Advertisement

ಇಲ್ಲೊಂದು ಉಲ್ಟಾ ಜಗತ್ತು!

04:47 PM Jun 10, 2020 | mahesh |

ನಮಗೆ ಒಂದರ ಮೇಲೊಂದರಂತೆ ಕಷ್ಟಗಳು ಬಂದರೇ ಆಕಾಶವೇ ತಲೆ ಮೇಲೆ ಬಿದ್ದವರಂತೆ ಮಾಡುತ್ತೇವೆ. ಆದರೆ ಇಲ್ಲಿ ಕೆಲವೊಂದು ವಿಶಿಷ್ಟ, ವಿಚಿತ್ರವೂ ಹಾಗೆಯೇ ಆಶ್ಚರ್ಯಕರವೂ ಆಗಿರುವಂತ ಮನೆಗಳಿವೆ. ಒಳ ಪ್ರವೇಶಿಸಿದರೆ ಆಕಾಶವೇ ತಲೆಮೇಲೆ ಬಿದ್ದಂತಾಗುತ್ತದೆ. ಏಕೆಂದರೆ ಈ ಮನೆಗಳ ಸೂರು ನೆಲಕ್ಕೆ ಸ್ಪರ್ಶಿಸಿದ್ದು ಮನೆಯ ತಳಪಾಯ ಆಕಾಶಕ್ಕೆ ಮುಖಮಾಡಿ, ಅಕ್ಷರಶಃ ತಲೆಕೆಳಗಾಗಿ ನಿರ್ಮಾಣವಾಗಿವೆ. ಈ ಮನೆಯನ್ನು ಪ್ರವೇಶಿಸಿದ ತಕ್ಷಣ ನಮ್ಮ ದೃಷ್ಟಿಕೋನವೇ ಬದಲಾದಂತೆ ಭಾಸವಾಗುತ್ತದೆ. ಮುಖ್ಯವಾಗಿ ಪ್ರವಾಸಿಗರನ್ನು ಆಕರ್ಷಿಸಲೆಂದೇ ಈ ಮನೆಗಳನ್ನು ಉಲ್ಟಾವಾಗಿ ನಿರ್ಮಿಸಲಾಗಿದ್ದು, ಜೀವನವನ್ನು ನಾವು ನೋಡುವ ರೀತಿ, ದೃಷ್ಟಿಕೋನ ಬದಲಾಗಲಿ ಎಂಬುದನ್ನು ಸಾರಿ ಹೇಳುವಂತಿವೆ.

Advertisement

ಇವುಗಳ ವಿಶೇಷ ಏನಂದರೆ ಹೊರಗಿನಿಂದ ನೋಡಲು ಮಾತ್ರ ತಿರುಗು-ಮುರಗು ಕಾಣದೇ ಸಂಪೂರ್ಣ ಮನೆಯಲ್ಲಿರುವ ವಸ್ತುಗಳೂ ಕೂಡ ಉಲ್ಟಾ ರೀತಿಯಲ್ಲಿರುತ್ತವೆ. ಮನೆಯು ನೆಲಕ್ಕೆ ಒರಗಿಕೊಂಡಿರುತ್ತವೆ. ಮನೆಯಲ್ಲಿರುವ ಬ್ಯಾಗ್‌, ಕಬೋರ್ಡ್‌ಗಳು, ಪುಸ್ತಕ, ಅಡುಗೆ ಮನೆಯಲ್ಲಿರುವ ಎಲ್ಲ ಪಾತ್ರೆಗಳು, ಊಟದ ಕೋಣೆ ಪ್ರವೇಶಿಸಿದರೆ ಮೇಜು, ಪಾತ್ರೆಗಳು, ಹಣ್ಣು ಹಂಪಲು, ಜ್ಯೂಸ್‌ ಬಾಟಲಿ ಮತ್ತು ಸುತ್ತಲೂ ಇರುವ ಕುರ್ಚಿ ಸಮೇತ ಉಲ್ಟಾ ಕಾಣಿಸುತ್ತದೆ. ಇನ್ನೇನು ತಲೆಯ ಮೇಲೆ ಬೀಳುತ್ತವೆಯೇನೋ ಎಂಬಂತೆ ಭಾಸವಾಗುತ್ತವೆ.

ಎಸಿ, ಫ್ರಿಡ್ಜ್, ಬೆಡ್‌ ರೋಮ್‌ನಲ್ಲಿ ಮಂಚ, ಹಾಸಿಗೆ ಹೀಗೆ ಎಲ್ಲವೂ ತಲೆಯ ಮೇಲೆಯ ನೇತಾಡುತ್ತವೆ. ಹಾಲ್‌ನಲ್ಲಿ ಗೋಡೆಗಂಟಿಕೊಂಡಿರುವ ಟಿವಿಯಲ್ಲಿನ ಕಾರ್ಯಕ್ರಮದ ಪ್ರಸಾರವೂ ಕೂಡ ಉಲ್ಟಾ ಕಾಣಿಸುತ್ತದೆ. ವೀಕ್ಷಕರಿಗೆ ಒಂದು ಕ್ಷಣ ಬಾಹ್ಯಾಕಾಶ ಲೋಕಕ್ಕೆ ಕಾಲಿಟ್ಟಂತೆ ಭಾಸವಾಗುವುದಂತೂ ಸತ್ಯ. ಭೇಟಿ ನೀಡುವವರು ವಿವಿಧ ಭಂಗಿಯಿಂದ ಫೋಟೋ ಕ್ಲಿಕ್ಕಿಸಿ ಸಂಭ್ರಮಿಸುತ್ತಾರೆ. ಅಲ್ಲದೇ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುವುದರಿಂದ ಇಂತಹ ಮನೆಗಳ ಜನಪ್ರಿಯತೆ ಇನ್ನು ಷ್ಟು ಹೆಚ್ಚುತ್ತಿದೆ.

ಅಂತಹ ಕೆಲವು ಮನೆಗಳನ್ನು ನಾವಿಲ್ಲಿ ಕಾಣಬಹುದು.
1. ರಷ್ಯಾದ ಉಫಾ ನಗರದಲ್ಲಿರುವ ಮನೆ
ಇದು ಜಗತ್ತಿನಾದ್ಯಂತ ಈಗ ನಿರ್ಮಾಣವಾಗಿರುವ ಉಲ್ಟಾ ಮನೆಗಳಲ್ಲೇ ರಷ್ಯಾದ ಉಫಾನಗರದ ಮನೆ ಅತ್ಯಂತ ದೊಡ್ಡದು. ಸುಮಾರು 300 ಚದರ ಮೀ. ಅಳತೆಯಲ್ಲಿ ಇದನ್ನು ನಿರ್ಮಿಸಲಾಗಿದೆ. ಇದೊಂದು ಮ್ಯೂಸಿಯಂ ಆಗಿದೆ. ಒಂದೇ ಕ್ಷಣಕ್ಕೆ 50 ಜನ ಮನೆಯೊಳಗೆ ನಿಲ್ಲುವಷ್ಟು ದೊಡ್ಡದಾಗಿದೆ.

2. ಹೌಸ್‌ ಅಟ್ಯಾಕ್‌
ಆಸ್ಟ್ರೀಯಾದ ವಿಯೆನ್ನಾ ನಗರದ ಪ್ರಮುಖ ವಸ್ತು ಸಂಗ್ರಹಾಲಯವಾಗಿರುವ ಇದನ್ನು ಇರ್ವಿನ್‌ ವಾರ್ಮ್ ಅವರು ನಿರ್ಮಾಣ ಮಾಡಿದ್ದಾರೆ. ಮನೆಯೊಂದು ವಸ್ತುಸಂಗ್ರಹಾಲಯವನ್ನು ಆಕ್ರಮಣ ಮಾಡುವಂತೆ ಭಾಸವಾಗುತ್ತದೆ. ಇದರ ಮೂಲ ಉದ್ದೇಶ ಆಸ್ಟ್ರೀಯದ ಮೇಲೆ ಯುದ್ಧ ಸಾರುವ ಉದ್ದೇಶದಿಂದ ಮನೆಯ ಮೇಲೆ ಎಸೆಯಲಾಗಿದ್ದ ಬಾಂಬ್‌ನ ದೃಶ್ಯವನ್ನು ನೆನಪಿಸುವುದಾಗಿದೆ.

Advertisement

3. ವೈಟ್‌ ಹೌಸ್‌, ಬುಟಮಿ
ಅಮೆರಿಕದ ಜಾರ್ಜಿಯ ರಾಜ್ಯದ ಬುುಟಮಿಯ ಈ ಕಟ್ಟಡ ಅಮೇರಿಕದ ವೈಟ್‌ಹೌಸ್‌ನ್ನೇ ಹೋಲುವಂತಿದೆ. ಮೂಲತಃ ಇದೊಂದು ಮೂರ ಅಂತಸ್ತಿನ ರೆಸ್ಟೋರೆಂಟ್‌ ಆಗಿದ್ದು ಜನರನ್ನು ಆಕರ್ಷಿಸುತ್ತಿದೆ.

4. ವಾಸ್ತು ಶಿಲ್ಪದ ಮ್ಯೂಸಿಯಂ
ಉತ್ತರ ಪೋಲೆಂಡ್‌ನ‌ ಸಿಂಬಾರ್ಕ್‌ನಲ್ಲಿ ಇರುವ ಈ ಕಟ್ಟಡ ಶಿಕ್ಷಣ ಮತ್ತು ಪ್ರಚಾರ ಕೇಂದ್ರವಾಗಿದ್ದು, ಇದೊಂದು ಮ್ಯೂಸಿಯಂ. ಇಲ್ಲಿ ಜನಪದ ವಾಸ್ತು ಶಿಲ್ಪದ ಅಧ್ಯಯನ ಮಾಡಲಾಗುತ್ತದೆ.

5. ಉಲ್ಟಾ ಚರ್ಚ್‌
ಈ ಉಲ್ಟಾ ಚರ್ಚ್‌ನ್ನು ಕೆನಡಾದ ವ್ಯಾಂಕೋವರ್‌ನಲ್ಲಿದೆ. ಚರ್ಚ್‌ ಒಂದನ್ನು ತಿರುವು ಮುರವಾಗಿ ನಿರ್ಮಿಸಲಾಗಿದೆ. ಇದನ್ನು ನೋಡಲು ಯಾವುದೇ ಶುಲ್ಕ ಇಲ್ಲವಾದ್ದರಿಂದ ಉಚಿತವಾಗಿ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶವಿದೆ.

6. ಹೌಸ್‌ ಆಫ್ ಕಠ್ಮಂಡು
ಇದು ಕಠ್ಮಂಡುವಿನಲ್ಲಿರುವ ಒಂದು ಥೀಮ್‌ ಪಾರ್ಕ್‌ ಆಗಿದೆ. ಇಡಿ ಥೀಮ್‌ ಪಾರ್ಕ್‌ ಉಲ್ಟಾ ಇದ್ದು. ಮಕ್ಕಳೊಂದಿಗೆ ವಾರಾಂತ್ಯ ಕಳೆಯಲು ಹೇಳಿ ಮಾಡಿಸಿದಂತಹ ಸ್ಥಳ.


– ಶಿವಾನಂದ ಎಚ್‌.

Advertisement

Udayavani is now on Telegram. Click here to join our channel and stay updated with the latest news.

Next