ ಕ್ರಮ ಮತ್ತು ಪ್ರಗತಿ ಬಗ್ಗೆ ವಿವರಗಳನ್ನು ಸಂಗ್ರಹಿಸಿ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆಯ ಮುಂದೆ ಮಂಡಿಸಲು “ಪೌರ ವಾಹಿನಿ ತಂಡ’ ರಚಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಜತೆಗೆ ನಗರಕ್ಕೆ ಪ್ರತ್ಯೇಕ ಕಾಯಿದೆ ರಚನೆ, ಸಾಮಾಜಿಕ ಹೊಣೆಗಾರಿಕೆ ಕೋಶ ಸ್ಥಾಪನೆ ಮಾಡುವ ಬಗ್ಗೆಯೂ ಪ್ರಸ್ತಾಪ ಮಾಡಲಾಗಿದೆ.
ಸಾರ್ವಜನಿಕರು ದೈನಂದಿನ ಸೇವೆಗಳಿಗೆ ಪಾಲಿಕೆಗೆ ಅಲೆದಾಡುವುದು ತಪ್ಪಿಸಲು ಗಣಕೀಕೃತ ಇ-ಖಾತಾ ನೋಂದಣಿ, ಪಾಲಿಕೆಯಲ್ಲಿ ಹಾಲಿ ಅಸ್ತಿತ್ವದಲ್ಲಿರುವ ಕಡತ ಮತ್ತು ದಾಖಲೆಗಳನ್ನು ಸ್ಕ್ಯಾನಿಂಗ್ ಹಾಗೂ ಗಣಕೀಕರಣಗೊಳಿಸುವುದು, ಆನ್‌ಲೈನ್ ಕಟ್ಟಡ ನಕ್ಷೆ ಪರಿಶೀಲನೆ ಹಾಗೂ ಅನುಮೋದನೆ ಪದ್ಧತಿಯೊಂದಿಗೆ ಸಾರ್ವಜನಿಕ ಆರೋಗ್ಯ ನಿರ್ವಹಣಾ ವ್ಯವಸ್ಥೆಯಂತಹ ಆನ್‌ಲೈನ್ ಸೇವೆ ಜಾರಿ ಬಗ್ಗೆ ತಿಳಿಸಲಾಗಿದೆ.
ವಾಹನ ನಿಲುಗಡೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪಾರ್ಕಿಂಗ್ ನೀತಿ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಪಾಲಿಕೆಯ ಶಿಥಿಲಗೊಂಡ ಮಾರುಕಟ್ಟೆ ತೆರವುಗೊಳಿಸಿ ಬಹುಮಧಿಹಡಿ ಪಾರ್ಕಿಂಗ್ ಕಟ್ಟಡಗಳ ನಿರ್ಮಾಣ, ಜತೆಗೆ ಖಾಸಗಿಯವರು ಬಹುಮಹಡಿ ಪಾರ್ಕಿಂಗ್ ಕಟ್ಟಡ ನಿರ್ಮಿಸುವುದಾದರೆ ವಿಶೇಷ ವಿನಾಯಿತಿ ನೀಡುವ ಬಗ್ಗೆಯೂ ತಿಳಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಸಚಿವರಾದ ರೋಷನ್‌ಬೇಗ್ ಹಾಗೂ ರಾಮಲಿಂಗಾರೆಡ್ಡಿ ಪ್ರತಿನಿಧಿಸುವ ಶಿವಾಜಿನಗರ, ಸರ್ವಜ್ಞನಗರ, ಬಿಟಿಎಂ ಲೇ ಔಟ್‌ನಲ್ಲಿ ಮೂರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವುದಾಗಿ ಘೋಷಿಸಲಾಗಿದೆ. ಅದೇ ರೀತಿ ಇಪ್ಪತ್ತು ವಿಧಾನಸಭೆ ಕ್ಷೇತ್ರಗಳಲ್ಲಿ ಡಯಾಲಿಸಿಸ್ ಕೇಂದ್ರ ಸ್ಥಾಪಿಸುವುದಾಗಿ ಪ್ರಕಟಿಸಲಾಗಿದೆ.
* ಒಟ್ಟು ಬಜೆಟ್ ಗಾತ್ರ 9,241 ಕೋಟಿ ರೂ.
* ಸ್ವಂತಮೂಲಗಳಿಂದ ಆದಾಯ ನಿರೀಕ್ಷೆ 4,997 ಕೋಟಿ ರೂ.
ವಾಸ್ತವ, ಅಭಿವೃದ್ಧಿಗೆ ಪೂರಕ ಬಜೆಟ್: ಗುಣಶೇಖರ್ಬೆಂಗಳೂರು: ಅತ್ಯಂತ ವಾಸ್ತವ ಹಾಗೂ ಅಭಿವೃದ್ಧಿಗೆ ಪೂರಕವಾದ ಬಜೆಟ್ ಮಂಡಿಸಲಾಗಿದೆ ಎಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ. ಗುಣಶೇಖರ್ ತಿಳಿಸಿದ್ದಾರೆ. ಸರ್ಕಾರದ ಅನುದಾನ ಮತ್ತು ಬಿಬಿಎಂಪಿ ವರಮಾನವನ್ನು ಪರಿಗಣಿಸಿ, ಸಮತೋಲನ ಬಜೆಟ್ ಮಂಡಿಸಲಾಗಿದೆ. ಇದರಲ್ಲಿ ಜನಪರ ಕಾರ್ಯಕ್ರಮಗಳಿಗೆ ಆದ್ಯತೆ ಕೊಡಲಾಗಿದೆ ಎಂದು ಹೇಳಿದರು. “ಪ್ರತಿಪಕ್ಷದ ನಾಯಕರು ವಿರೋಧಿಸಲೇಬೇಕು ಎಂಬ ಉದ್ದೇಶದಿಂದ ಬಜೆಟ್ ವಿರೋಧಿಸಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಿಲ್ಲ. ಬಜೆಟ್ ಮಂಡಿಸುವ ಮುನ್ನ ಪ್ರತಿಪಕ್ಷಗಳ ಸದಸ್ಯರನ್ನೂ ಒಳಗೊಂಡು ಎಲ್ಲರ ಸಲಹೆ ಪಡೆಯಲಾಗಿದೆ,” ಎಂದರು. ಬಜೆಟ್ ಕಾರ್ಯಕ್ರಮಗಳಿಗೆ ತಿಂಗಳಲ್ಲಿ ಅನುಮೋದನೆ: ಪಾಲಿಕೆ ಆಯುಕ್ತ
ಬೆಂಗಳೂರು: ಬಜೆಟ್‌ನಲ್ಲಿ ಘೋಷಣೆಯಾದ ಕಾರ್ಯಕ್ರಮಗಳಿಗೆ ಒಂದು ತಿಂಗಳ ಒಳಗಾಗಿ ಸರ್ಕಾರದಿಂದ ಅನುಮೋದನೆ ಪಡೆಯುವುದಾಗಿ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ. ಬಜೆಟ್‌ನಲ್ಲಿ ಹೇಳಿರುವ ಬಹುತೇಕ ಕಾರ್ಯಕ್ರಮಗಳ ತ್ವರಿತ ಅನುಷ್ಠಾನಕ್ಕೆ ಪಾಲಿಕೆ ಕ್ರಮ ಕೈಗೊಳ್ಳಲಿದೆ. ತಿಂಗಳಲ್ಲಿ ಬಜೆಟ್‌ಗೆ ಅನುಮೋದನೆ ಪಡೆಯಲಾಗುವುದು. ತದನಂತರ ಹಂತ ಹಂತವಾಗಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗುವುದು. ಈ ಸಾಲಿನ ಬಜೆಟ್ ಯೋಜನೆಗಳನ್ನು ಪ್ರಸಕ್ತ ವರ್ಷದಲ್ಲೇ ಜಾರಿಗೆ ತರಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪ್ರಮುಖಾಂಶ
1.ಹಳೆಯ ವಾರ್ಡ್‌ಗೆ ಎರಡು ಕೋಟಿ ರೂ., ಹೊಸ ವಾರ್ಡ್‌ಗೆ 3 ಕೋಟಿ ರೂ. ಅನುದಾನ
2.ಮಹಿಳಾ ವಾರ್ಡ್‌ಗಳಿಗೆ ಹೆಚ್ಚುವರಿಯಾಗಿ ತಲಾ 20 ಲಕ್ಷ ರೂ. ಅನುದಾನ
3.ಬಡ ಹೃದ್ರೋಗಿಗಳ ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ನೆರವು
4.ಆರು ರೆಫರಲ್ ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ತಪಾಸಣೆಯ ಮ್ಯಾಮೋಗ್ರಾಂ ಯಂತ್ರ
5.ಪಾಲಿಕೆ ಶಾಲಾ -ಕಾಲೇಜು ವಿದ್ಯಾರ್ಥಿಗಳಿಗೆ ಆರೋಗ್ಯವಿಮೆ
6.ಸಾಲಕ್ಕೆ ಆಧಾರವಾಗಿ ಬ್ಯಾಂಕ್‌ನಲ್ಲಿ ಅಡಮಾನವಿಟ್ಟಿ ರುವ ಜಾನ್ಸನ್ ಮಾರುಕಟ್ಟೆ ಋಣಮುಕ್ತ
7.ಅನಧಿಕೃತವಾಗಿ ರಸ್ತೆ ಅಗೆಯುವ ವ್ಯಕ್ತಿಗೆ 10 ಲಕ್ಷ ರೂ., ಸಂಸ್ಥೆಗೆ 25 ಲಕ್ಷ ದಂಡ
8.ಕೇಂದ್ರ -ರಾಜ್ಯ ಸರ್ಕಾರದ ಕಟ್ಟಡಗಳಿಗೆ ಸೇವಾ ಶುಲ್ಕ ಶೇ.25 ರಿಂದ 50ಕ್ಕೆ ಏರಿಕೆ
9.ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ ಮಾದರಿಯಲ್ಲಿ ಪಾಲಿಕೆಯಿಂದಲೂ ವರ್ಷಕ್ಕೊಮ್ಮೆ ಫಲಪುಷ್ಪ ಪ್ರದರ್ಶನ
10.ಪಾಲಿಕೆಯ 32 ಪ್ರೌಢಶಾಲೆಗಳಲ್ಲಿ ಟೆಲಿ-ಎಜುಕೇಷನ್ ಮೂಲಕ ಕಲಿಕೆಯ ಗುಣಮಟ್ಟ ಸುಧಾರಣೆ
11.ಹೊಸ ವಲಯಗಳಲ್ಲಿ 210 ಉದ್ಯಾನಗಳ ಅಭಿವೃದ್ಧಿಗೆ 40 ಕೋಟಿ ರೂ.
12.ಪರಿಸರ ಸಂರಕ್ಷಣೆಗಾಗಿ ಡಾ.ಯಲ್ಲಪ್ಪ ರೆಡ್ಡಿ ವರದಿ ಜಾರಿಗೆ ಕ್ರಮ. ಹತ್ತು ಲಕ್ಷ ಸಸಿ ನೆಡುವ ಗುರಿ
13.ರೋಗಗ್ರಸ್ಥ ಮರಗಳ ತೆರವಿಗೆ ಸಮೀಕ್ಷೆಗೆ ನಾಲ್ಕು ಕೋಟಿ ರೂ.
14.ಐದು ಕೆರೆಗಳ ಬಳಿ ಹೊಸ ನರ್ಸರಿ ಆರಂಭಕ್ಕೆ ಐದು ಕೋಟಿ ರೂ.
15.ಎಂಟು ವಲಯಗಳಲ್ಲಿ ಪ್ರಾಣಿ ಚಿತಾಗಾರ, ಬೀದಿನಾಯಿ ಗಳ ಸಂತಾನ ನಿಯಂತ್ರಣಕ್ಕೆ ಮೂರು ಕೋಟಿ ರೂ.